ಜೋಕುಮಾರಸ್ವಾಮಿ ಸಾಂಪ್ರದಾಯಿಕ ವಿಶೇಷ ಆಚರಣೆ…!!!

Listen to this article

ಜೋಕುಮಾರಸ್ವಾಮಿ ಸಾಂಪ್ರದಾಯಿಕ ವಿಶೇಷ ಆಚರಣೆ

ಕೊಟ್ಟೂರು ನಗರ ಸಂಪ್ರದಾಯಗಳ ತವರೂರು ಎನ್ನುವ ಮಾತಿದೆ ಅದೇ ರೀತಿ ಇಲ್ಲಿ ಹಬ್ಬ ಹರಿದಿನಗಳಿಗೆ ಕಡಿಮೆ ಇಲ್ಲ ಪ್ರತಿದಿನ ಹೊಂದಿಲ್ಲ ಒಂದು ಆಚರಣೆಗಳು ರೂಢಿಯಲ್ಲಿರುತ್ತವೆ ಅಂತಹದ್ದೇ ಆಚರಣೆಯಲ್ಲಿ ಜೋಕುಮಾರಸ್ವಾಮಿಯ ಹುಟ್ಟು ಮತ್ತು ಮರಣ ವಿಶೇಷ ಆಚರಣೆಯಲ್ ಒಂದು ಗಣಪತಿಯ ವಿಸರ್ಜನೆಯ ನಂತರದ ದಿನ ಹುಟ್ಟುವ ಈ ಜೋಕುಮಾರಸ್ವಾಮಿ ಹಿಂದೂ ಧರ್ಮದ ಮಾರಿಕರ ಮನೆತನದವರ ಆರಾಧ್ಯ ದೈವವಾಗಿ ಪೂಜಿಸಲ್ಪಡುತ್ತದೆ ಏಳು ದಿನಗಳ ಕಾಲ ತನ್ನ ಜೀವಿತಾವಧಿಯನ್ನು ಹೊಂದಿ ಮಳೆ ಬೆಳೆಗಾಗಿ ಸಮೃದ್ಧ ಜೀವನಕ್ಕಾಗಿ ಸರ್ವರೂ ಪೂಜಿಸುವ ಹಾಗೂ ರೈತಾಪಿ ಜನರ ಬೇಡಿಕೆಯ ದೈವವೂ ಕೂಡ ಹೌದು ಈ ಸಂಪ್ರದಾಯವು ಸನಾತನವಾಗಿ ನಡೆದುಕೊಂಡು ಬಂದಿದ್ದು ಚೋ ಕುಮಾರನ ಹಾಳಲು ಎನ್ನುವ ರೂಡಿನಾಮದಲ್ಲಿ ಆಚರಣೆಯಲ್ಲಿದೆ ಹುಟ್ಟಿದ ದಿನದಿಂದ ನಗರದ ಪ್ರತಿ ಮನೆಗಳಿಗೆ ಪ್ರತಿಷ್ಠಿತರು ಮನೆತನಗಳ ಮನೆಗಳಿಗೆ ಭೇಟಿ ನೀಡಿ ಹಾಡುವ ಮೂಲಕ ಜೋಕುಮಾರನ ಆಶೀರ್ವಾದಗಳನ್ನು ಮನೆಗೆ ತಲುಪಿಸುವ ಕಾರ್ಯವನ್ನು ಈ ಬಾರಿಕರ ಮನೆತನವು ನಡೆಸಿಕೊಂಡು ಬಂದಿರುತ್ತದೆ ಮಣ್ಣಿನಿಂದ ತಯಾರಿಸುವ ಜೋಕುಮಾರಸ್ವಾಮಿ ತನಗೆ ಪ್ರಿಯವಾದ ಎಣ್ಣೆ ಬೆಣ್ಣೆ ಜೋಳ ರಾಗಿ ಒಣ ಮೆಣಸಿನಕಾಯಿ ಇತ್ಯಾದಿ ವಸ್ತುಗಳನ್ನ ತನಗೆ ಪ್ರಿಯವೆಂದು ನೈವೇದ್ಯಕ್ಕೆ ಸಲ್ಲಿಸುವುದು ವಾಡಿಕೆ ಏಳನೇ ದಿನ ಅಂದರೆ ಜೋಕುಮಾರನ ಆಚರಣೆಯ ಕೊನೆಯ ದಿನ ಸ್ವಾಮಿಗೆ ಪ್ರಿಯವಾದ ಅನ್ನ ಮತ್ತು ಹುಳಿಸೊಪ್ಪು ನೈವೇದ್ಯವನ್ನು ಮಾಡಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ವಿಸರ್ಜಿಸುವುದು ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಪದ್ಧತಿ ಎನ್ನುತ್ತಾರೆ ಆ ಮನೆತನದವರು ಎಲ್ಲರಿಗೂ ಜೋಕುಮಾರಸ್ವಾಮಿ ಸಮೃದ್ಧ ಮಳೆ ಬೆಳೆ ಹಾಗೂ ರೈತರ ಜೀವನ ಹಸನಾಗಲಿ ಎನ್ನುವ ಶುಭಾಶಯಗಳು ತಿಳಿಸುತ್ತಾ ನಾವು ಪ್ರತಿ ವರ್ಷ ಸೇವೆ ಮಾಡುತ್ತೇವೆ ಎಂದು ಹೇಳುತ್ತಾರೆ ಜೋಕುಮಾರಸ್ವಾಮಿಯ ಸೇವಕರಾದ ಶಾಂತಮ್ಮ ಮೂಗಮ್ಮ ಮೀನಾಕ್ಷಮ್ಮ ಮತ್ತು ರೂಪ ಮತ್ತು ಸಂಗಡಿಗರು…

ವರದಿ,ಎಮ್, ಮಲ್ಲಿಕಾರ್ಜುನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend