ಹಳ್ಳಿಯಿಂದ ದಿಲ್ಲಿಯವರೆಗೂ ಮುಡಿಗೇರಿಸಿಕೊಂಡ ರಂಗಭೂಮಿ ಕಲಾವಿದ ಮೂಗಪ್ಪ ಬಣಕಾರ…!!!

Listen to this article

ಹಳ್ಳಿಯಿಂದ ದಿಲ್ಲಿಯವರೆಗೂ ಮುಡಿಗೇರಿಸಿಕೊಂಡ ರಂಗಭೂಮಿ ಕಲಾವಿದ ಮೂಗಪ್ಪ ಬಣಕಾರ

ಸಾವಿರಕೆ ಒಬ್ಬ ಕಲಾವಿದ ಅಂತಾರೆ,ಅದು ನಿಜ ಅಂಥ ಕಲಾವಿದ ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಹಿರೇಹೆಗ್ಡಾಳ್ ಗ್ರಾಮೀಣ ಪ್ರತಿಭೆ. ರಂಗ ಕಲೆಯನ್ನು ರಂಜಿಸಿ ಭಿನ್ನ ವಿಭಿನ್ನ ಪಾತ್ರಗಳಿಗೆ ಜೀವ ತುಂಬುವ ಕಲಾಚೇತನ. ಆಡು ಮುಟ್ಟದ ಸೊಪ್ಪಿಲ್ಲ ಮೂಗಪ್ಪ ಬಣಕಾರ ಅಭಿನಯಿಸದ ರಂಗ ಭೂಮಿಯ ಪಾತ್ರವಿಲ್ಲ ಎಂಬ ವಿಜಯ ನಗರ ಜಿಲ್ಲೆಯ ಜನವಾಣಿಯೂ ಇದೆ. ಈ ರೀತಿ ರಂಗ ಭೂಮಿಯಲ್ಲಿ ಕಲಾಪ್ರೇಕ್ಷಾಭಿಮಾನಿಗಳ ಮನೆ ಮಾತಾಗಿದ್ದಾರೆ. ಇವರ ರಂಗ ಕಲಾಸೇವೆ, ಸ್ವಯಂ ಕಲೆ,ಶಿಕ್ಷಣ ಸಾಮಾಜಿಕ ಅರಿವು ಮೂಡಿಸುವ ಮಕ್ಕಳ ಶೖಕ್ಷಣಿಕ ನಾಟಕ ತರಬೇತಿ,ನಿರ್ಧೇಶನ, ಹಾಡುಗಾರಿಕೆ ಎಲ್ಲವೂ ಕಲಾ ಸೇವೆಗೆ ಅರ್ಪಿಸಿಕೊಂಡ ಬಹುಮುಖಿ ಕಲಾವಿದ. ಇವರ ಮುಖಾ ಮುಖಿ ಸಂದರ್ಶನದಲ್ಲಿ ಮೂಡಿಬಂದ ಇವರ ಮನದಾಳದ ಮಾತುಗಳು ರಂಗ ಭೂಮಿಕೆಗೆ ಇವರೊಂದು ಶೀರ್ಷಿಕೆ ಆನ್ನುವಂತೆ ಇವರ ಬಣ್ಣದ ಬದುಕಲ್ಲಿ ಚಂದನದ ಕಲೆ ಮೖತುಂಬಿದೆ. ಇವರು ರಂಗಿಕೆಯಲ್ಲಿ ರಂಗೇರಿಸುವ ಪಾತ್ರಗಳು ಮೂಗಪ್ಪ ಬಣಕಾರ ಹೇಳುವಂತೇ.

ದುರ್ಯೋಧನ ಪಾತ್ರ, ಶಕುನಿ ಪಾತ್ರ ಹಾಗೂ ಹೇಮ ರೆಡ್ಡಿ ಮಲ್ಲಮ್ಮನ ನಾಟಕದ ಹೇಮರೆಡ್ಡಿ ಪಾತ್ರಗಳು ಕಲಾಭಿಮಾನಿಗಳಲ್ಲಿ ಅಚ್ಚಳಿಯದೆ ಉಳಿದಿವೆಯಂತೆ. ಇವರ ರಂಗ ಕಲೆಯ ಅಭಿನಯ ವಿಜಯ ನಗರ ಜಿಲ್ಲೆ ಎಲ್ಲೆ ಮೀರಿ ಅಖಂಡ ಬಳ್ಳಾರಿ ಜಿಲ್ಲೆ ಗ್ರಾಮ ಹಳ್ಳಿಗಳಲ್ಲೂ ಪ್ರಯೋಗ ಗೊಂಡು ಪ್ರಶಂಶೆ ಪಡೆದಿದೆ. ಕರ್ನಾಟಕ ರಾಜ್ಯದ, ತುಮಕೂರು, ಉಡುಪಿ,ಚಿಕ್ಕಮಗಳೂರು, ದಾವಣಗೆರೆ, ಹುಬ್ಬಳ್ಳಿ ಹೀಗೆ ದಾಟಿ ರಾಜಧಾನಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲೂ ರಂಗೇರಿ ಅಭಿನಂದನೆ ಪಡೆದ ಬಣಕಾರ ಆಂದ್ರ ಪ್ರದೇಶ,ಕೇರಳ,ಮಹಾರಾಷ್ಪ್ರ ರಾಜ್ಯಗಳಲ್ಲಿ ತಮ್ಮ ಅಭಿನಯದಿಂದ ಪ್ರಶಸ್ತಿ ಪಡೆದು ಕರುನಾಡಿನ ರಂಗ ಕಲೆಗೆ ಹಿರಿಮೆ ಎನಿಸಿದ್ದಾರೆ. ಶಾಲೆಯ ಶಿಕ್ಷಣದ ಬಗ್ಗೆ ಅತಿ ಹೆಚ್ಚು ಆ ಶಕ್ತಿ ಪಡೆದವರು ಹಾಗೂ ಮಕ್ಕಳ ಅಭಿನಯ ಗೀತೆ ಮನ ಮಾತಾಗಿರುವ ಈಗಲೂ ಶಾಲೆಯಲ್ಲಿ ಬಿಟ್ಟರೆ ಮಕ್ಕಳ ಜೊತೆ ಮಕ್ಕಳಾಗಿ ಬಿಡುತ್ತಾರೆ ಅಂತ ಅಭ್ಯಾಸ ರೂಡಿಸಿಕೊಂಡಿರುವ ಇವರು ಸಾಕಷ್ಟು ಶಿಕ್ಷಣ ಗುರಿಯಾಗಿಟ್ಟುಕೊಂಡು ಮಕ್ಕಳ ಬಗ್ಗೆ ಜಾಗೃತಿ ನೀಡುವುದರ ಮೂಲಕ ತನ್ನ ಚಿಕ್ಕವಯಸಿನಲ್ಲೇ ಇಂಥ ಹವ್ಯಾಸವನ್ನು ಕಲೆಗಳನ್ನು ರೂಡಿಸಿಕೊಂಡು ಮಕ್ಕಳಿಂದ ಅಭಿನಯಿಸಿರುವ ಅದೆಷ್ಟೋ ನಾಟಕಗಳು ಇವರಲ್ಲಿ ದಾಖಲಾತಿ ಆಗಿ ಉಳಿದಿವೆ ಎಲೆ ಮರಿ ಕಾಯಂತಿಯಾಗಿ ಸಾಕಷ್ಟು ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿರುವ ಇವರಿಗೆ ರಾಜ್ಯ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹ ಧನ ಇಲ್ಲವೇ ಇಲ್ಲ ಇದು ತುಂಬಾ ಬೇಜಾರ ಸಂಗತಿ ಆದರೂ ಯಾರು ಸಹಾಯವಿಲ್ಲದೆ ಏನಾದರೂ ಜೀವನದಲ್ಲಿ ಸಾಧನೆ ಮಾಡಬೇಕೆಂದು ಕಲಾಭಾರತಿ ಕಲಾ ಸಂಘ ಕಟ್ಟಿಕೊಂಡು ಅದೆಷ್ಟೋ ಸಾಧಕರಿಗೆ ಗುರುತಿಸಿ ಸನ್ಮಾನ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಇಂಥ ಹಳ್ಳಿ ಪ್ರತಿಭೆಯನ್ನು ಗುರುತಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂಪಾದಕರಾದ ಮೇಲ್ನಳ್ಳಿ ತಿಪ್ಪೇಸ್ವಾಮಿ ಚಿತ್ರದುರ್ಗ ಸಂದರ್ಶನದ ಮುಖಾಂತರ ತಿಳಿಸಿದ್ದಾರೆ…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend