ಕೂಡ್ಲಿಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ( ದಿಶಾ) ಸಭೆ ; ಕೂಡ್ಲಿಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟ ಶಾಸಕ – ಡಾ. ಶ್ರೀನಿವಾಸ್. ಎನ್. ಟಿ.

ವಿಜಯ ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ದಿ; 10-09-24 ರಂದು ಸನ್ಮಾನ್ಯ ಲೋಕಸಭಾ ಸದಸ್ಯರಾದ ಈ ತುಕಾರಾಂ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮನ್ವಯ, ಉಸ್ತುವಾರಿ ಸಮಿತಿ (ದಿಶಾ), ಕೇಂದ್ರ ಪುರಸ್ಕೃತ ಕಾರ್ಯಕ್ರಮಗಳ (2024-25) ಪ್ರಗತಿ ಪರಿಶೀಲನಾ ಸಭೆ ನಡೆಯಿತು*. ಸಂಸದರು ಮಾತನಾಡಿ, *ಸಂವಿಧಾನ ಮತ್ತು ಪ್ರಜಾಪ್ರಭುತ್ವದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಲು ಅಧಿಕಾರಿಗಳು ಶಾಸಕರಿಗೆ ಇಲಾಖೆವಾರು ಮಾಹಿತಿ ನೀಡಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಪರ ಕೆಲಸ ಮಾಡಬೇಕು ಎಂದರು.‌ ಸಮಾಜದಲ್ಲಿ ಎರಡು ಕಣ್ಣುಗಳು ಮುಖ್ಯ. ನಾವು ಶಾಸಕಾಂಗದಲ್ಲಿದ್ದರೇ, ಅಧಿಕಾರಿಗಳು ಕಾರ್ಯಾಂಗದಲ್ಲಿ ಇದ್ದಾರೆ. ಇಬ್ಬರೂ ಸೇರಿದಾಗ ಮಾತ್ರ ಸಂವಿಧಾನದ ಆಶಯವನ್ನು ಈಡೇರಿಸಲು ಸಾಧ್ಯ* ಎಂದರು.

ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ದಿಶಾ ಸಭೆಯಲ್ಲಿ ಭಾಗವಹಿಸಿ, ಕೂಡ್ಲಿಗಿ ಕ್ಷೇತ್ರದಲ್ಲಿ ಅಭಿವೃದ್ಧಿಯಿಂದ ಬಾಕಿ ಉಳಿದಿರುವ *ರಾಷ್ಟ್ರೀಯ ಹೆದ್ದಾರಿ- 50 ರ ಆಲೂರು, ಖಾನಹೊಸಹಳ್ಳಿ, ಇಮಡಾಪುರ, ಕ್ಯಾಸನಕೆರೆ, ಪಾಲಿಟೆಕ್ನಿಕ್ ಕಾಲೇಜು ಹತ್ತಿರ ಚರಂಡಿ ವ್ಯವಸ್ಥೆ ಮತ್ತು ಮೇಲು ಸೇತುವೆ ಕಾಮಗಾರಿಯನ್ನು ಕೈಗೊಂಡು ಸಮಸ್ಯೆಯನ್ನು ಬಗೆಹರಿಸಿ ಜನರಿಗೆ ಅನುಕೂಲ ಮಾಡಲು ಸಂಸದರು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು*. ಇಡೀ ರಾಜ್ಯದ ಪೈಕಿ *ನಮ್ಮ ಕೂಡ್ಲಿಗಿ ಮತ್ತು ಹರಪನಹಳ್ಳಿ ಕ್ಷೇತ್ರದಲ್ಲಿ ಬಾಲ್ಯವಿವಾಹಗಳು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದಕ್ಕೆ ಕಳವಳಗೊಂಡು ಇಂತಹ ಪಿಡುಗುಗೆ ಅನಕ್ಷರತೆಯೇ ಕಾರಣ ಎಂದೂ ಚಿಂತನೆ ಮಾಡಿ ಗಡಿ ಗ್ರಾಮಗಳಲ್ಲಿ ಪ್ರೌಢಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸುವೆ ಎಂದರು. ಹೀಗಾಗಿ ಬೇರೆ ಬೇರೆ ಅಭಿವೃದ್ಧಿ ಕಾರ್ಯಗಳು ಹಮ್ಮಿಕೊಳ್ಳಲು ಜಾಗ ಸಿಗುತ್ತದೆ. ಶಾಲೆ ಪ್ರಾರಂಭಿಸಲು ಭೂಮಿಯ ಕೊರತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ನಾವು ಕಾರ್ಯ ನಿರ್ವಹಿಸಲು ಸಹಕಾರ ಅಗತ್ಯ* ಎಂದರು. ನಮ್ಮ ಕ್ಷೇತ್ರದ *ಜಲಜೀವನ್ ಮಿಷಿನ್ ಯೋಜನೆ ಕಾಮಗಾರಿ ಅಡಿಯಲ್ಲಿ ಸಿ.ಸಿ. ರಸ್ತೆಯನ್ನು ಸರಿಪಡಿಸಲು ಸೂಚಿಸಿದರು. ಹಬ್ಬ ಮತ್ತು ಜಾತ್ರೆಗಳು ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು* ಎಂದರು. ಗುಂಡಿನ ಹೊಳೆಯಲ್ಲಿ *ತೋಟಗಾರಿಕೆ ಮತ್ತು ಹೈನುಗಾರಿಕೆ ಅಭಿವೃದ್ಧಿ ಪಡಿಸಲು ಶಾಸಕರು ವಿಚಾರ ಮಾಡಿದರು*. ಮಾನವ ಜನ್ಮ ಅನ್ನುವುದು ಇದ್ದರೇ, *ನಾವು ಬದುಕಿದಾಗ ಅಭಿವೃದ್ಧಿ ಮಾಡಲಿಲ್ಲ. ಸತ್ತಾಗ ಆದರೂ ಜನರು ನೆಮ್ಮದಿಯಿಂದ ಇರಲು ಕೂಡ್ಲಿಗಿ ಕ್ಷೇತ್ರದಲ್ಲಿ ಕಲ್ಲು -ಮುಳ್ಳು, ಕುಣಿ -ತಗ್ಗು, ಕಾಂಪೌಂಡ್ ಇಲ್ಲದೇ ಅಭಿವೃದ್ಧಿಯಿಂದ ಒಂಚಿತವಾಗಿರುವ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಿ ಪುಣ್ಯಕಟ್ಟಿಕೊಳ್ಳಿ* ಎಂದೂ ಸಂಸದರು, ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಅಧಿಕಾರಿಗಳನ್ನು ಎಚ್ಚರಿಸಿದರು. *ಹಾಗೆಯೇ, ಶೌಚಾಲಯ ನಿರ್ಮಾಣ, ಚರಂಡಿ ವ್ಯವಸ್ಥೆ, ರಸ್ತೆ ಅಭಿವೃದ್ಧಿ, ಮನೆ ನಿರ್ಮಾಣ, ಶುದ್ಧ ಕುಡಿಯುವ ನೀರು, ವಿದ್ಯುತ್ ತಂತಿ ಮತ್ತು ಕಂಬ ಸ್ಥಳಾಂತರ, ಅಂಗನವಾಡಿ ಕೇಂದ್ರ ಇನ್ನೂ ಮುಂತಾದ ಅಭಿವೃದ್ಧಿ ಪರ ಚರ್ಚಿಸಿದರು*. ಈ ವೇಳೆ ಹರಪನಹಳ್ಳಿ ಕ್ಷೇತ್ರದ ಮಾನ್ಯಶಾಸಕರಾದ ಶ್ರೀಮತಿ ಲತಾ ಮಲ್ಲಿಕಾರ್ಜುನ ಹಾಗೂ ಹೂವಿನ ಹಡಗಲಿ ಕ್ಷೇತ್ರದ ಶ್ರೀಯುತ ಕೃಷ್ಣ ನಾಯ್ಕ್ ಅವರು, ಮಾನ್ಯ ಜಿಲ್ಲಾ ಅಧಿಕಾರಿಗಳಾದ ಎಂ. ಎಸ್. ದಿವಾಕರ್, ಮಾನ್ಯ ಜಿಲ್ಲಾ ಕಾರ್ಯನಿರ್ವಹಣೆಯ ಅಧಿಕಾರಿಗಳಾದ
ಮೊಹಮ್ಮದ್ ಅಲಿ ಅಕ್ರಮ್ ಷಾ, ವಿವಿಧ ಇಲಾಖೆಯ ಜಿಲ್ಲಾಧಿಕಾರಿಗಳು, ತಾಲೂಕು ಅಧಿಕಾರಿಗಳು ಉಪಸ್ಥಿತರಿದ್ದರು. ‌…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend