ಓಝೋನ್ ಪದರಿನ ಹಾನಿಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ: ಹೆಗಡೆ…!!!

Listen to this article

ಓಝೋನ್ ಪದರಿನ ಹಾನಿಯಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ: ಹೆಗಡೆ
ಗುಳೇದಗುಡ್ಡ: ಮಾನವ ಪರಿಸರವನ್ನು ಹಾನಿ ಮಾಡುತ್ತಿರುವುದರಿಂದ ಭೂಮಿಯ ತಾಪಮಾನದಲ್ಲಿ ಭಾರೀ ಏರಿಕೆಯಗಿ ಭೂಮಿಯ ಹೊರವಲಯದಲ್ಲಿರುವ ಝೋನ ಪದರಿಗೆ ಹಾನಿ ಮಾಡುತ್ತಿದೆ. ಓಝೋನ ಪದರಿನಲ್ಲಿ ಉಂಟಾಗುತ್ತಿರುವ ಹಾನಿಯಿಂದಾಗಿ ಮಾನವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆಯ ಚೇರಮನ್ ಅಶೋಕ ಹೆಗಡೆ ಹೇಳಿದರು.
ಅವರು ಸ್ಥಳೀಯ ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಓಝೋನ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಓಝೋನ ಪದರನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಪರಿಸರಕ್ಕೆ ಹಾನಿಮಾಡುವ ವಸ್ತುಗಳ ಬಳಕೆ ನಿಲ್ಲಿಸಬೇಕು ಎಂದರು.
ವಿದ್ಯಾರ್ಥಿಗಳಾದ ವಿದ್ಯಾ ಬಾಪಟ, ಸಂದೀಪ ಪೂಜಾರ ಓಝೋನ ಪದರಿನ ರಚನೆ ಹಾಗೂ ಅದರ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಜೆ. ಜೆ ಲೋಬೊ, ವೀಣಾ ಹಳ್ಳೂರ, ಗೀತಾಂಜಲಿ ಮುದಗಲ್ಲ ಮತ್ತಿತರರು ಇದ್ದರು. ಬಳಿಕ ಓಝೋನ್ ಮಾದರಿ ವಿವರಣೆ ಹಾಗೂ ಕಿರುನಾಟಕ ವಿದ್ಯಾರ್ಥಿಗಳಿಂದ ಪ್ರದರ್ಶನಗೊಂಡಿತು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend