ಜಸ್ಟಿಸ್ ಶಿವರಾಜ ಪಾಟೀಲ್ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ವಿಶ್ವ ಸೊಳ್ಳೆ ದಿನ ಆಚರಣೆ…!!!

Listen to this article

ಜಸ್ಟಿಸ್ ಶಿವರಾಜ ಪಾಟೀಲ್ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ವಿಶ್ವ ಸೊಳ್ಳೆ ದಿನ ಆಚರಣೆ

ರಾಸ್ ಅವರ ಕೊಡುಗೆಗಳನ್ನು ಸ್ಮರಿಸಲು ವಿಶ್ವ ಸೊಳ್ಳೆ ದಿನ ಆಚರಣೆ; ಸರೋಜ.ಕೆ
ರಾಯಚೂರು,:- ವಿಶ್ವಾದ್ಯಂತ ಪ್ರತಿ ವರ್ಷ ಆಗಸ್ಟ್ 20ರಂದು ವಿಶ್ವ ಸೊಳ್ಳೆ ದಿನವಾಗಿ ಆಚರಿಸಲಾಗುತ್ತದೆ. ಮಲೇರಿಯಾಗೂ ಮತ್ತು ಹೆಣ್ಣು ಅನಾಫಿಲೀಸ್ ಸೊಳ್ಳೆಗೂ ಇರುವ ಸಂಬoಧವನ್ನು ಮೊಟ್ಟಮೊದಲ ಬಾರಿಗೆ ಕಂಡುಹಿಡಿದ ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಅವರ ಕೊಡುಗೆಯನ್ನು ಸ್ಮರಿಸಲು ಈ ದಿನ ಆಚರಿಸಲಾಗುತ್ತದೆ ಎಂದು ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಸರೋಜ.ಕೆ ಅವರು ಹೇಳಿದರು.

ಅವರು  ಬುಧವಾರ ದಂದು ನಗರದ ಜಸ್ಟಿಸ್ ಶಿವರಾಜ ಪಾಟೀಲ್ ಪಿಯು ಕಾಲೇಜಿನಲ್ಲಿ ವಿಶ್ವ ಸೊಳ್ಳೆ ದಿನಾಚರಣೆ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ, ಮಾತನಾಡಿದರು.

ಸೊಳ್ಳೆಗಳಿಂದ ಉಂಟಾಗುವ ರೋಗಗಳು, ಈ ರೋಗಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಈ ಕೀಟಗಳನ್ನು ಎದುರಿಸಲು ಒಟ್ಟಾಗಿ ನಿಲ್ಲಲು ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತದೆ. ರೊನಾಲ್ಡ್ ರಾಸ್ ಮತ್ತು ಇತರ ವಿಜ್ಞಾನಿಗಳ ಸಂಶೋಧನೆಗಳನ್ನು ಸಹ ಈ ದಿನದಂದು ಸ್ಮರಿಸಲಾಗುತ್ತದೆ ಎಂದರು.

ಆಗಸ್ಟ್ 20, 1897 ರಂದು ಬ್ರಿಟಿಷ್ ವೈದ್ಯ ಸರ್ ರೊನಾಲ್ಡ್ ರಾಸ್ ಅದ್ಭುತ ಆವಿಷ್ಕಾರವೊಂದನ್ನು ಮಾಡಿದ್ದರು. ಹೆಣ್ಣು ಅನಾಫಿಲಿಸ್ ಸೊಳ್ಳೆಗಳು ಮಾನವರಲ್ಲಿ ಮಲೇರಿಯಾ ಹರಡುತ್ತವೆ ಎಂಬುದನ್ನು ಅವರು ಕಂಡು ಹಿಡಿದಿದ್ದರು. ಮಲೇರಿಯಾಗೆ ಕಾರಣವಾಗುವ ಪರಾವಲಂಬಿ ವೈರಸ್ ಸೊಳ್ಳೆಯ ಹೊಟ್ಟೆಯಲ್ಲಿರುತ್ತದೆ ಎಂಬುದನ್ನು ಅವರು ಜಗತ್ತಿಗೆ ತೋರಿಸಿಕೊಟ್ಟಿದ್ದರು. ಇತಿಹಾಸದ ಈ ಕ್ಷಣದ ನೆನಪಿಗಾಗಿ ವಿಶ್ವ ಸೊಳ್ಳೆ ದಿನ ಆಚರಣೆ ಆರಂಭವಾಯಿತು ಎಂದು ಹೇಳಿದರು.

ಮಲೇರಿಯಾ ಸೊಳ್ಳೆಯಿಂದ ಹರಡುವ ಅತ್ಯಂತ ಸಾಮಾನ್ಯ ಮತ್ತು ಪ್ರಚಲಿತ ರೋಗಗಳಲ್ಲಿ ಒಂದಾಗಿದೆ. ಡೆಂಗ್ಯೂ ಈಡಿಸ್ ಹೆಸರಿನ ಸೊಳ್ಳೆಯಿಂದ ಹರಡುತ್ತದೆ. ಇದು ನಿಂತ ಜಲಮೂಲಗಳಲ್ಲಿ ವಾಸಿಸುವ ಮೂಲಕ ರೋಗವನ್ನು ಹರಡುತ್ತದೆ. ಈ ಕೀಟಗಳು ನಿರ್ಮಾಣ ಸ್ಥಳಗಳಲ್ಲಿ, ನೀರಿನ ಟ್ಯಾಂಕ್‌ಗಳಲ್ಲಿ, ಸಸ್ಯಗಳು, ಚರಂಡಿಗಳು ಇತ್ಯಾದಿಗಳಲ್ಲಿ ಕಂಡುಬರುವ ನಿಂತ ನೀರಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಚಿಕುನ್ ಗುನ್ಯಾ ಇದು ಈಡಿಸ್ ಈಜಿಪ್ಟಿ ಎಂಬ ಸೊಳ್ಳೆಗಳಿಂದ ಹರಡುತ್ತದೆ. ಜ್ವರ, ಕೀಲು ನೋವು, ಸ್ನಾಯು ನೋವು, ಕೀಲುಗಳ ಊತ, ದದ್ದುಗಳು, ತಲೆನೋವು ಇತ್ಯಾದಿಗಳು ಈ ರೋಗದ ಸಾಮಾನ್ಯ ಲಕ್ಷಣಗಳಾಗಿವೆ. ಜಿಕಾ ವೈರಸ್ ಈಡಿಸ್ ಸೊಳ್ಳೆಗಳಿಂದಲೂ ಹರಡುತ್ತದೆ ಹಾಗೂ ಹಳದಿ ಜ್ವರ ಇದು ಈಡಿಸ್ ಸೊಳ್ಳೆಯಿಂದ ಹರಡುವ ಮತ್ತೊಂದು ವೈರಲ್ ಸೋಂಕು ಆಗಿದೆಂದರು.

ವಿಶ್ವ ಸೊಳ್ಳೆ ದಿನ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿ ವನಿತಾ ಅವರು ಭೋದಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಸಂಧ್ಯಾ ನಾಯಕ, ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಬಸಯ್ಯ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ಆಶಾ ಕಾರ್ಯಕರ್ತೆ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮ ಇದ್ದರು….

ವರದಿ. ನಾಗರಾಜ್ ರಾಯಚೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend