ಕೂಡ್ಲಿಗಿಯ ಸುಂದರ ನಗರಕ್ಕಾಗಿ ಶ್ರಮಿಸುವೆ. – ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಕೂಡ್ಲಿಗಿಯ ಸುಂದರ ನಗರಕ್ಕಾಗಿ ಶ್ರಮಿಸುವೆ. – ಶಾಸಕ ಡಾ. ಶ್ರೀನಿವಾಸ್. ಎನ್. ಟಿ

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಪಟ್ಟಣದಲ್ಲಿ ದಿ; 05-09-24 ರಂದು ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಎಸ್. ಎ. ವಿ. ಟಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿಗಳ ದುರಸ್ತಿ ಮತ್ತು ನವೀಕರಣ ಹಾಗೂ ಇತರೆ ಕಾಮಗಾರಿ, ಡಾ. ಬಿ. ಆರ್. ಅಂಬೇಡ್ಕರ್ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್ ವರೆಗೆ ಪೇವಸ್೯ ( ಪಾದಾಚಾರಿಗಳ ಮಾರ್ಗ) ಅಳವಡಿಸುವ ಕಾಮಗಾರಿ, ಶ್ರೀ ದಿ. ಗುಳಿಗಿ ನಾಗರಾಜ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ದುರಸ್ತಿ ಮತ್ತು ನವೀಕರಣ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಯಾವುದೇ ಭೇದ ಭಾವ ಇಲ್ಲದೇ ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಕೂಡ್ಲಿಗಿಯ ಸುಂದರ ನಗರಕ್ಕಾಗಿ ನಿರ್ಧರಿಸಿರುವೆ. ರಸ್ತೆಯಲ್ಲಿ ಶಾಲಾ ಮಕ್ಕಳು, ಯುವಕರು, ಮಹಿಳೆಯರು, ಹಿರಿಯರು, ಯಾವುದೇ ಅಪಾಯ ಇಲ್ಲದಂತೆ ಪಾದಾಚಾರಿಗಳ ಮಾರ್ಗದ ಮೇಲೆ ಶಿಸ್ತು ಬದ್ಧವಾಗಿ ನಡೆಯಬೇಕು ಎಂಬ ದೃಷ್ಟಿಯಿಂದ ಕಾಮಗಾರಿಗೆ ಚಾಲನೆ ನೀಡಿರುವೆ ಎಂದರು. ನಮ್ಮ ತಂದೆಯವರಾದ ಮಾಜಿ ಶಾಸಕರು ದಿ. ಎನ್. ಟಿ. ಬೊಮ್ಮಣ್ಣನವರ ಕಾಲದಲ್ಲಿ ನಿರ್ಮಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಹಿರಿಯರು ಮತ್ತು ಈ ಭಾಗದ ಹಿರಿಯ ರಾಜಕಾರಣಿಯಾದ ದಿ.ಗುಳಿಗಿ ನಾಗರಾಜ ಅವರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ ಏಕ ಕಾಲದಲ್ಲಿ ತರಗತಿಯ ಕೊಠಡಿಗಳು ಶಿಥಿಲೀಕರಣಗೊಂಡಿರುವುದನ್ನು ಮನಗಂಡು ದುರಸ್ತಿಗೊಳಿಸಿ ಅಭಿವೃದ್ಧಿಗೆ ಒತ್ತು ಕೊಡುವೆ* ಎಂದರು. ಈಗಾಗಲೇ ಪಟ್ಟಣದಲ್ಲಿ ರಾಜಕಾಲುವೆ ಮತ್ತು ಚರಂಡಿಯನ್ನು ಸ್ವಚ್ಛತೆ ಗೊಳಿಸಿರುವೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ನೂರಾರು ಜನರಿಗೆ ಉದ್ಯೋಗ ಕೊಡುವ ನಿಟ್ಟಿನಲ್ಲಿ ಕೃಷಿ ತೋಟಗಾರಿಕೆಯ ಸಂಸ್ಥೆಯ ಅಭಿವೃದ್ಧಿಗೆ ಒತ್ತು ಕೊಡುವೆ ಎಂದೂ ತಿಳಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪ ನಾಯಕ ಹಾಗೂ ಉಪಾಧ್ಯಕ್ಷರಾದ ಲೀಲಾವತಿ ಪ್ರಭಾಕರ, ಸರ್ವ ಸದಸ್ಯರು, ಕೂಡ್ಲಿಗಿ ಬ್ಲಾಕ್ ಅಧ್ಯಕ್ಷರಾದ ಶ್ರೀ ಗುರುಸಿದ್ಧನ ಗೌಡ, ಮುಖಂಡರು, ಪ್ರಾಂಶುಪಾಲರು, ಅಧ್ಯಾಪಕರು, ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend