ಹಿಮ್ಸ್ ಸಂಸ್ಥೆಯಲ್ಲಿ ಸ್ವಚ್ಛತಾ ಹೈ ಸೇವಾ ಹಾಗೂ ಏಕ್ ಪೇಡ್ ಮಾ ಕೀ ನಾಮ್ ಕಾರ್ಯಕ್ರಮ…!!!

Listen to this article

ಹಿಮ್ಸ್ ಸಂಸ್ಥೆಯಲ್ಲಿ ಸ್ವಚ್ಛತಾ ಹೈ ಸೇವಾ ಹಾಗೂ ಏಕ್ ಪೇಡ್ ಮಾ ಕೀ ನಾಮ್ ಕಾರ್ಯಕ್ರಮ
ಹಾಸನ:- ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಎಕೋ ಕ್ಲಬ್ ವತಿಯಿಂದ ನೆಹರು ಯುವ ಕೇಂದ್ರ ಇವರ ಸಹಭಾಗಿತ್ವದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಭಾರತ ಸರ್ಕಾರ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ನಿರ್ದೇಶನದಂತೆ ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಹೈ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಸಂಸ್ಥೆಯ ಸುಮಾರು 700ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಿಮ್ಸ್ ಸಂಸ್ಥೆಯ ಕಾಲೇಜು ಹಾಗೂ ಅಸ್ಪತ್ರೆಯ ಒಳಾಂಗಣ ಆವರಣ ಹಾಗೂ ಹೊರ ಆವರಣವನ್ನು ಸ್ವಚ್ಛತೆಗೊಳಿಸಿದರು. ಈ ಕಾರ್ಯಕ್ಕೆ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳನ್ನು ಕಾವೇರಿ, ಕಬಿನಿ, ಕೃಷ್ಣ ಹಾಗೂ ಹೇಮಾವತಿ ಎಂದು ನಾಲ್ಕು ತಂಡಗಳಾಗಿ ವಿಂಗಡಿಸಿ, ಅತ್ಯುತ್ತಮವಾಗಿ ಸ್ವಚ್ಛತೆ ಮಾಡಿದ ತಂಡಗಳಿಗೆ ಗಾಂಧಿ ಜಯಂತಿ ದಿನಾಚರಣೆಯಂದು ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಎಂದು ನಗದು ಬಹುಮಾನವನ್ನು ನೀಡಲಾಗುವುದು.
ಇದೇ ಸಂದರ್ಭದಲ್ಲಿ 3 ತಿಂಗಳ ಹಿಂದೆ ಹಿಮ್ಸ್ ಅಸ್ಪತ್ರೆಯಲ್ಲಿ ಅಂಗಾoಗ ದಾನ ಮಾಡಿದ ಕು.ಚಂದನ ಎಂಬ 13 ವರ್ಷದ ಬಾಲಕಿಯ ನೆನಪಿಗಾಗಿ 13 ಶ್ರೀಗಂಧದ ಗಿಡಗಳನ್ನು ನೆಟ್ಟು ಅದಕ್ಕೆ ಚಂದನವನ ಎಂದು ಹೆಸರಿಡಲಾಯಿತು ಮತ್ತು ಈ ವನದ ಉದ್ಘಾಟನೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಕು.ಚಂದನ ಇವರ ಪೋಷಕರಾದ ಶ್ರೀ.ವಸಂತ್ ಮತ್ತು ಶ್ರೀಮತಿ. ದಿವ್ಯಾ ಹಾಗೂ ತಾತ ದೇವರಾಜಯ್ಯ ಇವರು ಉಪಸ್ಥಿತರಿದ್ದರು. ವಸಂತ್ ಇವರು ಮಾತನಾಡಿ ನಮ್ಮ ಮಗಳ ಅಂಗಾoಗವನ್ನು ದಾನ ಮಾಡಿರುವುದರಿಂದ ಇನ್ನೋಬ್ಬರ ಜೀವದಲ್ಲಿ ಬೆಳಕಾಗಿದ್ದಾಳೆ, ಇವಳ ಸಾರ್ಥಕ ಜೀವನ ಶ್ರೀಗಂಧದoತೆ ಪಸರಿಸಲಿ ಮತ್ತು ಹಿಮ್ಸ್ ಸಂಸ್ಥೆಯು ತಮ್ಮ ಮಗಳ ಹೆಸರಿನಲ್ಲಿ ಇಂತಹ ಮಹತ್ಕಾರ್ಯ ಮಾಡಿರುವುದು ನಮಗೆಲ್ಲರಿಗೂ ಅತೀವ ಸಂತೋಷವಾಗಿದೆ ಎಂದು ಹೇಳಿದರು.

ಹಿಮ್ಸ್ ಸಂಸ್ಥೆಯ ನಿರ್ದೇಶಕರಾದ ಡಾ.ರಾಜಣ್ಣ.ಬಿ ಇವರು ಮಾತನಾಡಿ ಸಂಸ್ಥೆಯಲ್ಲಿ ನಡೆದ ಮೊದಲ ಅಂಗಾAಗದಾನ ಇದಾಗಿದ್ದು ಇದರ ನೆನಪಿಗಾಗಿ ಸಂಸ್ಥೆಯಲ್ಲಿ ಚಂದನವನವನ್ನು ನಿರ್ಮಾಣ ಮಾಡಲಾಗಿದೆ, ಇದರಿಂದ ಕು. ಚಂದನಾ ಇವರನ್ನು ಪ್ರತಿದಿನ ನೆನಪಿಸುವಂತಾಗಲಿ ಮತ್ತು ಪ್ರತಿಯೊಬ್ಬರು ಈ ಕಾರ್ಯದಲ್ಲಿ ಮುನ್ನಡೆಯಬೇಕು ಎಂದರು.
ಅಂತೆಯೇ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಏಕ್ ಪೇಡ್ ಮಾ ಕೀ ನಾಮ್ ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಆವರಣದಲ್ಲಿ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ತಮ್ಮ ತಮ್ಮ ತಾಯಿಯ ಹೆಸರಿನಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು ಮತ್ತು ಈ ಕಾರ್ಯಕ್ರಮದಲ್ಲಿ ತಮ್ಮ ಭಾವನಾತ್ಮಕ ಸಂಬoಧಗಳ ಮೂಲಕ ಗಿಡ-ಮರಗಳನ್ನು ನೆಡುವ ಜೊತೆಗೆ, ಅದನ್ನು ಬೆಳೆಸಿ ಪೋಷಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುವಂತೆ ತೀರ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಎಕೋ ಕ್ಲಬ್ ಅಧ್ಯಕ್ಷರಾದ ಡಾ. ರವಿಕುಮಾರ್ ಬಿ.ಸಿ., ವೈದ್ಯಕೀಯ ಅಧೀಕ್ಷಕರಾದ ಡಾ. ರಾಘವೇಂದ್ರ ಪ್ರಸಾದ್, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಲೋಕೇಶ್.ಹೆಚ್.ಸಿ., ನಿವಾಸಿ ವೈದ್ಯಾಧಿಕಾರಿಗಳಾದ ಡಾ.ಪ್ರವೀಣ್.ಜಿ, ಡಾ.ಚೆನ್ನವೀರಪ್ಪ ಪಿ.ಕೆ, ಶ್ರುಶ್ರೂಷಕ ಅಧೀಕ್ಷಕರಾದ ಪ್ರೇಮಲತಾ, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾದ ನಿಚಿತಾಕುಮಾರಿ, ಯುವ ಕೇಂದ್ರದ ಸಂಯೋಜನಾಧಿಕಾರಿಗಳಾದ ಹರೀಶ್, ಎಕೋಕ್ಲಬ್ ಸದಸ್ಯರಾದ ಡಾ. ಪುರುಷೋತ್ತಮ್, ಆರ್. ಡಾ. ಬಿಂದು.ಸಿ.ಬಿ., ಡಾ. ಜಯಶ್ರೀ. ನಾಗರಾಳ, ಡಾ.ಪವಿತ್ರ.ಪಿ., ಡಾ.ಅನುಪಮ, ಶ್ರೀ.ರವೀಂದ್ರ ಕುಮಾರ್, ವಿನಯ್ ಕುಮಾರ್, ರಾಜಶ್ರೀ. ವೇದಾವತಿ. ಅನಿತ.ಹೆಚ್.ಜೆ. ಸೈಯದ್ ನಿಗಾರ್, ಎಕೋ ಕ್ಲಬ್ ಕಾರ್ಯದರ್ಶಿಗಳಾದ ವಿಶಾಲ್, ಪ್ರಜ್ವಲ್ ಮತ್ತು ಕುಮಾರಿ. ಅವಂತಿ, ಮತ್ತು ಎನ್.ಎಸ್.ಎಸ್ ಹಾಗೂ ಎಕೋ ಕ್ಲಬ್ ಸದಸ್ಯರುಗಳು ಹಾಜರಿದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend