ಅಡಿಕೆ ಬೆಳೆಗರಾರು ಗಮನಿಸಬೇಕಾದ ಪ್ರಮುಖ ವಿಷಯ…!!!

Listen to this article

ಚಿತ್ರದುರ್ಗ: ಇತ್ತಿಚಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರು ಹಾಗೂ ಮಧ್ಯವರ್ತಿಗಳ ನಡುವೆ ತುಂಬಾ ಮೊಸ, ವಂಚನೆ ನಡೆಯುತ್ತಿದೆ. ಇದನ್ನು ತಡೆಗಟ್ಟಲು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಅಡಿಕೆ ಬೆಳೆಗಾರರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ.

ಮಾಹಿತಿ ಇಲ್ಲಿದೆ ತಿಳಿಯಿರಿ.

ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಿಗೆ ತಿಳಿಯಪಡಿವುದೇನೆಂದರೆ ಪ್ರಸಕ್ತ 2024ನೇ ಸಾಲಿನಲ್ಲಿ ಅಡಿಕೆ ಫಸಲು ಕೊಯ್ಲಿನ ಕಾಲ ಆರಂಭ ಆಗಿದೆ. ಅಡಿಕೆ ಬೆಳೆಗಾರರು ತಮ್ಮ ತೋಟಗಳಲ್ಲಿಯೇ ಅಡಿಕೆಯನ್ನು ಮಾರಾಟ ಮಾಡುತ್ತಿದ್ದಾರೆ. ಅಂದರೆ ತೋಟವನ್ನು ಕೇಣಿಗೆ ನೀಡುವುದು, ಹಸಿ ಅಡಿಕೆಯನ್ನೇ ಮಾರಾಟ ಮಾಡುವುದು. ಇಲ್ಲವೇ ಒಣ ಅಡಿಕೆ ತಯಾರಿಸಿ ಮಾರುವುದು ಇತ್ಯಾದಿ. ಇದೇ ರೀತಿಯಾಗಿ ಕಳೆದ ವರ್ಷಗಳಲ್ಲಿ ನಡೆದ ವಹಿವಾಟಿನಲ್ಲಿ ರೈತರಿಗೆ ವ್ಯಾಪಾರಸ್ಥರು ಸರಿಯಾಗಿ ಹಣವನ್ನು ಬಟವಾಡೆ ಮಾಡದೇ ಸತಾಯಿಸಿದ್ದಾರೆ.

ಈ ಬಗ್ಗೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ತನಿಖೆ ಕೂಡ ನಡೆಯುತ್ತಿದೆ. ಹಲವು ರೈತರು ವಂಚನೆಗೆ ಒಳಗಾಗಿರುತ್ತಾರೆ. ಈ ನಿಟ್ಟಿನಲ್ಲಿ ಕಳೆದ ಸಾಲಿನಲ್ಲಿ ಕೆಲವು ರೈತರಿಗೆ ಆಗಿರುವ ಕಹಿ ಅನುಭವದ ಹಿನ್ನೆಲೆ ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರಲ್ಲಿ ಕೋರುವುದೇನೆಂದರೆ, ಈ ಮೇಲ್ಕಂಡಂತೆ ಅಡಿಕೆ ಮಾರಾಟದ ಸಮಯದಲ್ಲಿ ಮುಂಗಡವಾಗಿ ಎಲ್ಲಾ ಹಣವನ್ನು ಪಡೆದು ಮಾರಾಟ ಮಾಡುವುದು ಉತ್ತಮ.

ರೈತರು ಬರೀ ನಂಬಿಕೆಗಳ ಮೇಲೆ ಇಲ್ಲವೇ ಚೀಟಿಗಳ ಮೇಲೆ ಬರೆದುಕೊಂಡು ವ್ಯವಹಾರ ನಡೆಸುತ್ತಿದ್ದು, ಈ ರೀತಿಯ ವಹಿವಾಟಿನಲ್ಲಿ ವ್ಯಾಪಾರಸ್ಥರು ರೈತರಿಗೆ ಹಣ ನೀಡದಿದ್ದಾಗ, ಕಾನೂನಿನ ಮೂಲಕ ರೈತರು ಹಣವನ್ನು ಪಡೆಯಲು ಸಾಧ್ಯ ಆಗುವುದಿಲ್ಲ.

ಆದ್ದರಿಂದ ರೈತರು ತಮ್ಮ ಅಡಿಕೆ ಮಾರುವ ಸಮಯದಲ್ಲಿ ಮುಂಗಡವಾಗಿ ಎಲ್ಲಾ ಹಣವನ್ನು ಪಡೆಯಲು ಸಾಧ್ಯ ಆಗದಿದ್ದರೆ, ವ್ಯಾಪಾರಸ್ಥರು ಅಥವಾ ಖೇಣಿದಾರರಿಂದ ಕಾನೂನಿನ ಅಡಿಯಲ್ಲಿ ಮಾನ್ಯತೆ ಪಡೆದಿರುವ Negotiable instrumentಗಳಾದ ಚೆಕ್ ಅಥವಾ ಪ್ರಾಮಿಸರಿ ನೋಟ್ ಅಥವಾ Bill of Exchangeನಂತಹ ಸೂಕ್ತ ಭದ್ರತೆ ಪಡೆದುಕೊಂಡು ವಂಚನೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ ತಮ್ಮ ಬೆಳೆಯನ್ನು ಮಾರಾಟ ಮಾಡಲು ಕೋರಿದೆ ಎಂದು ಪ್ರಕಟಣೆಯ ಮೂಲಕ ಎಸ್.ಪಿ.ರಂಜಿತ್ ಕುಮಾರ್ ಬಂಡಾರು ಮನವಿ ಮಾಡಿದ್ದಾರೆ.

ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಅಡಿಕೆ ಬೆಳೆಗಾರರು ಆಗಾಗ ಮೋಸ ಹೋಗುತ್ತಲೇ ಇದ್ದಾರೆ. ಈ ಮೋಸದ ಜಾಲವನ್ನು ತಡೆಗಟ್ಟಲು ಜಿಲ್ಲಾ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಭಂಡಾರು ಅವರು ಅಡಿಕೆ ಬೆಳೆಗಾರರಿಗೆ ಪ್ರಕಟಣೆ ಮೂಲಕ ಜಾಗೃತಿ ಮೂಡಿಸುತ್ತಿರುವುದು ವಿಶೇಷವಾಗಿದೆ. ಈ ಪ್ರಕಟಣೆಯಂತೆ ರೈತರು ಸಹ ಎಚ್ಚೆತ್ತುಕೊಳ್ಳಬೇಕಾಗಿದೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend