ಸಮಸಮಾಜ ನಿರ್ಮಾಣವೇ ಶರಣರ ಆಶಯ: ಅಶೋಕ ಬರಗುಂಡಿ…!!!

Listen to this article

ಸಮಸಮಾಜ ನಿರ್ಮಾಣವೇ ಶರಣರ ಆಶಯ: ಅಶೋಕ ಬರಗುಂಡಿ
ಗುಳೇದಗುಡ್ಡ: ಯಾವುದೇ ಜಾತಿ ಮತ ಭೇದವಿಲ್ಲದೇ ಸರ್ವರನ್ನೊಳಗೊಂಡ ಸಮಸಮಾಜದ ನಿರ್ಮಾಣವೇ ಶರಣ ಸಂಸ್ಕøತಿಯಾಗಿದೆ. ಇದರ ವಾರಸುದಾರರಾದ ಲಿಂಗಾಯತರು ತಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಬೇಕಾಗಿದೆ. ಪ್ರೀತಿಯನ್ನು ಹಂಚಿಕೊಳ್ಳುತ್ತಾ ಬೆಳೆಯುತ್ತಾ ವಿಶ್ವಕುಟುಂಬ ಯಾಗಬೇಕು ಎಂಬುದೇ ಶರಣರ ಆಶೆಯವಾಗಿತ್ತು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬರಗುಂಡಿ ಹೇಳಿದರು.
ಅವರು ಸೋಮವಾರ ಪಟ್ಟಣದ ಶಿವಕೃಪಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜಾಗತಿಕ ಲಿಂಗಾಯತ ಮಹಾಸಭಾದದ ತಾಲೂಕು ಘಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುಳೇದಗುಡ್ಡ ತಾಲೂಕಾ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಲಿಂಗವೆಂದರೆ ನಮ್ಮೊಳಗಿನ ಅರಿವಾಗಿದೆ. ಅದೊಂದು ವಿಶ್ವಪಥದ ಸದಾಚಾರದ ಜೀವನ ವಿಧಾನವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭೆ ಗುಳೇದಗುಡ್ಡ ತಾಲೂಕಾ ಘಟಕದ ಅಧ್ಯಕ್ಷ ರಾಚಣ್ಣ ಕೆರೂರ ಮಾತನಾಡಿ, ಲಿಂಗದೀಕ್ಷೆ ಎನ್ನುವುದು ಸೇವಾದೀಕ್ಷೆಯಾಗಿದೆ. ನಮ್ಮ ಹಾಗೂ ಜಗತ್ತಿನ ಕಲ್ಯಾಣವೇ ಮಹಾಸಭೆಯ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕಡಪಟ್ಟಿ, ಪ್ರಧಾನಕಾರ್ಯದರ್ಶಿ ರವಿ ಯಡಹಳ್ಳಿ, ಮೋಹನ್ ಕರನಂದಿ, ಮುಪ್ಪಣ್ಣ ಶೀಲವಂತ, ಮಲ್ಲಿಕಾರ್ಜುನ ಶೀಲವಂತ, ರವಿ ಅಂಗಡಿ, ಮಹಾಲಿಂಗಪ್ಪ ಕರನಂದಿ, ಗೀತಾ ತಿಪ್ಪಾ, ಸುರೇಖಾ ಗೆದ್ದಲಮರಿ, ಬಸವರಾಜ ಚವಡಿ, ಸಿದ್ಲಿಂಗಪ್ಪ ಬರಗುಂಡಿ, ಮುರುಗೇಶ ಶೇಖಾ, ಸುರೇಶ ರಾಜನಾಳ, ಪುತ್ರಪ್ಪ ಬೀಳಗಿ, ವಿರೂಪಾಕ್ಷ ಅರುಟಗಿ, ಯಲ್ಲಪ್ಪ ಮನ್ನಿಕಟ್ಟಿ, ಮಹಾದೇವ ನೀಲಕಂಠಮಠ, ನಿರ್ಮಲಾ ಬರಗುಂಡಿ, ಜಯಶ್ರೀ ಬರಗುಂಡಿ, ಕವಿತಾ ಬಂಕಾಪೂರ ಮತ್ತಿತರರು ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend