ಶ್ರೀ ಸಾಲೇಶ್ವರ ಪತ್ತಿನ ಸಹಕಾರ ಸಂಘದ ಸರ್ವಸಾಧಾರಣ ಸಭೆ…!!!

Listen to this article

22 ರಂದು ಶ್ರೀ ಸಾಲೇಶ್ವರ ಪತ್ತಿನ ಸಹಕಾರ ಸಂಘದ ಸರ್ವಸಾಧಾರಣ ಸಭೆ
ಗುಳೇದಗುಡ್ಡ: ಶೇರುದಾರರು ಹಾಗೂ ಗ್ರಾಹಕರ ಸಹಕಾರದಿಂದಾಗಿ ಶ್ರೀ ಸಾಲೇಶ್ವರ ಪತ್ತಿನ ಸಹಕಾರ ಸಂಘವು ಇಪ್ಪತ್ತುವರ್ಷಗಳನ್ನು ಪೂರೈಸಿ ಪ್ರಗತಿಪಥದಲ್ಲಿ ನಡೆದಿದ್ದು, ಪ್ರಸಕ್ತ ಸಾಲಿನಲ್ಲಿ ಸಂಘ 56.15 ಲಕ್ಷ ರೂ. ಲಾಭಗಳಿಸಿದ್ದು, ಶೇರುದಾರರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲು ಉದ್ದೇಶಿಸಲಾಗಿದೆ. ಸಂಘದ 2023-24ನೇ ಸಾಲಿನ 20ನೇ ವರ್ಷದ ಸರ್ವಸಾಧಾರಣ ಸಭೆ ಸೆ. 22ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಶ್ರೀ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ ಶೇಖಾ ಹೇಳಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 20 ವರ್ಷಗಳಲ್ಲಿ ಸಂಘವು ಗ್ರಾಹಕರ ವಿಶ್ವಾಸಗಳಿಸುವ ಮೂಲಕ ಉತ್ತಮ ಪ್ರಗತಿಯನ್ನು ಹೊಂದಿದ್ದು, ಗುಳೇದಗುಡ್ಡ ಕೇಂದ್ರ ಶಾಖೆಯೊಂದಿಗೆ ಬಾಗಲಕೋಟ, ಹುಬ್ಬಳ್ಳಿ ಹಾಗೂ ಲಕ್ಷ್ಮೇಶ್ವರ ಪಟ್ಟಣಗಳಲ್ಲಿ ಶಾಖೆಯನ್ನು ತೆರೆದಿದೆ. ಕೇವಲ 50 ಲಕ್ಷ ರೂ. ಶೇರು ಬಂಡವಾಳದಿಂದ ಪ್ರಾರಂಭಗೊಂಡ ಸಂಘದ ಶೇರು ಬಂಡವಾಳ ಇಂದು 2 ಕೋಟಿ ರೂ ದಾಟಿದ್ದು, 3079 ಸದಸ್ಯರನ್ನು ಹೊಂದಿದೆ. ಸಂಘವು ಕಾಲಕ್ಕೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುನ್ನಡೆದಿದ್ದು, ಮೋಬೈಲ್ ಬ್ಯಾಂಕಿಂಗ್ ಸೇವೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಂಗನಬಸಪ್ಪ ಚಿಂದಿ, ನಿರ್ದೇಶಕರುಗಳಾದ ದೊಡ್ಡಬಸಪ್ಪ ಉಂಕಿ, ಗಂಗಾಧರ ಮದ್ದಾನಿ, ಬಸವರಾಜ ತೊಗರಿ, ಶ್ರೀಕಾಂತ ಭಾವಿ, ಪ್ರಕಾಶ ವಾಳದಉಂಕಿ, ಮಂಜುನಾಥ ರಾಜನಾಳ, ಮಲ್ಲಿಕಾರ್ಜುನ ಸಾರಂಗಿ, ಸಚ್ಚಿದಾನಂದ ತೊಗರಿ, ಸಂಗನಬಸಪ್ಪ ಪಾಗಿ, ಭಾಗ್ಯಾ ಉದ್ನೂರ, ನಾಗವೇಣಿ ಬಂಕಾಪೂರ, ಪ್ರಭಾರ ಪ್ರಧಾನ ವ್ಯವಸ್ಥಾಪಕ ರಮೇಶ ಜಿಡಗಿ ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend