ಅಕೇಶಿಯ ಪರಿಸರಕ್ಕೆ ಮಾರಕ ಅಶೋಕ್ ಸಿಗದಾಳ್…!!!

Listen to this article

ಅಕೇಶಿಯಾ ಜೀವವೈವಿಧ್ಯ ಕ್ಕೆ ಮಾರಕ ಜಾಗತಿಕ ತಾಪಮಾನಕ್ಕೆ ಪ್ರೇರಕ ಅಂತ ಅದು ಎಷ್ಟೇ ಬಿಸಿಲಿನ ವಾತಾವರಣ ಇದ್ದರೂ ಅದರಲ್ಲಿರುವ ತೇವಾಂಶವನ್ನ ಹೀರಿಕೊಂಡು ಸದಾ ಹಸಿರಾಗಿ ವಾತಾವರಣವನ್ನ ಸದಾ ಬಿಸಿಯಾಗಿ ಇಡುವ ಕಾರಣ ,ಯಾವುದೇ ಪ್ರಾಣಿ ಪಕ್ಷಿಗಳು ಇದರ ನೆರಳಲ್ಲಿ ಮಲಗುವುದೂ ಕೂಡ ಇಲ್ಲ.ಜೇನು ಗೂಡುಕಟ್ಟುವುದಿಲ್ಲ.ಒಟ್ಟಿನಲ್ಲಿ ಪರಿಸರಕ್ಕೆ ಮಾರಕ ಅಂತ ನಿಶೇಧ ಮಾಡಲಾಗಿತ್ತು.
ಲೀಸ್ ಗೆ ಪಡೆದ ಎಂಪಿಎಮ್ ಇದರ ನೆಡತೋಪನ್ನ ಮಲೆನಾಡಿನ ನೈಸರ್ಗಿಕ ಕಾಡು ಕಡಿದು ಬೆಳಸಲಾಯಿತು.ಈಗ ಬೆಳದ ಅಕೇಶಿಯ ಮರ ಕಡಿದು ಪುನಃ ಮತ್ತೆ ನಾಟೀ ಕಾರ್ಯ ಆರಂಭಿಸಲಾಗಿದೆ.ಮಾಹಿತಿ ಪ್ರಕಾರ ಇಂದೂ ನೆಡುತ್ತಿದ್ದಾರೆ.ಎರಡು ಲಕ್ಷ!!ಗಿಡಗಳು ನಾಟಿಗೆ ಸಜ್ಜಾಗಿವೆ ಎಂದು ತಿಳಿದುಬಂದಿದೆ.
ಪಶ್ಚಿಮ ಘಟ್ಟಗಳ ಉಳಿವಿಗೆ ಮಾರಕವಾದ ಇಂತಹ ಗಿಡಗಳನ್ನ ನೆಡುವ ಕಾರ್ಯ ಪಶ್ಚಿಮ ಘಟ್ಟಗಳಲ್ಲೇ ಆಗುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು ಸರ್ಕಾರಗಳು ಆರೋಪ ಹೋರಿಸುವುದು ಇಲ್ಲಿನ ಸಾಮಾನ್ಯ ಅನ್ನದಾತನನ್ನ.ಕೃಷಿ ಭೂಮಿಯಿಂದಲೇ ಬೆಟ್ಟಕುಸಿತ ಆಗುತ್ತೆ ಅನ್ನುವವರಿಗೆ ಇದೇಕೆ ಕಾಣೋಲ್ಲ ಅನ್ನೋದೆ ಯಕ್ಷಪ್ರಶ್ನೆ..!?
ಪರಿಸರಕ್ಕಾಗಿ ನಾವು ಇದನ್ನ ವಿರೋಧಿಸಬೇಕಾ..?ಒಪ್ಪಿಕೊಳ್ಳಬೇಕಾ..?ಅಶೋಕ. ಸಿಗದಾಳ್…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend