ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಅಧಿಕಾರಿಗಳು ಅನುಮತಿ ನೀಡದೇ ಇರುವುದನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು…!!!

Listen to this article

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಹೃದಯ ಭಾಗದ ಅಂಬೇಡ್ಕರ್ ಭವನ ಮತ್ತು ಗ್ರಂಥಾಲಯ ಮುಂಭಾಗದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಅಧಿಕಾರಿಗಳು ಅನುಮತಿ ನೀಡದೇ ಇರುವುದನ್ನು ಖಂಡಿಸಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನಾ ರಾಣಿಯನ್ನು ನಗರದ ಪ್ರವಾಸಿ ಮಂದಿರದಿಂದ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯಲ್ಲಿ ವಿವಿಧ ಸಂಘ ಸಂಸ್ಥೆಗಳಪದಾಧಿಕಾರಿಗಳು. ದಲಿತ ಸಂಘಟನೆಗಳ ಮುಖಂಡರುಗಳು ಭಾಗವಹಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಾ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿ ಮಾತನಾಡಿದ ಸಂಘಟನೆಯ ಪದಾಧಿಕಾರಿಗಳು ಲಿಯೋ ಕ್ಲಬ್ ಅಪ್ ಮಾರ್ಗ ಹಾಗೂ ಅನಿತಾ ಚರಿತ್ರೆಗಳು ಟ್ರಸ್ಟ್ ನಗರದ ಅಂಬೇಡ್ಕರ್ ಭವನ ಮುಂಭಾಗವಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ದತ್ತು ಸ್ವೀಕರಿಸಿದ್ದು ಅಭಿವೃದ್ಧಿ ಮಾಡುವ ಯೋಜನೆ ಮತ್ತು ವಿವರಗಳ ಅನ್ವಯ ಯಥಾತ್ವವಾಗಿ ನಿರ್ವಹಿಸಲು ಸಹಕರಿಸುವಂತೆ ಒಪ್ಪಂದ ಅಂದಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಡಿಕೊಂಡಿದ್ದು.
ಈಗಿನ ಜಿಲ್ಲಾ ಡಿ ಡಿ ಪಿ ಐ ಮತ್ತು ಬಿಇಓ ಅಧಿಕಾರಿ ರಾಜಕೀಯ ಉದ್ದೇಶಗಳಿಂದ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿ ಇಲ್ಲ ಎಂದು ದೂರಿದ ಅವರು ಶಾಲಾ ಅಭಿವೃದ್ಧಿ ಕಾಮಗಾರಿ ಆರಂಭವಾಗಿದ್ದು 2023 ರಲ್ಲಿ ತದ ನಂತರವಾದರೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಲಿ ಅಥವಾ ಉಪ ನಿರ್ದೇಶಕರಾಗಳಿ ಸ್ವಯಂ ಪ್ರೇರಿತವಾಗಿ ಅನುಮತಿಯನ್ನು ಕೊಡಬಹುದಾಗಿತ್ತು. ಆದರೆ ಕೊಡುವ ಮನಸ್ಸಿಲ್ಲ ಎಂದು ಹೇಳಿದರು.
ಪ್ರತಿಭಟನೆಯ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಅಪರ ಜಿಲ್ಲಾಧಿಕಾರಿ ಭಾಸ್ಕರ ಎನ್ ರವರಿಗೆ ಮನವಿ ಪತ್ರ ಸಲ್ಲಿಸಿದ್ದು ಮನವಿ ಸ್ವೀಕರಿಸಿದ ನಂತರ ಭರವಸೆ ಕೊಟ್ಟು ಅವರು ಈ ವಿಚಾರ ಸರ್ಕಾರ ಗಮನಕ್ಕೆ ತಂದು ಅನುಮತಿ ನೀಡಲು ಪ್ರಯತ್ನಿಸಲಾಗುವುದು ಎಂದು ವಿವರಿಸಿದರು.
ಪ್ರತಿಭಟನೆಯಲ್ಲಿ ಲಿಯೋ ಕ್ಲಬ್ ಮಾರ್ಗ ಅಧ್ಯಕ್ಷರಾದ ನವೀನ್ ಕೃಷ್ಣ. ನಗರಸಭಾ ಸದಸ್ಯರಾದ ಅಗ್ರಹಾರ ಮುರಳಿ. ದಲಿತ ಮುಖಂಡರಾದ ಕವಾಲಿ ವೆಂಕಟರಮಣಪ್ಪ. ಜನಾರ್ದನ್ ಬಾಬು. ವಕೀಲರಾದ ಗೋಪಿ. ಮಾಜಿ ನಗರಸಭಾ ಸದಸ್ಯರಾದ ಪ್ರಕಾಶ್. ವಿಜಯನರಸಿಂಹ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸ್ ವಿ. ಮುನಿರಾಜು. ಕೊಡಗಲ್ ರಮೇಶ್. ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಯ ಮುಖಂಡರುಗಳು ಭಾಗವಹಿಸಿದರು…

ವರದಿ. ಎಂ. ಕೆ.ಮೂರ್ತಿ,ಚಿಕ್ಕಬಳ್ಳಾಪುರ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend