ಸಂಡೂರಿನ ಗುರುಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಕಾಸ ಪಥ ಕಾರ್ಯಕ್ರಮ…!!!

Listen to this article

ಭಾರತೀಯ ಸಂಸ್ಕೃತಿ ಉತ್ಸವ 7
ಸಂಡೂರಿನ ಗುರುಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ವಿಕಾಸ ಪಥ ಕಾರ್ಯಕ್ರಮದಲ್ಲಿ ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದ ಸದಾಶಿವ ಸ್ವಾಮೀಜಿ ಮಾತನಾಡಿದರು.
2025ರ ಜನವರಿ 29ರಿಂದ ಫೆಬ್ರವರಿ ಆರರವರೆಗೆ ಕಲಬುರ್ಗಿಯ ಸೇಡಂನಲ್ಲಿ 7ನೇ ಭಾರತೀಯ ಸಂಸ್ಕೃತಿ ಉತ್ಸವ ಜರುಗಲಿದೆ 9 ದಿನಗಳ ಈ ಉತ್ಸವಕ್ಕೆ ಪೂರಕವಾಗಿ ಕಲ್ಯಾಣ ಕರ್ನಾಟಕ ವಿಕಾಸ ಪಥ ಸಂಚಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಆದ್ದರಿಂದ ಸಂಡೂರಿನ ಎಲ್ಲರನ್ನು ಈ ಉತ್ಸವಕ್ಕೆ ಆಹ್ವಾನಿಸಲು ಬಂದಿದ್ದೇನೆ ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಆಹ್ವಾನಿಸಿದರು.
ಉತ್ಸವಕ್ಕೆ ಅಮೆರಿಕಾದ ಮಾಜಿ ಉಪಾಧ್ಯಕ್ಷರಾದ ಅಲ್ಗೋರ್ , ಮಾರೇಶ ದೇಶದ ಶಿಕ್ಷಣ ಕಾರ್ಯದರ್ಶಿಗಳಾದ ಶ್ರೀ ಯುಧಿಷ್ಠೀರ್ ಮನ್ ಬೋದ್ ,ಪ್ರಧಾನಿ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ೪ ರಾಜ್ಯಗಳ ರಾಜ್ಯಪಾಲರು, ಇನ್ಫೋಸಿಸ್ ಪ್ರತಿಷ್ಠಾನದ ಸುಧಾ ಮೂರ್ತಿ, ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಸೇರಿ 153 ಗಣ್ಯರು, ನಾಡಿನ ಶ್ರೇಷ್ಠ ಮಠಾಧೀಶರುಗಳು, ಸಂತರು, ಧರ್ಮದರ್ಶಿಗಳು, ಧಾರ್ಮಿಕ ಮುಖಂಡರು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಚಿಂತಕರು, ಕ್ರೀಡಾಪಟುಗಳು, ಗೌರವಾನ್ವಿತ ಎಲ್ಲಾ ವ್ಯಕ್ತಿಗಳು ಭಾಗಿಯಾಗಲಿದ್ದಾರೆ, ಕಾರ್ಯಕ್ರಮದಲ್ಲಿ 30 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸೇಡಂನ ಕೊತ್ತಲ ಬಸವೇಶ್ವರ ದೇವಸ್ಥಾನದ ಸದಾಶಿವ ಸ್ವಾಮಿಗಳು, ವಿರಕ್ತಮಠ ಸಂಡೂರಿನ ಪ್ರಭುಸ್ವಾಮಿಗಳು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಬಿಕೆಜಿ ಗಣಿ ಕಂಪನಿಯ ಮಾಲೀಕರಾದ ನಾಗನಗೌಡ ಇವರು,
ಬಳ್ಳಾರಿಯ ಸಂಸದರಾದ ಶ್ರೀ ತುಕಾರಾಂ ಇವರು ನಾಡೋಜ ಪ್ರಶಸ್ತಿ ಪುರಸ್ಕೃತರಾದ ವಿ ಟಿ ಕಾಳೆ ಇವರು, ಎಸ್ ಇ ಎಸ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಜಗದೀಶ್ ಬಸಾಪುರ ಇವರು ಹಾಗೂ ವಿವಿಧ ಗಣ್ಯರು ಹಾಗೂ ಸಂಸ್ಕೃತಿ ಪ್ರಿಯರು ಭಾಗವಹಿಸಿದ್ದರು.ಈ ಕಾರ್ಯಕ್ರಮವನ್ನು  ಅಚ್ಚುಕಟ್ಟಾಗಿ ನಡೆಯಲು ಎಲ್ಲಾ ವ್ಯವಸ್ಥೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸಂಡೂರು ಅಧ್ಯಕ್ಷರಾದ ಹಾಗೂ ಬಿಕೆಜಿ ಕಂಪನಿಯ ಗಣಿ ಮಾಲೀಕರಾದ ಶ್ರೀಯುತ ನಾಗನಗೌಡ ಇವರು ನೆರವೇರಿಕೊಟ್ಟರು…

ವರದಿ. ಉಜ್ಜಿನಯ್ಯ ಸಂಡೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend