ಹುಲಿಕೆರೆ ಶಾಲೆಗೆ ದಿಢೀರ್ ಭೇಟಿ ನೀಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು…
ಕೂಡ್ಲಿಗಿ ತಾಲೂಕು ಪಂಚಾಯತಿಯ ಇಒ ನರಸಪ್ಪ ಅವರು ಮಂಗಳವಾರ ತಾಲೂಕಿನ ಗಡಿಭಾಗದ ಗ್ರಾಮ ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಡೀರ್ ಭೇಟಿ ನೀಡಿ ಶಾಲಾ ವ್ಯವಸ್ಥೆ ಅಡುಗೆ ಕೋಣೆ ಶೌಚಾಲಯ ವೀಕ್ಷಣೆ ಮಾಡಿದರು ಶಾಲೆಯ ಮುಖ್ಯ ಗುರುಗಳು ಶಿಕ್ಷಕರ ಜೊತೆ ಅಡುಗೆ ಸಿಬ್ಬಂದಿಗೆ ಅಡುಗೆ ಕೋಣೆ ಸ್ವಚ್ಛತೆ ಹಾಗೂ ಧೂಳು ರಹಿತವಾಗಿ ಇರುವಂತೆ ನೋಡಿಕೊಳ್ಳಬೇಕು ಶುದ್ಧ ನೀರಿನಲ್ಲಿ ಪಾತ್ರೆಗಳನ್ನು ಪ್ರತಿನಿತ್ಯ ಸ್ವಚ್ಛ ನೀರಿನಲ್ಲಿ ತೊಳೆಯಬೇಕು ಕಿಟಕಿಗಳಲ್ಲಿ ಗೋಡೆಗಳಲ್ಲಿ ಜೇಡರಬಲೆ ಜಿರಳೆ ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು ಪ್ರತಿದಿನ ನಿತ್ಯ ಹಸಿ ಸೊಪ್ಪು ತರಕಾರಿಗಳನ್ನು ಹಾಕಿ ಸಾಂಬಾರ್ ಮಾಡಬೇಕು ಮಕ್ಕಳಿಗೆ ಆಹಾರವನ್ನು ವಿತರಿಸುವ ಮುನ್ನ ಆಹಾರವನ್ನು ರುಚಿ ಪರೀಕ್ಷಿಸಬೇಕು ಮುತ್ತು ಮಕ್ಕಳು ಅಡುಗೆ ಕೋಣೆಗೆ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು ನಂತರ ಮಕ್ಕಳ ಜೊತೆ ಬಿಸಿ ಊಟವನ್ನು ಸವಿದರು ತಾಲೂಕು ಪಂಚಾಯಿತಿ ಸಿಬ್ಬಂದಿ ವೆಂಕಟೇಶ್ ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕ ಸಹ ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಸದಸ್ಯರಿದ್ದರು.
ವರದಿ:- ಅನಿಲ್ ಕುಮಾರ್ ಹುಲಿಕುಂಟೆ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030