ನಿಸ್ವಾರ್ಥ ನಿಜ ಸೇವಕ ಡಾ. ಜಿ.ಹೆಚ್.ಉಮಾಪತಿಗೆ ನಾಗರಿಕ ಸನ್ಮಾನ…!!!

Listen to this article

ನಿಸ್ವಾರ್ಥ ನಿಜ ಸೇವಕ ಡಾ. ಜಿ.ಹೆಚ್.ಉಮಾಪತಿಗೆ ನಾಗರಿಕ ಸನ್ಮಾನ.
ಹೊಳಲ್ಕೆರೆ : ಪಟ್ಟಣದ ಹೆಸರಾಂತ ವೈದ್ಯರಾದ ಡಾ.ಹೆಚ್.ಜಿ.ಉಮಾಪತಿ ಇವರ ನಾಗರಿಕ ಸೇವೆ ಪರಿಗಣಿಸಿದ ತಾಲೂಕಿನ ನಾಗರಿಕರು ಹಾಗೂ ವಿವಿಧ ಸಂಘಸoಸ್ಥೆಗಳು ನಾಗರೀಕ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಅಗಸ್ಟ ೧೪ ಬುಧವಾರ ಪಟ್ಟಣದ ಸಂವಿಧಾನ ಸೌಧದಲ್ಲಿ ಹಮ್ಮಿಕೊಳ್ಳಲಾಗಿದೆ.
ವೈದ್ಯೋ ನಾರಾಯಣೋ ಹರೀಃ ಎನ್ನುವ ಹೆಸರಿಗೆ ತಕ್ಕಂತೆ ಕೇವಲ ೧೦ ರೂ ಶುಲ್ಕಕ್ಕೆ ಆರೋಗ್ಯ ಸೇವೆ ಮತ್ತು ಚಿಕಿತ್ಸೆಗೆ ನೀಡುವ ಖ್ಯಾತಿಯ ಪಟ್ಟಣದ ಗಂಗಾಕ್ಪಿನಿಕ್ ಡಾ.ಹೆಚ್.ಜಿ.ಉಮಾಪತಿಯದು. ಕಳೆದ ೩೦ ವರ್ಷಗಳಿಂದ ಜನರ ಆರೋಗ್ಯ ಸೇವಕರಾಗಿ ಸೇವೆ ಸಲ್ಲಿಸಿ ಸಾವಿರಾರು ಬಡ ಕುಟುಂಬಗಳ ಮನೆ ವೈದ್ಯರಾಗಿ ಮನೆ ಮಾತಾಗಿದ್ದಾರೆ.
ಹೊಳಲ್ಕೆರೆ ಕ್ಷೇತ್ರದ ಮಾಜಿ ಶಾಸಕ ಶ್ರೀಕಾವಲ್ ಸಿದ್ದರಾಮಪ್ಪ, ಶ್ರೀಮತಿ ಗಂಗಮ್ಮ ೨ನೇ ಪುತ್ರ ಡಾ.ಹೆಚ್.ಜಿ.ಉಮಾಪತಿ. ದಾವಣಗೆರೆ ಜಿ.ಜೆ.ಎಂ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣದ ಬಳಿಕ ಹಳ್ಳಿ ಜನ ಅರೋಗ್ಯ ಸೇವೆ ಯಿಂದ ಸಾರ್ಥಕ ಜೀವನದ ಕನಸು ಕಟ್ಟಿಕೊಂಡಿದ್ದರಿoದ ವಿದೇಶಕ್ಕೆ ಹಾರುವ ಎಷ್ಟೂ ಅವಕಾಶಗಳನ್ನು ನಿರಾಕರಿಸಿ, ಹುಟ್ಟಿದ ನೆಲದಲ್ಲಿ ಸೇವೆ ಸಲ್ಲಿಸುವ ಉದ್ದೇಶದಿಂದ ತಾಯಿ ಹೆಸರಲ್ಲಿ ಗಂಗಾಕ್ಲಿನಿಕ್ ಆರಂಭಿಸಿ ಉಚಿತ ಸೇವೆ ಕೈಗೊಂಡರು.
ಅಪಾರ ಮನ್ನಣೆ ಜತೆ ಜನಪ್ರೀಯತೆಗಳಿಸಿದ್ದರೂ, ಬಿಡಿಗಾಸು ಶುಲ್ಕವಿಲ್ಲದೆ ಜನ ಸೇವೆ ಜನರ ಪ್ರೀತಿಗೆ ಅಪಾರವೇ ಇಲ್ಲದಂತಾಗಿತ್ತು. ನಮ್ಮದು ಉಚಿತ ಸೇವೆ, ಬಡವರಿಗಾಗಿ ಕ್ಲಿನಿಕ್ ತೆಗೆದಿದ್ದೇನೆ. ಹಣ ಇದ್ದವರು ಹಣ ತೆಗೆದುಕೊಳ್ಳುವ ವೈದ್ಯರ ಕಡೆಗೆ ಹೋಗಿ ಎನ್ನುವ ಸಂದೇಶ ನೀಡುತ್ತಿದ್ದರು. ಇದು ಜನರನ್ನು ಸಂಕಷ್ಟಕ್ಕೆ ತಳ್ಳಿತ್ತು. ವೈದ್ಯರಿಂದ ಉಚಿತ ಸೇವೆ ಪಡೆದುಕೊಳ್ಳುವುದು ಸರಿಯಲ್ಲ ಎನ್ನುವ ಕಾರಣಕ್ಕಾಗಿ ಒತ್ತಾಯ ಪೂರ್ವಕವಾಗಿ ೧೦ ಶುಲ್ಕವನ್ನು ಅಭಿಮಾನಿಗಳು ನಿಗದಿ ಮಾಡಿದ್ದು, ವೈದ್ಯರ ಜನಪರ ಸೇವೆಗೆ ಸಾಕ್ಷಿö್ಯಯಾಗಿದೆ.
ಇವರ ನಿಸ್ವಾರ್ಥ ಸೇವೆಗೆ ಪ್ರೇರಣಾದಾಯಕ ಅಣ್ಣ ಪಟ್ಟಣ ಪಂಚಾಯ್ತಿ ಮಾಜಿ ಪ್ರಧಾನರಾದ ಹೆಚ್.ಜಿ.ಅನಂದ್, ಧರ್ಮಪತ್ನಿ ಸತ್ಯಭಾಮ, ಪುತ್ರ ದಂತ ವೈದ್ಯ ಡಾ.ಸಿದ್ದಾರ್ಥ,
ವೈದ್ಯ ಡಾ.ಹೆಚ್.ಜಿ.ಉಮಾಪತಿ ಜನಪರ ಸೇವೆ ಗುರುತಿಸಿ ಮಂಗಳೂರು ದೇರಳಕಟ್ಟೆಯಲ್ಲಿರುವ ನಿಟ್ಟೆ ವಿಶ್ವವಿದ್ಯಾನಿಲಯ, ಜಸ್ಟೀಸ್ ಹೆಗ್ಗಡೆ ಮೆಡಿಕಲ್ ಅಕಾಡೆಮಿ, ಸೇರಿ ವಿವಿಧ ಸಂಘ ಸಂಸ್ಥೆಗಳು ಉತ್ತಮ ವೈದ್ಯಕೀಯ ಸೇವಾ ಪ್ರಶಸ್ತಿ ನೀಡಿದೆ. ಹತ್ತಾರು ಸಂಘಸoಸ್ಥೆಗಳು ನೂರಾರು ಪ್ರಶಸ್ಥಿಗಳನ್ನು ಪ್ರಕಟಸಿದ್ದರೂ ಎಷ್ಟೋ ಪ್ರಶಸ್ತಿ ತೆಗೆದುಕೊಳ್ಳಲು ನಿರಾಕರಿಸುವ ಮೂಲಕ ಜನಸೇವೆ ಜರ್ನಾಧನ ಸೇವೆ ಎನ್ನುವ ಸಿದ್ದಾಂತದ ಬದ್ದತೆಯ ಡಾ.ಹೆಚ್.ಜಿ.ಉಮಾಪತಿ ಇವರಿಗೆ ತಾಲೂಕಿನ ನೂರಾರು ಸಂಘಟನೆಗಳು ಸೇರಿ ನಾಗರಿಕ ಪ್ರಶಸ್ತಿ ಜತೆ ಅಭಿನಂದನಾ ಕಾರ್ಯಕ್ರಮ ಕೈಗೊಂಡಿವೆ. ನಿಸ್ವಾರ್ಥ ನಿಜ ಸೇವಕನಿಗೆ ಸಲ್ಲಿಸುವ ಸಾರ್ಥಕ ಸನ್ಮಾನಕ್ಕೆ ಪ್ರತಿಯೊಬ್ಬರು ಸಾಕ್ಷಿಯಾಗಬೇಕಿದೆ.
ಅನಿಸಿಕೆ : ದೇವರು ನನಗೆ ಕೊಟ್ಟಿದ್ದು, ನಾನು ಬಡವರಿಗೆ ಕೊಟ್ಟಿದ್ದೇನೆ. ನಾನು ನೆಪ ಮಾತ್ರ, ಬಡವರ ಕೆಲಸವೇ ದೇವರ ಕೆಲಸ, ನಾನು ವೈದ್ಯನಾಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಪುಣ್ಯ. ನಮ್ಮ ರೋಗಿಗಳೆ ನಮ್ಮ ದೇವರು. ಅವರ ಕೆಲಸ ಮಾಡಬೇಕೇಷ್ಟೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend