ಮಾನಸಿಕ ಒತ್ತಡ ನಿಗ್ರಹಿಸಿಕೊಂಡು, ಮರೆವು ಖಾಯಿಲೆ ದೂರಗೊಳಿಸಿ; ನ್ಯಾ.ರಾಜೇಶ್.ಎನ್ ಹೊಸಮನೆ…!!!

Listen to this article

ಮಾನಸಿಕ ಒತ್ತಡ ನಿಗ್ರಹಿಸಿಕೊಂಡು, ಮರೆವು ಖಾಯಿಲೆ ದೂರಗೊಳಿಸಿ; ನ್ಯಾ.ರಾಜೇಶ್.ಎನ್ ಹೊಸಮನೆ

ಬಳ್ಳಾರಿ:ದೈನಂದಿನ ಕಾರ್ಯದ ನಿಮಿತ್ತ ಮಾನಸಿಕ ಒತ್ತಡದಿಂದ ಮರೆವು ಖಾಯಿಲೆ ಉದ್ಭವಿಸುವ ಸಂಭವವಿದ್ದು, ಮಾನಸಿಕ ಒತ್ತಡಗಳನ್ನು ನಿಗ್ರಹಿಸಿಕೊಂಡು ವೃದ್ಧಾಪ್ಯ ವಯೋಮಾನದಲ್ಲಿ ಆರೋಗ್ಯ ಜೀವನ ರೂಪಿಸಿಕೊಳ್ಳಿ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳಾದ ರಾಜೇಶ್.ಎನ್ ಹೊಸಮನೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮ, ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರ, ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆಸ್ಪತ್ರೆಯ ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಾಗತಿಕ ಆಲ್ಜೆಮರ್ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಕೆಲಸದ ಒತ್ತಡದಿಂದ ಚಿಕ್ಕ ವಯಸ್ಸಿನ ಮಕ್ಕಳಿಂದ ಹಿಡಿದು ಯುವಕರು ಮತ್ತು ಹಿರಿಯರಲ್ಲಿ ಮರೆವು ಖಾಯಿಲೆ ಕಂಡು ಬರುತ್ತಿದ್ದು, ಯೋಗ, ಧ್ಯಾನ, ವ್ಯಾಯಾಮ, ಪ್ರಾಣಾಯಾಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ದೈನಂದಿನ ಚಟುವಟಿಕೆ ಆರಂಭಿಸಿ ಮೆದುಳಿಗೆ ಸಂಬoಧಿಸಿದ ಖಾಯಿಲೆಗಳಿಂದ ಮುಕ್ತರಾಗಬೇಕು ಎಂದು ತಿಳಿಸಿದರು.
ಸಮಾಜದಲ್ಲಿನ ಹಿರಿಯರನ್ನು ಗೌರವಿಸುವುದು ಭಾರತ ದೇಶದ ಸಂಸ್ಕಾರವಾಗಿದ್ದು, ಮುಪ್ಪಿನ ಕಾಲದಲ್ಲಿ ಹಿರಿಯರಿಗೆ ಹಲವು ಖಾಯಿಲೆ ಬರುವುದು ಸಹಜವಾಗಿದೆ. ಅಂತಹ ಸಮಯದಲ್ಲಿ ಹಿರಿಯರ ಆರೈಕೆ ಮಾಡುತ್ತಾ ಮಮತೆಯಿಂದ ಸ್ಪಂದಿಸಿ, ಸಂತಸದಿAದ ಬೆರೆತು ಜೀವನ ಮುನ್ನಡೆಸಬೇಕು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ ರಮೇಶ್ ಬಾಬು ಮಾತನಾಡಿ, ವಯೋಮಾನ ಸಮಯದಲ್ಲಿ ಅರಳು-ಮರಳು ಎನ್ನುವ ಗಾದೆ ಮಾತಿನಂತೆ ಹಿರಿಯರಿಗೆ ಅರವತ್ತು ವಯಸ್ಸು ಆದಂತೆ ಮರೆವು ಖಾಯಿಲೆ ಹೆಚ್ಚಾಗುತ್ತದೆ. ವೃದ್ಯಾಪ್ಯ ವಯಸ್ಸಿನಲ್ಲಿಯೂ ಸಹ ಕ್ರಿಯಾಶೀಲರಾಗಿ ಜೀವನ ನಡೆಸಬೇಕು ಎಂದು ಹಿರಿಯರಿಗೆ ಹುರಿದುಂಬಿಸಿದರು.
ಯುವಕರು ಹಾಗೂ ಜನಸಾಮಾನ್ಯರು ಹಿರಿಯ ನಾಗರಿಕರಿಗೆ ಸಹಾಯ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಸುಸ್ಥಿರ ಆರೋಗ್ಯ ಜೀವನ ಸಾಗಿಸಲು ಯೋಗ, ಧ್ಯಾನ, ಕಪಿಲಭಾತಿ ಪ್ರಾಣಾಯಮ ರೂಢಿಸಿಕೊಳ್ಳಬೇಕು ಎಂದರು.
ಜಿಲ್ಲಾ ಶಸ್ತ ಚಿಕಿತ್ಸಕ ಡಾ.ಬಸರೆಡ್ಡಿ.ಎನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮೆದುಳಿನ ಶಕ್ತಿ ಕಡಿಮೆಯಾದಂತೆ, ದೈನಂದಿನ ಕೆಲಸಗಳ ಒತ್ತಡದಿಂದ ಮರೆವು ಖಾಯಿಲೆ ಹೆಚ್ಚಾಗುತ್ತದೆ. ಒತ್ತಡಗಳ ಆಲೋಚನೆಗಳನ್ನು ನಿಯಂತ್ರಿಸಿಕೊoಡು ಜೀವನ ನಡೆಸುವುದೇ ಮರೆವು ಖಾಯಿಲೆಗೆ ಒಳ್ಳೆ ಔಷಧಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅನುಷ್ಠಾನ ಅಧಿಕಾರಿ ಹಾಗೂ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ವೀರೇಂದ್ರ ಕುಮಾರ್.ಕೆ.ಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಮರೆವು ಖಾಯಿಲೆ ವಯೋವೃದ್ಧರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವ್ಯವಸ್ಥಿತವಾಗಿ ದಿನಚರಿ ರೂಪಿಸಿಕೊಂಡು, ಮಾನಸಿಕ ಒತ್ತಡಗಳಿಗೆ ಒಳಗಾಗದೆ ಆರೋಗ್ಯವಂತರಾಗಬೇಕು ಎಂದರು.
ಜಿಲ್ಲಾ ಆಸ್ಪತ್ರೆಯಲ್ಲಿ ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ಮೆದುಳು ಸಂಬoಧಿಸಿದ ರೋಗಿಗಳಿದ್ದಲ್ಲಿ ತಜ್ಞ ವೈದ್ಯರೊಂದಿಗೆ ಸಮಾಲೋಚನೆಗೆ ಒಳಪಟ್ಟು ಔಷಧೋಪಚಾರ ಪಡೆಯಬಹುದು ಎಂದು ತಿಳಿಸಿದರು.
ಪ್ರಶಸ್ತಿ ವಿತರಣೆ:
ಜಾಗತಿಕ ಆಲ್ಜೆಮರ್ ದಿನದ ಅಂಗವಾಗಿ ಆಯೋಜಿಸಿದ್ದ ಮೆದುಳು ಚುರುಕುಗೊಳಿಸುವ ಸ್ಪರ್ಧೆಗಳಲ್ಲಿ ವಿಜೇತರಾದ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ ವಿ.ಕೆ., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿಗಳಾದ ಡಾ.ವಿಶ್ವನಾಥ.ಕೆ., ಡಾ.ಯೋಗಾನಂದ ರೆಡ್ಡಿ, ಮೆದುಳಿನ ಆರೋಗ್ಯ ಚಿಕಿತ್ಸಾ ಕೇಂದ್ರದ ತಜ್ಞ ವೈದ್ಯ ಹಾಗೂ ನೋಡಲ್ ಅಧಿಕಾರಿ ಡಾ.ರಾಕೇಶ್, ಜಿಲ್ಲಾ ಆಸ್ಪತ್ರೆಯ ಶುಶ್ರೂಷಾಧೀಕ್ಷಕಿ ವಿಮಲಾಕ್ಷಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ.ಹೆಚ್ ದಾಸಪ್ಪನವರ, ಕರ್ನಾಟಕ ಮೆದುಳಿನ ಆರೋಗ್ಯ ಉಪಕ್ರಮದ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸಣ್ಣಕೇಶವ ಸೇರಿದಂತೆ ಜಿಲ್ಲಾ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಹಿರಿಯ ನಾಗರಿಕರು ಮತ್ತು ಇತರರು ಉಪಸ್ಥಿತರಿದ್ದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend