ವಾಲ್ಮೀಕಿ ನಿಗಮದ ಹಣದಲ್ಲಿ ಚುನಾವಣೆ ಮಾಡಿರುವ ಸಂಸದ ತುಕಾರಾಂ ಅವರನ್ನು ವಜಾಗೊಳಿಸಿ ಬಿಜೆಪಿ ನಾಯಕರ ಆಗ್ರಹ…!!!

Listen to this article

ವಾಲ್ಮೀಕಿ ನಿಗಮದ ಹಣದಲ್ಲಿ ಚುನಾವಣೆ ಮಾಡಿರುವ ಸಂಸದ ತುಕಾರಾಂ ಅವರನ್ನು ವಜಾಗೊಳಿಸಿ

ವಾಲ್ಮೀಕಿ ಹಗರಣದ ಹಣವನ್ನು ಚುನಾವಣೆಯಲ್ಲಿ ಬಳಸಿ ಹಣ, ಮದ್ಯ ಹಂಚಿ ಮತದಾರರ ಮೇಲೆ ಪ್ರಭಾವ ಬೀರಿ ಪ್ರಜಾಪ್ರಭುತ್ವ ವನ್ನು ಕಗ್ಗೊಲೆ ಮಾಡಿದೆ. ಹಣ ಹಂಚಿ ಗೆದ್ದಿರುವ ಕಾಂಗ್ರೇಸ್ ಸಂಸದ ತುಕಾರಾಂ ಗೆಲುವನ್ನು ಪ್ರಶ್ನಿಸಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಹೈಕೋರ್ಟ್ ನಲ್ಲಿ ದಾವೆ ಹೂಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾದಾ ಮೋಹನ್ ಅಗರ್ವಾಲ್ ಹೇಳಿದರು,ಜಿಲ್ಲೆಯ ಸಂಡೂರುನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾದಾ ಮೋಹನ್ ಅಗ್ರರ್ವಾಲ್ ರವರು ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ವಾಲ್ಮೀಕಿ ನಿಗಮದ ಹಣ ಬಳಕೆಯಾಗಿದೆ ಎಂದು ಇಡಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ,1975 ರಲ್ಲೂ ಇದೇ ರೀತಿ ಮದ್ಯ ಹಂಚಿ ಗೆದ್ದಿದ್ದ ಇಂದಿರಾಗಾಂಧಿ ಯವರ ಗೆಲುವನ್ನು ಪ್ರಶ್ನಿಸಿ ಕೋರ್ಟ್ ಗೆ ಹೋಗಿತ್ತು. ಕೋರ್ಟ್ ಸದಸ್ಯತ್ವವನ್ನು ರದ್ದುಪಡಿಸಿತ್ತು. ಇಂದಿರಾಗಾಂಧಿ ತುರ್ತುಪರಿಸ್ಥಿತಿಯನ್ನು ಘೋಷಿಸಿದರು. ಅದರಂತೆ ಸಂಸದ ತುಕಾರಾಂ ಪ್ರಕರಣವು ಅದೇ ರೀತಿ ಆಗಲಿದೆ ಎಂದರು. ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ಇಡಿ ಚಾರ್ಜ್ ಶೀಟ್ ಸಲ್ಲಿಸಿದೆ. ನಾಗೇಂದ್ರರನ್ನು ರಕ್ಷಣೆ ಮಾಡಲು ಎಸ್ ಐ ಟಿ ಕ್ಲಿನ್ ಚಿಟ್ ನೀಡಿದೆ. ನಾಗೇಂದ್ರ ಅವರೇ ಪ್ರಮುಖ ಆರೋಪಿ ಎಂದಿದೆ. ಹಗರಣ ಕುರಿತು ಬಿಜೆಪಿ ಆರೋಪ ಮಾಡಿದಾಗ ಸಿಎಂ ಸಿದ್ದರಾಮಯ್ಯ ನಡೆದೇ ಇಲ್ಲ ಎಂದು ಹೇಳಿ ಬಳಿಕ ಅಧಿವೇಶನದಲ್ಲೇ 89 ಕೋಟಿ ರೂ ಹಗರಣ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು. ಅವರು ಸಹ ಮುಡಾದಲ್ಲಿ ಬದಲಿ ನಿವೇಶನ ಪಡೆದು ಸುಮಾರು 4 ಸಾವಿರ ಕೋಟಿ ರೂ ಹಗರಣ ಮಾಡಿದ್ದಾರೆ ಎಂದು ರಾದಾ ಮೋಹನ್ ಅಗರ್ವಾಲ್ ಹೇಳಿದರು.

ಈ ಸಂಧರ್ಭದಲ್ಲಿ ಬಿಜೆಪಿ ಹಿರಿಯ ಧುರೀಣರು, ಮಾಜಿ ಸಚಿವರು ಅದ ಶ್ರೀರಾಮುಲು, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಮಾಜಿ ಸಂಸದ ವೈ ದೇವೇಂದ್ರಪ್ಪ, ವಿಧಾನ ಪರಿಷತ್ ಸದಸ್ಯ ವೈ ಎಂ ಸತೀಶ್, ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಇನ್ನಿತರರು ಉಪಸ್ಥಿತರಿದ್ದರು,

“ವಾಲ್ಮೀಕಿ ಹಗರಣದ ಹಣವನ್ನು ಚುನಾವಣೆಯಲ್ಲಿ ಬಳಸಿ ಹಣ, ಮದ್ಯ ಹಂಚಿ ಮತದಾರರ ಮೇಲೆ ಪ್ರಭಾವ ಬೀರಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದೆ ಹಣ ಹಂಚಿ ಗೆದ್ದಿರುವ ಕಾಂಗ್ರೇಸ್ ಸಂಸದ ತುಕಾರಾಂ ಗೆಲುವನ್ನು ಪ್ರಶ್ನಿಸಿ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಹೈಕೋರ್ಟ್ ನಲ್ಲಿ ದಾವೆ ಹೂಡಲಿದ್ದಾರೆ,ರಾದಾ ಮೋಹನ್ ಅಗರ್ವಾಲ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ…

ವರದಿ. ಉಜ್ಜಿನಯ್ಯ ಸಂಡೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend