ಮಾನ್ವಿ:ಅನ್ಯಾಯದ ವರ್ಗಾವಣೆಯ ವಿರುದ್ಧ ಪ್ರತಿಭಟನೆ…!!!

Listen to this article

ಮಾನ್ವಿ:ಅನ್ಯಾಯದ ವರ್ಗಾವಣೆಯ ಪ್ರತಿಭಟನೆ (CPML)
1) ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ ವಿಧಾನಸೌಧ ಬೆಂಗಳೂರು.
2)ಮಾನ್ಯ ಸರಕಾರದ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುದಾರಣೆ ಇಲಾಖೆ ವಿಧಾನಸೌಧ ಬೆಂಗಳೂರು.
3)ಮಾನ್ಯ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ಬಹುಮಹಡಿ ಕಟ್ಟಡ ಬೆಂಗಳೂರು.
(ಮಾನ್ಯ ತಹಸಿಲ್ದಾರ್ ಮುಖಾಂತರ ಮನವಿ ಪತ್ರ ಸಲ್ಲಿಕೆ)

ಒತ್ತಾಯ ಪತ್ರ

ವಿಷಯ : ಅವಧಿಗೂ ಮುನ್ನ ಮಾಡಲಾದ ರಾಯಚೂರು ಉಪ ವಿಭಾಗ ಅಧಿಕಾರಿ ಶ್ರೀಮತಿ ಮಹಿಬೂಬಿ ಕೆಎಎಸ್ ಅವರ ಅನ್ಯಾಯದ ವರ್ಗಾವಣೆಯನ್ನು ಹಿಂಪಡೆಯುವ ಕುರಿತು.

ಮಾನ್ಯರೆ,
ಈ ಒತ್ತಾಯ ಪತ್ರಕ್ಕೆ ಸಹಿ ಹಾಕಿದ ಸಂಘಟನೆಗಳ ಪ್ರತಿನಿಧಿಗಳಾದ ನಾವು, ಇಂದು ದಿನಾಂಕ 14.09.2024 ರಂದು ಸಾಂಕೇತಿಕ ಪ್ರತಿಭಟನೆ ಮೂಲಕ ತಮಗೆ ಈ ಪತ್ರ ಬರೆದಿದ್ದೇವೆ. ಹಾಗೆಯೇ ನಮ್ಮ ಪ್ರತಿಭಟನೆಯ ಉದ್ದೇಶವನ್ನು ಈ ಕೆಳಗಿನಂತೆ ಪ್ರಕಟಿಸುತ್ತಿದ್ದೇವೆ.

ಕಳೆದ 9 ತಿಂಗಳ ಹಿಂದೆ ರಾಯಚೂರುಗೆ ವರ್ಗಾವಣೆಯಾಗಿ ಬಂದ ಕೆಎಎಸ್ ಅಧಿಕಾರಿ ಶ್ರೀಮತಿ ಮಹಿಬೂಬಿ ಅವರನ್ನು ದಿನಾಂಕ : 13.09.2024ರಂದು ಹಠಾತ್ತನೆ ವರ್ಗಾವಣೆ ಮಾಡಿದ ತಮ್ಮ ಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಏಕೆಂದರೆ ಇದು ಅವಧಿಗೆ ಪೂರ್ವ ವರ್ಗಾವಣೆಯಾಗಿರುತ್ತದೆ. ಅಲ್ಲದೇ ಈ ಅಧಿಕಾರಿಯ ವರ್ಗಾವಣೆಗೆ ರಾಯಚೂರು ಉಪ ವಿಭಾಗ ಸೇರಿ ಇಡೀ ಜಿಲ್ಲೆಯಿಂದ ಯಾವುದೇ ಜನ, ಸಂಘಟನೆ ಅಥವಾ ಸಮುದಾಯಗಳು ಸರಕಾರಕ್ಕೆ ಕೇಳಿಕೊಂಡಿರುವುದಿಲ್ಲ. ಅಲ್ಲದೆ ಈ ಅಧಿಕಾರಿಯ ಮೇಲೆ ಆಡಳಿತ ಹಾಗೂ ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ದಾಖಲೆಯಾಗಿ ಆರೋಪ ಸಾಬೀತಾಗಿರುವುದಿಲ್ಲ.

ಸದರಿ ಅಧಿಕಾರಿಯವರು ಕೇವಲ 8-9 ತಿಂಗಳಲ್ಲಿಯೇ ಅತ್ಯಂತ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ದಕ್ಷ ಅಧಿಕಾರಿ ಎಂದು ಜನ ಸಾಮಾನ್ಯರ ನಡುವೆ ಹೆಸರು ಮಾಡಿರುತ್ತಾರೆ. ಅನೇಕ ಭೂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥ ಪಡಿಸಿರುತ್ತಾರೆ. ಅಲ್ಲದೇ ಸರಕಾರ ವಹಿಸಿದ ಅದ್ಯ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡುತ್ತಾ ಬಂದಿರುತ್ತಾರೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಕುಂದು ಕೊರತೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದಾರೆ. ರೈತ ಹಾಗೂ ಕಾರ್ಮಿಕರ ಮಹಿಳೆಯರ ವಿಷಯದಲ್ಲೂ ಮುಂದೆ ನಿಂತು ಕರ್ತವ್ಯ ನಿರ್ವಹಿಸಿ ಜನಸ್ನೇಹಿ ಆಡಳಿತ ನಿರ್ವಹಿಸಿದ್ದಾರೆ. ಆಷ್ಟಕ್ಕೂ ಸದರಿ ಅಧಿಕಾರಿಯು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕೆಂದು ಕರೆಸಿಕೊಂಡ ದೇವದುರ್ಗ ತಾಲೂಕಿನವರಾಗಿದ್ದಾರೆ. ದಾರ್ಮಿಕ ಅಲ್ಪಸಂಖ್ಯಾತ(ಮುಸ್ಲಿಂ)ಸಮುದಾಯಕ್ಕೆ ಸೇರಿದ ಮಹಿಳೆ. ಕಡುಬಡತನದ ನಡುವೆ ಕೆಎಎಸ್ ತೇರ್ಗಡೆ ಹೊಂದಿ ರಾಜ್ಯದಲ್ಲಿಯೇ ಮೊಟ್ಟಮೊದಲ ಮುಸ್ಲಿಂ ಮಹಿಳಾ ಕೆಎಎಸ್ ಅಧಿಕಾರಿಯಾಗಿ ಸರಕಾರದ ಕರ್ತವ್ಯದಲ್ಲಿದ್ದಾರೆ. ಇಂತವರನ್ನು ಈ ಜಿಲ್ಲೆಯಿಂದ ತತಕ್ಷಣ ವರ್ಗಾವಣೆ ಮಾಡುವುದು ಎಷ್ಟು ಸರಿ? ಸರಕಾರಕ್ಕೆ ವಿವೇಚನೆ ಬೇಡವೇ? ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಸರಕಾರ ಕೊಡುವ ಗೌರವ ಇದೇನಾ?

ಶ್ರೀಮತಿ ಮಹಿಬೂಬಿ ಉಪ ವಿಭಾಗ ಅಧಿಕಾರಿಗಳು ಇಲ್ಲಿನ ಸರಕಾರಿ ಭೂ ಕಬಳಿಕೆದಾರರಿಗೆ, ಅಕ್ರಮ ದಂಧೆಕೋರರಿಗೆ ಸಾರ್ವಜನಿಕ ಶಾಂತಿ ಕದಡುವ ಶಕ್ತಿಗಳ ಆಟ ನಡೆಯದಂತೆ ನೋಡಿಕೊಂಡಿರುತ್ತಾರೆ. ಇಲ್ಲಿನ ಒಬ್ಬೊಬ್ಬ ರಾಜಕಾರಣಿಗಳ ದುಷ್ಟ ದಂಧೆಗೆ ಇವರು ಮಣಿ ಹಾಕಲಿಲ್ಲ ಎಂಬ ಕಾರಣ ಇದರಿಂದ ಇದ್ದೇ ಇದೆ. ಇದನ್ನು ನಾವು ಸಹಿಸಲು ಸಾದ್ಯವಿಲ್ಲ. ಈಗಿರುವ ಜಿಲ್ಲಾಧಿಕಾರಿಗಳು ವಿಪ್ರ ಸಮುದಾಯದವರಿದ್ದು ತಮ್ಮ ಮುಸ್ಲಿಂ ವಿರೋಧಿ ದ್ವೇಷವನ್ನು ಪ್ರದರ್ಶನ ಮಾಡುತ್ತಿದ್ದಾರೆಂದು ಬೇರೆ ಹೇಳಬೇಕಾಗಿಲ್ಲ. ಕಾರಣ ಕೂಡಲೇ ಇವರ ವರ್ಗಾವಣೆ ಆದೇಶವನ್ನು ಹಿಂಪಡೆದು ಶ್ರೀಮತಿ ಮಹಿಬೂಬಿ ಅವರನ್ನು ರಾಯಚೂರಿನಲ್ಲಿಯೇ ಮುಂದುವರೆಸಬೇಕೆಂದು ಇಂದಿನ ಪ್ರತಿಭಟನೆಯ ಮೂಲಕ ಒತ್ತಾಯಿಸಲಾಗುತ್ತದೆ. ಇದಕ್ಕೆ ತಾವು ಸ್ಪಂದಿಸಬೇಕು. ಇಲ್ಲದಿದ್ದಲ್ಲಿ ಮುಂದೆ ರಾಯಚೂರು ಜಿಲ್ಲೆಯಾದ್ಯಂತ ಎಲ್ಲಾ ಸಂಘಟನೆಗಳು ಸೇರಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ. ಎಂದು ಯಲ್ಲಪ್ಪ ಉಟಕನೂರು ಒತ್ತಾಯಿಸಿದರು

ಈ ಸಂದರ್ಭದಲ್ಲಿ:-

ಯಲ್ಲಪ್ಪ ಉಟಕನೂರು ತಾಲೂಕು ಕಾರ್ಯದರ್ಶಿ(CPML)

ಪ್ರಕಾಶ ಧೋತರಬಂಡಿ ತಾಲೂಕು ಸದಸ್ಯರು

ದೇವರಾಜ ಪೋತ್ನಾಳ ತಾಲೂಕು ಸದಸ್ಯರು

ಪ್ರಭು ಪೋತ್ನಾಳ ತಾಲೂಕು ಸದಸ್ಯರು

ಗುಂಡಪ್ಪ ಮುದ್ದಂಗುಡ್ಡಿ ತಾಲೂಕು ಸದಸ್ಯರು

ಮಲ್ಲಯ್ಯ ಹಣೆಗಿ
ತಾಲೂಕು ಸದಸ್ಯರು

ಮೌನೇಶ ಮಣೇಶ

ಆಂಬ್ರೇಶ ನಾಯಕ ತಾಲೂಕು ಸದಸ್ಯರು

ಬಸವಲಿಂಗಪ್ಪ ಪೋಲಿಸ್  ಪಾಟೀಲ್ ಶಿವು ಪೋತ್ನಾಳ ಉಪಸ್ಥಿತರಿದ್ದರು…

ವರದಿ, ಲಿಂಗರಾಜ್  ತಡಕಲ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend