ಹೊಳಲ್ಕೆರೆ ಪತ್ರಕರ್ತರ ಸಂಘದ ನಡೆದ ಗಾಂಧಿ ಜಯಂತಿಯಲ್ಲಿ ಗಾಂಧಿಜಿಯವರ ಬಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಲಾಗಿತ್ತು…!!!

Listen to this article

ಹೊಳಲ್ಕೆರೆ : ಅಹಿಂಸೆ ಸಂದೇಶವನ್ನು ವಿಶ್ವಸಾರಿದ ಭಾರತದ ಪೀತಾಮಹ ಮಹತ್ಮಗಾಂಧಿ ಚಿಂತನೆಗಳನ್ನು ಸಕಾರಗೊಳಿಸಲು ಸರಕಾರಗಳು ಗಾಂಧಿಜೀ ಹೆಸರಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂದು ವಕೀಲ ಎಸ್.ವೇದಮೂರ್ತಿ ಅಭಿಪ್ರಾಯಪಟ್ಟರು.
ಅವರು ಪತ್ರಕರ್ತರ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರು ಹಾಗೂ ಪತ್ರಿಕಾ ವಿತರಕರು ಹಮ್ಮಿಕೊಂಡಿದ್ದ ಮಹತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸತ್ಯಕ್ಕಾಗಿ ಹೋರಾಟ ಕೈಗೊಂಡ ಗಾಂಧಿಜಿ ದೇಶವನ್ನು ಅಂಗ್ಲರ ದಾಸ್ಯದಿಂದ ಬಿಡುಗಡೆಗೊಳಿಸಿ ಪ್ರಜಾಪ್ರಭುತ್ವ ಸಿದ್ದಾಂತದ ಭಾರತ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಜಾತಿ ಧರ್ಮ ಎನ್ನದೆ ಎಲ್ಲರನ್ನು ಒಟ್ಟುಗೊಡಿಸಿಕೊಂಡು ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ್ದಾರೆ. ಅವರ ಅದರ್ಶಗಳು ಎಂದಿಗೂ ಚಿರಸ್ಥಾಯಿ ಎಂದರು.
ಸ್ವಚ್ಚ ಭಾರತ ಯೋಜನೆ ಕೇವಲ ರಸ್ತೆ, ಚರಂಡಿ ಸ್ವಚ್ಚತೆಯಲ್ಲ. ದೇಶದಲ್ಲಿರುವ ಭ್ರಷ್ಟಚಾರ ಸ್ವಚ್ಚವಾಗಬೇಕು. ಭಯೋತ್ಪದನೆ ನಿರ್ಮೂಲನೆ, ಜಾತಿ ಮತ ಪಥ ಧರ್ಮ ತಾರತಮ್ಯ ನಿವಾರಣೆಯಾಗಬೇಕು. ದೇಶ ನಿವಾಸಿಗಳಿಗೆ ಸಮಾನ ಸೌಲಭ್ಯಗಳು ಸಿಕ್ಕಬೇಕು. ಬಡತನ ನಿರುದ್ಯೂಗ ನಿವಾರಿಸಿ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಜಾಗತಿಕ ಮಟ್ಟದಲ್ಲಿ ಬೆಳೆದು ನಿಲ್ಲಬೇಕು. ಮಹತ್ಮ ಗಾಂಧಿ ದೇಶಕ್ಕೆ ತಂದುಕೊಟ್ಟು ಸ್ವಾತಂತ್ರ್ಯಕ್ಕೆ ಒಂದು ಆರ್ಥಬರಲಿದೆ ಎಂದರು.
ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎ.ಜಯಣ್ಣ ಮಾತನಾಡಿ, ಶಿಕ್ಷಣದಲ್ಲಿ ಮಹಾತ್ಮಗಾಂಧಿಜಿಯವರ ಸಾಧನೆಗಳನ್ನು ಮಕ್ಕಳಿಗೆ ತಿಳಿಸುತ್ತಿದ್ದೇವೆ. ಗಾಂಧಿ ಆಧರ್ಶಗಳು ಮನುಕುಲ ಬದುಕಿಗೆ ಅಳವಡಿಸಿಕೊಳ್ಳಬೇಕು. ಪತ್ರಕರ್ತರು ತಾಲೂಕಿನ ಅಭಿವೃದ್ಧಿಗೆ ಸುದ್ದಿಗಳನ್ನು ಬರೆದು ಜಾಗೃತಿ ಮೂಡಿಸುತ್ತಿದ್ದಾರೆ. ಸರಿತಪ್ಪುಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಉಪಾಧ್ಯಕ್ಷ ಎ.ಚಿತ್ತಪ್ಪ ಮಾತನಾಡಿ, ಮಹತ್ವ ಗಾಂಧಿ ಶಾಂತಿ ಸಂದೇಶ, ಸತ್ಯಾಗ್ರಹ ಸತ್ಯಕ್ಕಾಗಿ ಹೋರಾಟ ಕಲಿಸಿದೆ. ಅಹಿಂಸೆಯ ಮಾರ್ಗ ವಿಶ್ವಕ್ಕೆ ಬೇಕು. ವಿಶ್ವದಲ್ಲಿ ಉಂಟಾಗಿರುವ ಅಶಾಂತಿ ಶಮನಕ್ಕೆ ಗಾಂಧಿಜಿಯವರ ಮಾರ್ಗ ಅಗತ್ಯ ಎಂದು ಆಭಿಪ್ರಾಯಪಟ್ಟರು.
ಪತ್ರಕರ್ತರಾದ ಸುರೇಶ್ ಆವಿನಹಟ್ಟಿ, ನಾಗರಾಜ್, ಮದು ನಾಗರಾಜ್ ಹದಡಿ, ವಿತರಕರ ಸಂಘದ ಅಧ್ಯಕ್ಷ ತಿಪ್ಪೇರುದ್ರಪ್ಪ, ಗೌರವಾಧ್ಯಕ್ಷ ವಿರುಪಾಕ್ಷಪ್ಪ, ರವಿ, ಶಿವಣ್ಣ, ಸೇರಿದಂತೆ ಹಲವಾರು ಪತ್ರಕರ್ತರು ವಿತರಕರು ಇದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend