ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಜ್ಞಾನನಿಧಿ ಶಿಷ್ಯವೇತನದ 130 ಜನ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ…!!!

Listen to this article

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸುಜ್ಞಾನನಿಧಿ ಶಿಷ್ಯವೇತನದ 130 ಜನ ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ

ವಿದ್ಯಾರ್ಥಿಗಳು ತಂದೆ ತಾಯಿಗೆ ಮಾದರಿ ನಾಯಕನಾಗಿ ಸಾರ್ಥಕತೆ ಮೆರೆಯಿರಿ
“ತಹಸೀಲ್ದಾರ್. ಅಮರೇಶ್ ಜಾಲಹಳ್ಳಿ ”

ಗುರುವೇ ಅರಿವು ಎಂಬತೆ ಮೊದಲು ತಂದೆ ತಾಯಿಯನ್ನ ಗುರುವಿನ ಸ್ಥಾನದಲ್ಲಿ ಇರಿಸಿ ಮಾದರಿ ನಾಯಕರಾಗಿ ಸಾರ್ಥಕತೆ ಮೆರೆದು ಉನ್ನತ ಸ್ಥಾನಕ್ಕೆ ಹೋಗಬೇಕು ಆಗಲೇ ದೇಶಕ್ಕೆ ಗೌರವ ನೀಡಿದಂತೆ ಎಂದು ತಹಸೀಲ್ದಾರ್ ಅಮರೇಶ್ ಜಾಲಹಳ್ಳಿ ಯವರು ತಿಳಿಸಿದರು

ಪಟ್ಟಣದ ಮರುಳಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮ ಸ್ಥಳ ಗ್ರಾಮೀಣ ಅಭಿವೃದ್ದಿ ಯೋಜನೆಯ( ಬಿ.ಸಿ ಟ್ರಸ್ಟ್ )ಹಾಗೂ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃ ಶ್ರೀ ಡಾ. ಹೇಮಾವತಿ ಹೆಗ್ಗಡೆಯವರ ಆಶೀರ್ವಾದ ದೊಂದಿಗೆ ಸುಜ್ಞಾನನಿಧಿ ಶಿಷ್ಯವೇತನದ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಸ್ವ ಇಚ್ಛೆಯಿಂದ ವಿದ್ಯಾರ್ಥಿ ವೇತನ ನೀಡಲು ಯಾರು ಕೂಡ ಮುಂದೆ ಬರುವುದಿಲ್ಲ ಸಾಮಾಜಿಕ ಕಳ ಕಳಿ ಇರುವಂತಹ ಮಂಜುನಾಥ ಸ್ವಾಮಿಯ ಈ ಸಂಸ್ಥೆ ಮುಂದೆ ಬಂದಿದೆ ನಿಜವಾಗಲೂ ಶ್ಲಾಘನೀಯ ಯಾರು ಕೂಡ ಈ ಶಿಷ್ಯ ವೇತನ ವನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂದು ಹೇಳಿದರು.

ಅನ್ನದಾನ ,ವಿದ್ಯಾದಾನ, ಆರೋಗ್ಯ ದಾನ,ಅಭಯ ದಾನ ಈ ನಾಲ್ಕು ಶಕ್ತಿಯನ್ನು ಕರುಣಿಸುವ ನಮ್ಮ ಕ್ಷೇತ್ರದ ಧರ್ಮಸ್ಥಳದ ಸ್ವ ಸಹಾಯ ಸಂಘದದಲ್ಲಿ ಮಾತ್ರ

ಕೊಟ್ಟೂರು ತಾಲೂಕಿನಲ್ಲಿ 131 ವಿದ್ಯಾರ್ಥಿಗಳಗೆ ಒಂದು ವರ್ಷದಲ್ಲಿ 26 ಲಕ್ಷ ರೂಪಾಯಿ ಯನ್ನು ಮೀಸಲಿಡಲಾಗಿದೆ ಈ ಯೋಜನೆ ಯನ್ನು ನಮ್ಮ ಸಂಸ್ಥೆಯ ವೀರೇಂದ್ರ ಹೆಗಡೆಯವರು ಹಾಗೂ ಅವರ ಧರ್ಮ ಪತ್ನಿ ಯವರು ನೀಡಿರುವುದು ಹೆಮ್ಮೆಯ ವಿಷಯ ಎಂದು ಸತೀಶ್ ಶೆಟ್ಟಿ ಯವರು ಮಾತನಾಡಿದರು.

ನಂತರ ಮಾತನಾಡಿದ ಮುಖಂಡ ಬಿ.ಮರಿಸ್ವಾಮಿ ಯವರು ಅಂಬೇಡ್ಕರ್ ರವರ ಮಾತಿನಂತೆ ಶಿಕ್ಷಣ ಎನ್ನುವುದು ಹುಲಿಯ ಹಾಲು ಇದ್ದಂತೆ ಇದನ್ನು ಕುಡಿದವರು ಘರ್ಜಿಸಲೇ ಬೇಕು ಜಾತಿ,ಧರ್ಮ, ಬಡತನ, ನಿರ್ಮೂಲನೆಗೆ ಶಿಕ್ಷಣ ಅತ್ಯಂತ ಮಹತ್ವ ಪಡೆದುಕೊಂಡಿದೆ ಧರ್ಮಸ್ಥಳ ಸ್ವ ಸಹಾಯ ಸಂಘದ ವತಿಯಿಂದ ಇಂತಹ ಹಲವಾರು ಯೋಜನೆಗಳು ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಲಿದೆ ಹಾಗೇ ಕಡಿಮೆ ಧರದಲ್ಲಿ ಮೆಡಿಕಲ್ ಅಂಗಡಿ, ಆಸ್ಪತ್ರೆಗಳು, ಶಾಲೆ ಗಳನ್ನು ತೆರೆದರೆ ಅನುಕೂಲ ವಾಗಲಿದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪ ಪಂ.ಅಧ್ಯಕ್ಷೆ ಬಿ ರೇಖಾ ರಮೇಶ್, ಪಟ್ಟಣ ಪಂಚಾಯತ್ ಉಪಾಧ್ಯಕ್ಷರು ಸಿದ್ದಯ್ಯ,ರಾಂಪುರದ ವಿವೇಕಾನಂದ,ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಆದ ಮಲ್ಲಿಕಾರ್ಜುನ್, ಯೋಗಿಶ್ವರ್ ದಿನ್ನೆ, ದೇವರ ಮನಿ ಕೊಟ್ರೇಶ್ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷರು, ಬ್ರಮ್ಮೆಶ್ ಜೈನ್ ಧಾರ್ಮಿಕ ಮುಖಂಡರು, ಕ್ಷೇತ್ರ ಯೋಜನಾಧಿಕಾರಿ ನವೀನ್ ಕುಮಾರ್ , ಕಾರ್ಯಕರ್ತರಾದ ಮಹಾಂತೇಶ, ಸೌಮ್ಯ, ಪ್ರಿಯಾಂಕಾ, ಅಜಿತ್ ಸೇವಾಪ್ರತಿನಿಧಿಗಳು ಮತ್ತು ಇತರ ಸಿಬ್ಬಂದಿ ವರ್ಗದವರು ಇದ್ದರು…

ವರದಿ, ಎಂ, ಮಲ್ಲಿಕಾರ್ಜುನ್

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend