ಧಾರವಾಡ ಕೃಷಿಮೇಳ: ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ…!!!

Listen to this article

ಧಾರವಾಡ ಕೃಷಿಮೇಳ: ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ

ಧಾರವಾಡ:ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ ಕೃಷಿಮೇಳಕ್ಕೆ ಸೋಮವಾರ ಜನಸಾಗರವೇ ಹರಿದುಬಂದಿತ್ತು. ಮೇಳದಲ್ಲಿ ವಿಸ್ಮಯಕಾರಿ ಕೀಟ ಪ್ರಪಂಚದ ಪ್ರದರ್ಶನ ಗಮನ ಸೆಳೆಯಿತು. ವಿಶ್ವವಿದ್ಯಾಲಯದ ಕೀಟಶಾಸ್ತ್ರ ವಿಭಾಗದಿಂದ ವಿವಿಧ ಕೀಟಗಳ ಜೀವನ ಚಕ್ರ, ವೈವಿಧ್ಯಗಳನ್ನು ತಿಳಿಸುವುದರ ಜೊತೆಗೆ ಕೀಟಗಳಿಂದ ತಯಾರಿಸಿದ ಆಹಾರ ಪದಾರ್ಥಗಳ ಪ್ರದರ್ಶನ ಏರ್ಪಡಿಸಲಾಗಿತ್ತು.ಕೀಟ ಎಂದರೇನು?, ರೋಗ ಹರಡುವ ಮತ್ತು ಹರಡದ ಕೀಟಗಳು, ಅವುಗಳ ವಿಶೇಷತೆಗಳು ಹಾಗು ಇತರ ವಿವರಣೆಗಳನ್ನು ಕೃಷಿ ಮೇಳಕ್ಕೆ ಆಗಮಿಸಿದ ರೈತರಿಗೆ ನೀಡಲಾಗುತ್ತಿದೆ. ಕೀಟ ಪ್ರದರ್ಶನ ಮೇಳದಲ್ಲಿ ವಿವಿಧ ಕೀಟಗಳನ್ನು ಬಳಸಿ ಸಿದ್ಧಪಡಿಸಿರುವ 10ಕ್ಕೂ ಹೆಚ್ಚು ಬಗೆಯ ಆಹಾರ ಪದಾರ್ಥಗಳನ್ನು ಜನರು ಕುತೂಹಲದ ಕಣ್ಣುಗಳಿಂದ ನೋಡಿದರು.

ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ ಮಿಡತೆ, ಜಿರಳೆ ಫ್ರೈ, ಕಪ್ಪು ಸೈನಿಕ ನೊಣ ಮಸಾಲಾ, ರೇಷ್ಮೆ ಕೋಶದ ಸೂಪ್, ಬರ್ಗರ್, ಪನ್ನೀರ್ ಟಿಕ್ಕಾ, ಕೆಂಪಿರುವೆಯ ಫ್ರೈ ಮೊದಲಾದವುಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಮಿಡತೆ, ಜಿರಳೆ ಫ್ರೈ, ಕಪ್ಪು ಸೈನಿಕ ನೊಣ ಮಸಾಲಾ, ರೇಷ್ಮೆ ಕೋಶದ ಸೂಪ್, ಬರ್ಗರ್, ಪನ್ನೀರ್ ಟಿಕ್ಕಾ, ಕೆಂಪಿರುವೆಯ ಫ್ರೈ ಮೊದಲಾದವುಗಳನ್ನು ಪ್ರದರ್ಶನಕ್ಕಿಡಲಾಗಿದೆ.
ಕೀಟಗಳ ಪದಾರ್ಥಗಳಲ್ಲಿ ಹೆಚ್ಚಿನ ಪ್ರೋಟಿನ್‌ ಇರುತ್ತದೆ. ಈಗಾಗಲೇ ಹಲವೆಡೆಗಳಲ್ಲಿ‌ ಕೀಟಗಳನ್ನು ಸೇವಿಸಲಾಗುತ್ತಿದೆ” ಎಂದು ಕೀಟಶಾಸ್ತ್ರದ ವಿದ್ಯಾರ್ಥಿ ನವೀನ್ ತಿಳಿಸಿದರು.

ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ ಮನುಷ್ಯನ ಜೀವನಕ್ಕೆ ಪ್ರೋಟಿನ್ ಅತ್ಯವಶ್ಯಕವಾಗಿ ಬೇಕು. ಸಸ್ಯಾಹಾರ ಹಾಗೂ ಮಾಂಸಾಹಾರದಲ್ಲಿ ಶೇ.6ರಿಂದ 30ರಷ್ಟು ಪ್ರೋಟಿನ್ ಸಿಗುತ್ತದೆ. ಕೀಟಗಳಲ್ಲಿ ಶೇ.50ರಿಂದ 60ರಷ್ಟು ಪ್ರೋಟಿನ್ ಇರುತ್ತದೆ. ಹಲವು ದೇಶಗಳಲ್ಲಿ ಕೀಟಗಳನ್ನು ಆಹಾರ ಪದಾರ್ಥವಾಗಿ ಸೇವಿಸುತ್ತಾರೆ. ನಮ್ಮ ರಾಜ್ಯದಲ್ಲಿ ಕೆಲವು ಆದಿವಾಸಿ ಜನಾಂಗದವರು ಕೆಂಪಿರುವೆಯ ಚಟ್ನಿ ತಿನ್ನುತಾರೆ. ಕೀಟಗಳನ್ನು ಹಲವು ಬಗೆಯಲ್ಲಿ ಫ್ರೈ ಮಾಡಿ ತಿನ್ನಬಹುದು. ಇಂತಹ ಕೀಟಗಳನ್ನು ಚೀನಾ, ಥೈಯ್ಲೆಂಡ್, ಉತ್ತರ ಕೊರಿಯಾದ ದೇಶಗಳಲ್ಲಿ ಭಕ್ಷ್ಯಗಳನ್ನಾಗಿ ನಿತ್ಯವೂ ಸೇವಿಸುತ್ತಾರೆ ಎಂಬ ಮಾಹಿತಿ ಇದೆ.
i
ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ “ಭಾರತದಲ್ಲಿ ಕೆಲವೆಡೆಯ ಆದಿವಾಸಿ ಸಮುದಾಯದವರು ಕೆಂಪಿರುವೆಯ ಫ್ರೈ ಮಾಡಿ ಸೇವಿಸುತ್ತಾರೆ. ನಮ್ಮ‌ ದೇಶದಲ್ಲಿ ಕೀಟಗಳ ಸೇವನೆ ತುಂಬಾ ಕಡಿಮೆ‌. ಇದನ್ನು‌ ಇಲ್ಲಿ‌ ನೋಡಿದ್ದು ಅಚ್ಚರಿ‌ ಮೂಡಿಸಿತು” ಎಂದು ಪ್ರದರ್ಶನ ವೀಕ್ಷಿಸಿದ ಅಂಜಲಿ ಹೇಳಿದರು.

ಕೀಟಗಳಿಂದ ತಯಾರಿಸಿದ ಆಹಾರ ಪ್ರದರ್ಶನ ಇದನ್ನೂ ಓದಿ:ಧಾರವಾಡ ಕೃಷಿಮೇಳ: ಕಣ್ಮನ ಸೆಳೆವ ಫಲಪುಷ್ಪ ಪ್ರದರ್ಶನ…

ವರದಿ, ಮಹಾಲಿಂಗ ಗಗ್ಗರಿ, ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend