ಮೈಸೂರು ಜನಾಂದೋಲನದ ಬೃಹತ್ ಸಮಾವೇಶ ; ಸಿದ್ದರಾಮಯ್ಯ ನವರನ್ನು ಪ್ರಜಾಪ್ರಭುತ್ವದ ಬ್ಯೂಟಿ ಎಂದೂ ಬಣ್ಣಿಸಿದ ಕಾಂಗ್ರೆಸ್ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಮೈಸೂರು ಜನಾಂದೋಲನದ ಬೃಹತ್ ಸಮಾವೇಶ ; ಸಿದ್ದರಾಮಯ್ಯ ನವರನ್ನು ಪ್ರಜಾಪ್ರಭುತ್ವದ ಬ್ಯೂಟಿ ಎಂದೂ ಬಣ್ಣಿಸಿದ ಕಾಂಗ್ರೆಸ್ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.

ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ ದೇವರಾಜ ಅರಸು ಅವರ ನಂತರ ಹಿಂದುಳಿದ ಜಾತಿ ಮತ್ತು ವರ್ಗಗಳಿಂದ ಬಂದ ಸನ್ಮಾನ್ಯ ಸಿ.ಎಂ. ಸಿದ್ದರಾಮಯ್ಯ ಅವರು ಶೋಷಿತ, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಅಧಿಕಾರ ಹಂಚಿಕೆ ಮಾಡಿ ಪ್ರಜಾಪ್ರಭುತ್ವದ ಬ್ಯೂಟಿ ಎನಿಸಿಕೊಂಡಿದ್ದಾರೆ. ಅಂತಹವರನ್ನು ಕಳೆದ ಕೆಲವು ತಿಂಗಳುಗಳಿಂದ ಸಿ. ಎಂ. ಸಿದ್ದರಾಮಯ್ಯ ಅವರ ಅಧಿಕಾರವನ್ನು ಸಹಿಸಿಕೊಳ್ಳದ ಕೇಂದ್ರ ಸರ್ಕಾರದ ಎನ್.ಡಿ. ಎ. ಮತ್ತು ಕರ್ನಾಟಕದ ಬಿಜೆಪಿ- ಜೆಡಿಎಸ್ ಸೇರಿ ಯಾವುದೇ ಪುರಾವೆಗಳು ಇಲ್ಲದೇ ಮುಡಾ ಹಗರಣದಲ್ಲಿ ಆರೋಪ ಮಾಡುತ್ತಾ ಅವರನ್ನು ಸಿ.ಎಂ‌. ಸ್ಥಾನದಿಂದ ಅಸ್ಥಿರಗೊಳಿಸಲು ಸಂವಿಧಾನ ಮುಖ್ಯ ನೇತಾರ ಎನಿಸಿಕೊಂಡ ರಾಜ್ಯಪಾಲರನ್ನು ವಿರೋಧ ಪಕ್ಷಗಳು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡು ರಾತ್ರೋರಾತ್ರಿ ನೋಟಿಸ್ ಕೊಡುವ ಕೆಲಸ ಮಾಡಿದ್ದಾರೆ.

ಕರ್ನಾಟಕದಲ್ಲಿ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಪಕ್ಷಗಳು ತನ್ನ ವಿರೋಧ ಪಕ್ಷದ ಸ್ಥಾನ ಮಾನ ಮರೆತು ಅಭಿವೃದ್ಧಿ ಪರ ಚಿಂತನೆ ಮಾಡದೇ ಕಾಲಹರಣ ಮಾಡುತ್ತಾ ಪಾದಯಾತ್ರೆಮಾಡುತ್ತಿರುವುದನ್ನು ಪ್ರಶ್ನಿಸಿ ಶ್ರೀ ಸಿದ್ದರಾಮಯ್ಯ ನವರನ್ನು ಬೆಂಬಲಿಸಿ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ದಿ. 09-08-24 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ “ ಜನಾಂದೋಲನ”ದ ಬೃಹತ್ ಸಮಾವೇಶ ಕಾರ್ಯಕ್ರಮದಲ್ಲಿ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಪಾಲ್ಗೊಂಡಿದ್ದರು. ಹಾಗೆಯೇ ಸಮಾಜ ಮುಖಿ ಹಾಗೂ ಅಭಿವೃದ್ಧಿಪರ ಚಿಂತನೆಗಳನ್ನು ವೇದಿಕೆಯಲ್ಲಿ ಹಂಚಿಕೊಂಡರು. ವಿರೋಧ ಪಕ್ಷಿಗಳಿಗೆ ಅನೇಕ ಪ್ರಶ್ನೆಗಳನ್ನು ಈ ಸಮಾವೇಶ ಮೂಲಕ ಎತ್ತಿದ್ದಾರೆ. ಇನ್ನೂ ಅನೇಕ ವಿಚಾರಗಳ ಚಿಂತನೆಗೆ ಮತ್ತು ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಈ ಸಮಾವೇಶ ಸಾಕ್ಷಿಯಾಯಿತು.

ಈ ವೇಳೆ ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷರು ಹಾಗೂ ಸನ್ಮಾನ್ಯರಾದ ಡಿಸಿಎಂ ಡಿ.ಕೆ.‌ ಶಿವಕುಮಾರ್, ಸನ್ಮಾನ್ಯರಾದ ಸಿ. ಎಂ. ಸಿದ್ದರಾಮಯ್ಯ ಅವರು, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ, ತನ್ವೀರ್ ಸೇಠ್, ವಸಂತ ಕುಮಾರ್, ಮಂಜುನಾಥ್ ಬಂಡಾರಿ, ವಿನಯ್ ಕುಲಕರ್ಣಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆ, ಸನ್ಮಾನ್ಯ ಸಚಿವರಾದ ಡಾ. ಜಿ. ಪರಮೇಶ್ವರ್, ಡಾ. ಹೆಚ್. ಸಿ. ಮಹಾದೇವಪ್ಪ, ಕೆ. ಹೆಚ್. ಮುನಿಯಪ್ಪ, ಬಿ. ಎಂ. ಪಾಟೀಲ, ಕೆ.ಜಿ. ಜಾಜ್೯, ಸತೀಶ್ ಜಾರಕಿಹೊಳಿ, ಭೈರತಿ ಸುರೇಶ್, ರಾಮಲಿಂಗರೆಡ್ಡಿ, ಹೆಚ್. ಕೆ. ಪಾಟೀಲ, ಚೆಲುವರಾಯಸ್ವಾಮಿ, ಕೃಷ್ಣೆಭೈರೆಗೌಡ , ಲಕ್ಷ್ಮೀ ಹೆಬ್ಬಾಳ್ಕರ್, ದಿನೇಶ ಗುಂಡುರಾವ್, ಜಮೀರ್ ಅಹ್ಮದ್ ಖಾನ್, ಡಾ. ಶರಣಪ್ರಕಾಶ್ ಪಾಟೀಲ , ಪ್ರಿಯಾಂಕ ಖರ್ಗೆ, ರಹೀಂ ಖಾನ್, ಈಶ್ವರ ಕಂಡ್ರೆ, ಕೆ. ವೆಂಕಟೇಶ್, ಶಿವರಾಜ್ ತಂಗಡಗಿ, ಸಂತೋಷ್ ಲಾಡ್, ಕೆ.ಎನ್ ರಾಜಣ್ಣ, ಎಂ.ಸಿ ಸುಧಾಕರ್, ವಿಧಾನಪರಿಷತ್ ಸದಸ್ಯರಾದ ಬಿ.ಕೆ ಹರಿಪ್ರಸಾದ್, ಹಿರಿಯ ನಾಯಕರಾದ ರಮೇಶ್ ಕುಮಾರ್ ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಡಾ. ಶ್ರೀನಿವಾಸ್ ಎನ್. ಟಿ. ಅವರು ಸೇರಿದಂತೆ ಹಲವಾರು ಶಾಸಕರು, ವಿವಿಧ ಗಣ್ಯಮಾನ್ಯರು, ಮುಖಂಡರು, ಲಕ್ಷಾಂತರ ಕಾರ್ಯಕರ್ತರು ಉಪಸ್ಥಿತರಿದ್ದರು….

ವರದಿ. ಎಮ್. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend