ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಐಕ್ಯ ಹೋರಾಟ ಸಮಿತಿಯ ವತಿಯಿಂದ ಮಾನ್ವಿ ಬಂದ್…!!!

Listen to this article

ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಐಕ್ಯ ಹೋರಾಟ ಸಮಿತಿಯ ವತಿಯಿಂದ ಮಾನ್ವಿ ಬಂದ್…
ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ಒಳಮೀಸಲಾತಿ ಜಾರಿ ಗಾಗಿ ಒತ್ತಾಯಿಸಿ ಐಕ್ಯ ಹೋರಾಟ ಸಮಿತಿಯ ವತಿಯಿಂದ ನಡೆದ ಮಾನ್ವಿ ಬಂದ್ ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡರಾದ ಬಾಲಸ್ವಾಮಿಕೊಡ್ಲಿ ಮಾತನಾಡಿ ರಾಜ್ಯದಲ್ಲಿ ಮಾದಿಗ ಹಾಗೂ ಚಲುವಾದಿ ಸಂಬಂದಿತ ಪ.ಜಾತಿ ಯವರಿಗೆ ಜನಸಂಖ್ಯೆಗೆ ಅನುಗುಣವಾಗಿ ಶೇ 15ರಲ್ಲಿ ಸಮನಾವಾಗಿ ಹಂಚಿಕೆ ಮಾಡುವಂತೆ ನ್ಯಾಯಮೂರ್ತಿ ಸದಾಶಿವ ಆಯೋಗ ನೀಡಿದ ವರದಿಯನ್ನು ಇದುವರೆಗೂ ರಾಜ್ಯ ಸರಕಾರ ಜಾರಿ ಮಾಡದೆ ಇರುವುದರಿಂದ ಪ.ಜಾತಿಯಲ್ಲಿನ 101 ಜಾತಿಗಳಿಗೆ ಶೇ15 ರಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡುತ್ತಿರುವುದರಿಂದ ಬಹುಸಂಖ್ಯೆತರಾಗಿರುವ ಆಸ್ಪರ್ಶ ಮಾದಿಗ ಮತ್ತು ಮಾಲಾ ಸಮು ದಾಯಕ್ಕೆ ಅನ್ಯಾಯವಾಗುತ್ತಿದೆ ಸ್ಪರ್ಶ ಸಮು ದಾಯಗಳಾದ ಭೋವಿ,ಲಮಾಣಿ,ಕೊರಮ,ಕೊರ ವಬೇಡ ಜಂಗಮ, ಅಲೆಮಾರಿಗಳಿಗೂ ಕೂಡ ಸಮಪಾಲು
ದೊರೆಯುತ್ತಿರುವುದರಿಂದ ಅನ್ಯಾಯವಾಗುತ್ತಿರುವುದನ್ನು ಕಂಡು ನಮ್ಮ ಮನವಿಯಂತೆ ಸುಪ್ರೀಂ ಕೋರ್ಟ ಸದಾಶಿವ ಅಯೋಗದ ವರದಿಯನ್ನು ರಾಜ್ಯದಲ್ಲಿ ಜಾರಿಗೆ ತರುವಂತೆ ಆದೇಶ ನೀಡಿದರು ಕೂಡ ಇದುವರೆಗೂ ಜಾರಿಗೆ ಮಾಡಿಲ್ಲ ಕೂಡಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದಾಶಿವ ಅಯೋಗದ ವರದಿ ಹಾಗೂ ಸುಪ್ರಿಂ ಕೋರ್ಟ ತಿರ್ಪಿನಂತೆ ಕೂಡಲೆ ಆಸ್ಪರ್ಶ ಮಾದಿಗ ಸಮುದಾಯಕ್ಕೆ ಶೇ 6 ಮತ್ತು ಮಾಲಾ ಸಮುದಾಯಕ್ಕೆ ಶೇ5 ರಷ್ಟು ಹಂಚಿಕೆ ಮಾಡುವಂತೆ ಒತ್ತಾಯಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಯಾರ್ ವೃತ್ತದ ಬಳಿ ಡಾ.ಬಿ.ಆರ್. ಅಂಬೇಡ್ಕಾರ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಬಸವ ವೃತ್ತದ ವರೆಗೆ ನೂರಾರು ಸಮುದಾಯದವರು ಪ್ರತಿಭಟನೆ ಮೆರವಣಿಗೆ ನಡೆಸಿ ಬಸವವೃತ್ತದಲ್ಲಿ ಪ್ರತಿಭಟನೆ ಧರಣಿ ನಡೆಸಿದರು

ಪ್ರತಿಭಟನೆಯಲ್ಲಿ ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಐಕ್ಯ ಹೋರಾಟ ಸಮಿತಿಯ ಮುಖಂಡರು ಇದ್ದರು…

ವರದಿ. ಲಿಂಗರಾಜ್ ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend