ಹೊಳಲ್ಕೆರೆಯಲ್ಲಿ ನಡೆದ ಡಿ.ದೇವರಾಜ ಅರಸು ಜಯಂತಿಯನ್ನು ತಹಸೀಲ್ದಾರ್ ಬೀಬಿ ಫಾತೀಮಾ ಉದ್ಘಾಟಿಸಿದರು….!!!

Listen to this article

ಹೊಳಲ್ಕೆರೆ : ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು, ಈ ರಾಷ್ಟಕಂಡ ಅಪ್ರತಿಮ ಮುತ್ಸದ್ದಿ ರಾಜಕಾರಣಿ, ಅವರ ಚಿಂತನೆ ಸಕಾರಗೊಳಿಸುವ ಅಗತ್ಯವಿದೆ ಎಂದು ತಹಶಿಲ್ದಾರ್ ಬಿಬಿ ಫಾತೀಮಾ ಬಣ್ಣಿಸಿದರು.
ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಪಟ್ಟಣದ ದೇವರಾಜು ಅರಸು ಭವನದಲ್ಲಿ ಮಂಗಳವಾರ ಕೈಗೊಂಡ ಡಿ.ದೇವರಾಜು ಅರಸು ೧೦೯ ಜನ್ಮಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇವರಾಜು ಅರಸು ಎರಡು ಬಾರಿ ಮುಖ್ಯ ಮಂತ್ರಿಯಾಗಿ ನಾಡಿಗೆ ಅಪಾರವಾದ ಕೊಡುಗೆ ಕೊಟ್ಟಿದ್ದಾರೆ. ಉಳುವವನೇ ಭೂಮಿ ಒಡೆಯ. ವಿದ್ಯಾರ್ಥಿಗಳಿಗೆ ಸ್ಕಾಲರ್ ಶೀಪ್, ಉಚಿತ ಶಿಕ್ಷಣ, ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣ ಪಡೆಯಲು ಹಾಸ್ಟೆಲ್ ಹೀಗೆ ಹಿಂದುಳಿದ ವರ್ಗಗಳ ಏಳಿಗಾಗಿ ಶ್ರಮಿಸಿ ಅಪಾರ ಕೊಡುಗೆ ಕೊಟ್ಟಿದ್ದಾರೆ ಎಂದರು.
ಉಪನ್ಯಾಸ ನೀಡಿದ ಉಪನ್ಯಾಸಕ ನಿಸಾರ್ ಅಹ್ಮದ್, ದೇವರಾಜ ಅರಸು ಜ್ಯಾತ್ಯತೀತ, ಸಾಮಾಜಿಕ ನ್ಯಾಯ ತತ್ವದಲ್ಲಿ ನಂಬಿಕೆ ಇಟ್ಟಿದ್ದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ಕೊಡಲು ಹೋರಾಡಿದರು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅರಸು ಅವರು ಜಾರಿಗೆ ತಂದ ಯೋಜನೆಗಳ ಫಲವನ್ನು ನಾವೆಲ್ಲರೂ ಇಂದಿಗೂ ಅನುಭವಿಸುತ್ತಿದ್ದೇವೆ. ಸ್ವಂತಕ್ಕಾಗಿ ಏನು ಮಾಡಿಕೊಳ್ಳದೆ ಸರ್ವ ಸಮಾಜದ ಏಳಿಗೆಗಾಗಿ ದುಡಿದಂತಹ ವ್ಯಕ್ತಿ. ಈ ರಾಜ್ಯ ಕಂಡ ಅಪ್ರತಿಮಾ ಹೋರಟಗಾರ, ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿ, ಹಾವನೂರು ವರದಿ ಜಾರಿ ಮಾಡಿ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದರು. ೧೯೭೩ ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಹೆಗ್ಗಳಿಕೆ ಅವರದು, ನಾವೆಲ್ಲರು ಸ್ವಾಭಿಮಾನದಿಂದ ತಲೆ ಎತ್ತಿ ನಿಲ್ಲುವಂತೆ ಶಕ್ತಿಯನ್ನು ತುಂಬಿದಂತಹ ವ್ಯಕ್ತಿಯ ಜನ್ಮದಿನಾಚರಣೆ ಅರ್ಥಪೂರ್ಣವಾಗಿ ಅಚರಿಸಬೇಕೆಂದು ತಿಳಿಸಿದರು.
ತಾ.ಪಂ. ಇಓ ರವಿಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಶ್ರೀನಿವಾಸ್, ಸಹಾಯಕ ನಿರ್ದೇಶಕ ಹನುಮಂತಪ್ಪ, ಡಾ.ಹೆಚ್.ಜಿ.ಉಮಾಪತಿ, ಸುರೇಂದ್ರನಾಥ್, ತಾ.ಹಿಂದುಳಿದ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್, ಕಸಾಪ ಅಧ್ಯಕ್ಷ ಶಿವಮೂರ್ತಿ, ದೇವರಾಜಯ್ಯ, ಹನುಮಂತಪ್ಪ, ಎ.ಚಿತ್ತಪ್ಪ ಇದ್ದರು,
ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ಹೊಳಲ್ಕೆರೆಯಲ್ಲಿ ನಡೆದ ಡಿ.ದೇವರಾಜ ಅರಸು ಜಯಂತಿಯನ್ನು ತಹಸೀಲ್ದಾರ್ ಬೀಬಿ ಫಾತೀಮಾ ಉದ್ಘಾಟಿಸಿದರು.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend