ಬಳ್ಳಾರಿ ನಗರದಲ್ಲಿ “ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ”ಭಾಗವಹಿಸಿದ ಸನ್ಮಾನ್ಯ ಶ್ರೀ ಈ ತುಕಾರಾಮ್ ಸಂಸದರು…!!!

Listen to this article

ಬಳ್ಳಾರಿ ನಗರದಲ್ಲಿ “ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯಲ್ಲಿ”ಭಾಗವಹಿಸಿದ ಸನ್ಮಾನ್ಯ ಶ್ರೀ ಈ ತುಕಾರಾಮ್ ಸಂಸದರು…

ದಿನಾಂಕ 02-10-2024 ರಂದು ಬಳ್ಳಾರಿ ನಗರದ ಜಿಲ್ಲಾಧಿಕಾರಿಗಳ ಆವರಣದ ಕಛೇರಿಯಲ್ಲಿ ಜಿಲ್ಲಾಡಳಿತ ವತಿಯಿಂದ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜಯಂತಿಯನ್ನು ಆಚರಿಸಲಾಯಿತು.
ಸದರಿ ಕಾರ್ಯಕ್ರಮದಲ್ಲಿ “ಅಹಿಂಸಾ ವಾದಿ” ಸನ್ಮಾನ್ಯ ಶ್ರೀ ಈ ತುಕಾರಾಮ್ ಸಂಸದರು ಮಾತನಾಡಿ ” ಇತಿಹಾಸ ಮರೆತವರು ಇತಿಹಾಸ ಸೃಷ್ಟಿಸಲಾರರು” ಎಂಬಂತೆ ನಾವು ಏನನ್ನಾದರೂ ಸಾಧಿಸಬೇಕೆಂದರೆ ಮೊದಲು ನಮಗೆ ಇತಿಹಾಸದ ಅರಿವು ಇರಬೇಕು. ಗಾಂಧೀಜಿ ಅವರ ಅಹಿಂಸೆ, ಸತ್ಯ, ಹೋರಾಟ,ಸಮಾನತೆ, ಸಹೋದರತೆ ಮುಂತಾದ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ನಾವು ಸಾಧನೆಯೊಂದಿಗೆ ಇತಿಹಾಸ ಸೃಷ್ಟಿಸಬಹುದು. ನಾನು ಈ ಆದರ್ಶಗಳನ್ನು ಅಳವಡಿಸಿಕೊಂಡ ಪ್ರಯುಕ್ತ ಇಂದು ಒಂದು ಉತ್ತಮ ಸ್ಥಾನದಲ್ಲಿರಲು ಸಾಧ್ಯವಾಗಿದೆ,
ಅದರಂತೆ ಲಾಲ್ ಬಹದ್ದೂರ್ ಶಾಸ್ತ್ರಿಯವರ “ಜೈ ಜವಾನ್ ಜೈ ಕಿಸಾನ್” ವಾಕ್ಯಾನದಂತೆ ಸೈನಿಕರು ಮತ್ತು ರೈತರಿಗೆ ಮಹತ್ವ ನೀಡಬೇಕು.ಇವರೀರ್ವರ ಹೋರಾಟ, ತ್ಯಾಗ, ಬಲಿದಾನದ ಫಲವಾಗಿ ಇಂದು ನಾವು ಸ್ವಾತಂತ್ರ ಭಾರತದ ಪ್ರಜೆಗಳಾಗಿದ್ದೇವೆ, ನಾವು ಇಂತಹ ಮಹಾನಿಯರ ದಿನಾಚರಣೆಯನ್ನು ಆಚರಿಸುವುದರೊಂದಿಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸೋಣ ” ಎಂದು ಸರ್ವರಿಗೂ ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳನ್ನು ಹೇಳಿದರು.
ಮತ್ತು ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು.ಶ್ರೀ ನಾರಾ ಭರತ್ ರೆಡ್ಡಿ ಬಳ್ಳಾರಿ ನಗರ ಶಾಸಕರು, ಶ್ರೀ ಮುಡಂಗ್ರಿ ನಾಗರಾಜ ಚರ್ಮಗಾರಿಕೆ ಅಧ್ಯಕ್ಷರು, ಶ್ರೀ ಆಂಜನೇಯಲು ಬುಡ ಅಧ್ಯಕ್ಷರು, ಶ್ರೀ ಅಲ್ಲo ಪ್ರಶಾಂತ ಬಳ್ಳಾರಿ ನಗರದ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರು,ಶ್ರೀ ಕೆ. ಎಲ್. ಸ್ವಾಮಿ ಮಾಜಿ ವಿಧಾನ ಪರಿಷತ್ತು ಸದಸ್ಯರು, ಶ್ರೀ ಮುಲ್ಲoಗಿ ನಂದೀಶ್ ಬಳ್ಳಾರಿ ಮೇಯರ,ಶ್ರೀ ಶಿವಯೋಗಿ ಬಳ್ಳಾರಿ ಗ್ರಾಮೀಣ ಜಿಲ್ಲಾಧ್ಯಕ್ಷರು,ಜನ ಪ್ರತಿನಿಧಿಗಳು, ನಗರದ ಪ್ರಮುಖ ಮುಖಂಡರು, ಕಾರ್ಯಕರ್ತರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು…

ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend