ಚಳ್ಳಕೆರೆ ನಗರಕ್ಕೆ ಜಲ ದಿಗ್ಬಂಧನ :…!!!

Listen to this article

ಚಳ್ಳಕೆರೆ ನಗರಕ್ಕೆ ಜಲ ದಿಗ್ಬಂಧನ :

ಚಳ್ಳಕೆರೆ :

ಬಯಲು ಸೀಮೆಯಲ್ಲಿ ತಡ ರಾತ್ರಿ ಸುರಿದ ಬಾರೀ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.

ನಗರದ ತಗ್ಗು ಪ್ರದೇಶದ ನಿವಾಸಿಗಳ ಗೋಳು ಕೇಳುವವರು ಇಲ್ಲವಾಗಿದೆ‌, ರಾಜ‌ಕಾಲುವೆ ಅಕ್ಕ ಪಕ್ಕದ ನಿವಾಸಿಗಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಈಡೀ ರಾತ್ರಿ ಯಿಡಿ ನಿದ್ದೆಯಿಲ್ಲದೆ ಮಳೆಯಲ್ಲಿ ತೊಯ್ದ ಮನೆಗಳಲ್ಲಿ ಮಕ್ಕಳು, ವಯೋವೃದ್ದರು ಬೆಳಗಾಗುವುತನಕ ಜಪ ಮಾಡಿದ್ದಾರೆ.

ಪ್ರಸ್ತುತ ವರ್ಷದಲ್ಲಿ ದಾಖಲೆ‌ ಮಳೆ ಸುರಿದ ವರುಣನಿಗೆ ಈಡೀ ನಗರ ತಲ್ಲಣಗೊಂಡಿದೆ, ರಾಜಕಾಲುವೆ ಅಕ್ಕಪಕ್ಕದ ಜನ ಜೀವನ ತುಂಬಾ ನೋವು ಅನುಭವಿಸುವಂತಾಗಿದೆ.

ನಗರದಲ್ಲಿ ಸರಿಯಾದ ಸೂರು ಇಲ್ಲದೆ ಇದ್ದ ಜಾಗದಲ್ಲಿಯೇ ‌ಸೂರು‌ ನಿರ್ಮಿಸಿಕೊಂಡ ನಗರವಾಸಿಗಳ ಜೀವಕ್ಕೆ ಕುತ್ತು ತಂದ ವರುಣನಿಗೆ ಬಯಲು ಸೀಮೆಯ ಜನ ವಯೋನಾಡಿನ ದರ್ಶನ ಒಮ್ಮೆ ನೆನಪು ಮಾಡಿಕೊಳ್ಳುವ ಅನಿವಾರ್ಯ ಉಂಟಾಗಿದೆ.

ಇನ್ನೂ ಮುಂಗಾರು ಮುನ್ನವೇ ರಾಜಕಾಲುವೆಗಳು, ಚರಂಡಿಗಳು, ಹಳ್ಳಕೊಳ್ಳಗಳನ್ನು ದುರಸ್ತಿ‌ ಮೂಲಕ ಸ್ವಚ್ಚತೆ ಮಾಡಬೇಕಾದ ನಗರಸಭೆ ಮಾತ್ರ ನೆಪ ಮಾತ್ರಕ್ಕೆ ರಾಜಕಾಲುವೆಯಲ್ಲಿ ಒಮ್ಮೆ ಜೆಸಿಬಿ ಸದ್ದು ಮಾಡಿಸಿ ನಮ್ಮ ಕಾರ್ಯ ಮುಗಿತು ಎಂದು ಕೈ ತೊಳೆದುಕೊಂಡಿದ್ದಾರೆ,

ಇನ್ನೂ ಇತ್ತ ರಾಜಕಾಲುವೆಗಳ ದುರಸ್ತಿ‌ ಮೂಲಕ ಅಭಿವೃದ್ಧಿಪಡಿಸಬೇಕಾದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವೈಪಲ್ಯ ಎದ್ದು ಕಾಣುತ್ತಿವೆ ಪ್ರತಿ ವರ್ಷವೂ ಕೂಡ ಮಳೆಗಾಲದ ಸಮಯದಲ್ಲಿ ಈ ಬಾಗದ ಜನರಿಗೆ ಮನೆಯೊಳಗೆ‌ ನೀರು‌ ನುಗ್ಗುವುದು ಮಾಮೂಲಿಯಾಗಿದೆ ಇತ್ತ ಆಡಳಿತ ಚುಕ್ಕಾಣಿ ಹಿಡಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಂತ ಕೊಳಚೆಗೇರಿ‌ ನಿವಾಸಿಗಳಿಗೆ ಶಾಶ್ವತವಾಗಿ ಪರಿಹಾರ ಹೊದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯ ಮಾತಾಗಿದೆ.

ಎಲ್ಲೆಲ್ಲಿ ಅಸ್ತವ್ಯಸ್ತ :

ನಗರದ ರಹಿಂ ನಗರ, ಸೂಜಿಮಲ್ಲೆಶ್ವರ ನಗರ, ಹಳೆನಗರ , ಕಾಟಪನಹಟ್ಟಿ ಅಂಬೇಡ್ಕರ್ ನಗರ, ಪಾವಗಡ ರಸ್ತೆ ಹಿಕ್ಕೆಲ, ಈಗೇ ರಾಜಕಾಲುವೆ ಹಾದು ಹೋಗುವ ಮಾರ್ಗ ಪಕ್ಕದ ನಿವಾಸಿಗಳ ಪಾಡು ಹೇಳತಿರದು. ರಾಜಕಾಲುವೆಯಲ್ಲಿ ಸ್ವಚ್ಚತೆ ಇಲ್ಲದೆ ಗಿಡಗಂಟೆ ಬೆಳೆದು ಮಳೆಯ ನೀರು ಮುಂದಕ್ಕೆ ಸಾಗದೆ ಮನೆಗಳಿಗೆ ನೀರು‌ನುಗ್ಗಿ ಮನೆಯಲ್ಲಿ ಇರುವ ದವಸ ಧಾನ್ಯಗಳನ್ನು ಸಂಪೂರ್ಣವಾಗಿ ನೀರಿನಲ್ಲಿ ಅವೃತವಾಗಿರುವುದರಿಂದ ಅಲ್ಲಿನ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

ಮನೆಗಳಿಗೆ‌ ನೀರು‌ ನುಗ್ಗಿದ‌ ಮೇಲೆ ರಾಜಕಾಲುವೆ ಸ್ವಚ್ಚತೆಗೆ ‌ಮುಂದಾದ ನಗರಸಭೆ ಅಧಿಕಾರಿಗಳು :

ಹೌದು ಬಯಲು ಸೀಮೆಯಲ್ಲಿ ವರುಣ ಕೃಪೆ ತೋರುವುದೆ ಅತೀ ಕಡಿಮೆ ಆದರೆ ಮಳೆ ಇಲ್ಲದಾಗ ರಾಜಕಾಲುವೆ, ಸ್ವಚ್ಚತೆ ಮಾಡಬೇಕಾದ ಅಧಿಕಾರಿಗಳು, ಈಗ ಮಳೆ ನೀರು ಮನೆಗಳಿಗೆ ನುಗ್ಗಿ ಕೊಳಚೆ ಪ್ರದೇಶದ ಮನೆಗಳು ಹಾನಿಯಾದ ನಂತರ ಈಗ ರಸ್ತೆ ಮೇಲೆ ನಿಂತ ನೀರು ಹಾಗೂ ರಾಜಕಾಲುವೆಗಳ ಸ್ವಚ್ಚತೆಗೆ ಮುಂದಾಗಿರುವುದು ವಿಪರ್ಯಾಸವೇ ಸರಿ,

ಚಳ್ಳಕೆರೆ ನಗರಕ್ಕೆ ಜಲ ದಿಗ್ಬಂಧನ :

ಇನ್ನೂ ಚಳ್ಳಕೆರೆ ನಗರಕ್ಕೆ ಜಲ ದಿಗ್ಬಂಧನ ವಿಧಿಸಿದ ಮಳೆರಾಯ ನಗರಕ್ಕೆ ಹಾದು ಹೋಗುವ ಎಲ್ಲಾ ರಸ್ತೆಗಳಲ್ಲಿ ನೀರು ಹರಿಯುವುದರಿಂದ ನಗರದೊಳಕ್ಕೆ ಹೋಗುವ ಸಾರಿಗೆ ವ್ಯವಸ್ಥೆ ಸಂಪೂರ್ಣವಾಗಿ ಕೆಲ ಕಾಲ ಬಂದ್ ಹಾಗಿ ವಾಹನ‌ ಸಾವರರು ಪರದಾಡುವಂತಾಗಿತ್ತು,

ಪಾಗಡರಸ್ತೆಯ ನೀಲಕಂಠೇಶ್ವರ ದೇವಸ್ಥಾನ ಸಮೀಪ ರಸ್ತೆ ಮೇಲೆ ನೀರು ಹರಿವುದುರಿಂದ ರಸ್ತೆ ಬಂದ್ ಹಾಗಿತ್ತು, ಇನ್ನೂ ಕಾಟಪನಹಟ್ಟಿಗೆ ಹೋಗುವ ಪಾದಗಟ್ಟೆ‌ ಸಮೀಪದ ಹಳ್ಳ ತುಂಬಿ ಹರಿವುದರಿಂದ ರಸ್ತೆ ತಾತ್ಕಾಲಿಕವಾಗಿ ಬಂದ್ ಹಾಗಿತ್ತು.
ಇನ್ನೂ ರಹಿಂ ನಗರಕ್ಕೆ ಒಳ ಹೋಗಲು ಹಾಗದೆ, ಇತ್ತ ಹೊರ ಬರಲು ಹಾಗದೆ ನಾಲ್ಕು ದಿಕ್ಕಿನಿಂದ ಜಲ ದಿಗ್ಬಂಧನ ವಿಧಿಸಿದರಿಂದ ನಿವಾಸಿಗಳ ಪರದಾಟ ಹೇಳತಿರದಾಗಿತ್ತು.

ಪೇಪರ್ ಬಾಯ್ ಹರಸಾಹಸ :

ದಿನ ನಿತ್ಯವೂ ಮನೆ ಮೆನೆಗಳಿಗೆ ಪೆಪರ್ ಹಾಕುವ ಹುಡುಗರ ಪಾಡಂತು ಹೇಳತೀರದಾಗಿದೆ, ಮುಂಜಾನೆ ನಸುಕಿನ ವೇಳೆ ವರುಣನ ಜಿಟಿ‌ಜಿಟಿ‌ ಮಳೆಗೆ ತಲೆಯ ಮೇಲೆ ಗೋಣಿ ದುಪಡಿ‌ ಹೊದ್ದು ಬೈಸಿಕಲ್ ಹೇರಿ ಪೇಪರ್ ಹಾಕುವ ಹುಡುಗರ ಪಾಲಿಗೆ ಮಳೆರಾಯ ಶತ್ರುವಾಗಿದ್ದಾನೆ, ಇನ್ನೂ ನಗರದಲ್ಲಿ ಅದಗೆಟ್ಟ ರಸ್ತೆಗಳ ಮಧ್ಯೆ ಸೈಕಲ್ ಹೇರಿ‌ ಹೊರಟ ಪೇಪರ್ ಬಾಯ್ ಕಥೆ ಚಿಂತಜನಕವಾಗಿದೆ…

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend