ವೃತ್ತಿ ಜೀವನದ ಕೊನೆಯಲ್ಲಿ ಎರಡು ವರ್ಷ ಮುಂಬಡ್ತಿ ಮುಖ್ಯ ಗುರುಗಳಾಗಿ ಸೇವೆ ” ಚಂದ್ರಶೇಖರಪುರದಲ್ಲಿ ಅದ್ದೂರಿ ಬೀಳ್ಕೊಡುಗೆ ಸಮಾರಂಭ…!!!

Listen to this article

ವೃತ್ತಿ ಜೀವನದ ಕೊನೆಯಲ್ಲಿ ಎರಡು ವರ್ಷ ಮುಂಬಡ್ತಿ ಮುಖ್ಯ ಗುರುಗಳಾಗಿ ಸೇವೆ ” ಚಂದ್ರಶೇಖರಪುರದಲ್ಲಿ ಅದ್ದೂರಿ ಬೀಳ್ಕೊಡುಗೆ ಸಮಾರಂಭ

ಮುಖ್ಯ ಗುರುಗಳ ಪರಿಚಯ…ಶ್ರೀಯುತ ಎ ಕೆ ಮಹೇಂದ್ರಪ್ಪ ಸರ್ ಇವರು ಜೋಗಪ್ಪ ಮತ್ತು ದುರ್ಗಮ್ಮ ದಂಪತಿಗಳ ನಾಲ್ಕನೇ ಪುತ್ರರಾಗಿ ದಿನಾಂಕ :01-07-1964 ರಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಜನಿಸಿದ್ದಾರೆ.ಇವರ ಮೊದಲ ಶಿಕ್ಷಕ ಸೇವೆ ಆರಂಭವಾಗಿದ್ದು 03-08-1994ರಲ್ಲಿ ಸಹಿ ಪ್ರ ಶಾಲೆ ಅರ್ಜುನ ಚಿನ್ನನಹಳ್ಳಿಯಲ್ಲಿ ಸದರಿ ಶಾಲೆಯಲ್ಲಿ ಸುಮಾರು 14 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ. ಎರಡನೆಯದಾಗಿ ಮಾಡಕನಹಳ್ಳಿಯ ಗೊಲ್ಲರಹಟ್ಟಿ ಶಾಲೆಯಲ್ಲಿ 2ವರ್ಷ ಹಾಗೂ ಸಹಿ ಪ್ರಶಾಲೆ ವಲಸೆಯಲ್ಲಿ 7 ವರ್ಷಗಳ ಕಾಲ ಬಡ್ತಿ ಮುಖ್ಯ ಗುರುಗಳಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಕೊನೆಯದಾಗಿ ಸ. ಹಿ. ಪ್ರಾ ಶಾಲೆ ಚಂದ್ರಶೇಖರಪುರದಲ್ಲಿ 2ವರ್ಷಗಳ ಕಾಲ ಮುಂಬಡ್ತಿ ಮುಖ್ಯ ಗುರುಗಳಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ, ಒಟ್ಟಾರೆ 30 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಮಕ್ಕಳಿಗೆ ಅಕ್ಷರಗಳನ್ನ ಬಿತ್ತಿ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.

ಬೀಳ್ಕೊಡುಗೆ ಸಮಾರಂಭವನ್ನ ಅತ್ಯಂತ ಗೌರವ ಪೂರ್ವಕವಾಗಿ ನೆರವೇರಿಸುವುದರ ಮೂಲಕ ಸನ್ಮಾನಿಸಿ ಅಭಿನಂದಿಸಿದರು, ಈ ಸಂದರ್ಭದಲ್ಲಿ ಸ. ಹಿ. ಪ್ರಾ ಶಾಲೆ ಚಂದ್ರಶೇಖರಪುರದ ಮುಖ್ಯಗುರುಗಳಾದ ಬಿ ಕೆ ಹಿರೇಮಠ್, crp ವಿಶಾಲ, sdmc ಅಧ್ಯಕ್ಷರು, dss ಸಂಘದವರು,ಹಳೆಯ ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು…

ವರದಿ. ಕಾಶೆಪ್ಪ ಸಂಡೂರು ಗ್ರಾಮಾಂತರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend