10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಾನಕಿ…!!!

Listen to this article

10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಜಾನಕಿ
ನೇಕಾರರಿಗೆ ತಾಂತ್ರಿಕ ಕೌಶಲ್ಯ, ಮಾರುಕಟ್ಟೆ ದೊರಕಿಸಬೇಕು: ಜಿಲ್ಲಾಧಿಕಾರಿ ಜಾನಕಿ
ಗುಳೇದಗುಡ್ಡ: ಪಾರಂಪರಿಕ ನೇಕಾರಿಕೆ ವೃತ್ತಿ ಮಾಡುತ್ತ ಬಂದಿರುವ ನಮ್ಮ ನೇಕಾರರು ಕಾಲಕ್ಕೆ ತಕ್ಕಂತೆ ಬದಲಾವಣೆ ಹೊಂದಿಕೊಂಡರೆ ನಮ್ಮ ಗುಳೇದಗುಡ್ಡ ಖಣ ಹಾಗೂ ಇಲಕಲ್ಲ ಸೀರೆ ಜಗತ್ತಿನಲ್ಲಿಯೇ ಹೆಸರು ಗಳಿಸಬಹುದು. ಜವಳಿ ಇಲಾಖೆ ನೇಕಾರರಿಗೆ ತಾಂತ್ರಿಕ ಕೌಶಲ್ಯ ಹಾಗೂ ಮಾರುಕಟ್ಟೆಯನ್ನು ಒದಗಿಸಿದರೆ ನೇಕಾರರ ಜೀವನಮಟ್ಟ ಹೆಚ್ಚಿಸಬಹುದು ಎಂದು ಜಿಲ್ಲಾಧಿಕಾರಿ ಕೆ.ಎಂ. ಜಾನಕಿ ಹೇಳಿದರು.
ಅವರು ಬುಧವಾರ ಭಾರತ ಸರಕಾರದ ನೇಕಾರರ ಸಲಹಾ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ 10ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ಕೋಟೆಕಲ್ಲನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಗುಳೇದಗುಡ್ಡ ಖಣ ಕೈಮಗ್ಗ ನೇಕಾರರ ಉತ್ಪಾದಕರ ಸಂಘದ ಸಹಯೋಗದಲ್ಲಿ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರ ಉದ್ಘಾಟಿಸಿ ಮಾತನಾಡಿ, ಗುಳೇದಗುಡ್ಡದಂತಹ ವೃತ್ತಿ ಕೈಮಗ್ಗ ನೇಕಾರಿಕೆಯ ಊರಿನಲ್ಲಿ ನೇಕಾರ ಸೇವಾ ಕೇಂದ್ರ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ. ನೇಕಾರರ ಬಂಧುಗಳ ಆರ್ಥಿಕಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ದಿಕ್ಸೂಚಿಯಾಗಲಿ. ಇಲ್ಲಿ ಹೆಚ್ಚುಹೆಚ್ಚು ನೇಕಾರರಿಗೆ ಉದ್ಯೋಗಗಳು ಸೃಷ್ಟಿಯಾಗಲಿ ಎಂದರು.
ಕೋಟಿಕಲ್ ಪಿಕೆಪಿಎಸ್ ಅಧ್ಯಕ್ಷ ಹನಮಂತ ಮಾವಿನಮರದ ಮಾತನಾಡಿ, ಒಂದು ಕಾಲಕ್ಕೆ ಕೈಮಗ್ಗ ನೇಕಾರರ ತವರೂರಾಗಿದ್ದ ಗುಳೇದಗುಡ್ಡ ಪಟ್ಟಣ, ಪಾವರಲೂಮ್‍ಗಳಿಂದಾಗಿ ಉತ್ಪಾದನೆ ಹೆಚ್ಚಾಯಿತು ಆದರೆ ಮಾರುಕಟ್ಟೆ ಇಲ್ಲವಾಯಿತು. ಕೈಮಗ್ಗ ಬಿಟ್ಟು ಪಾವರಲೂಮ್‍ಗೆ ಬದಲಾವಣೆ ಹೊಂದಿದ ನೇಕಾರರಿಗೆ ಉದ್ಯೋಗವಿಲ್ಲದಂತಾದರೂ. ನೇಕಾರರಿಕೆಯ ಉದ್ಯೋಗಕ್ಕೆ ಪುನಃಶ್ಚೇತನ ನೀಡುವ ನಿಟ್ಟಿನಲ್ಲಿ ಕೋಟೆಕಲ್ಲನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಗುಳೇದಗುಡ್ಡ ಖಣ ಕೈಮಗ್ಗ ನೇಕಾರರ ಉತ್ಪಾದಕರ ಸಂಘದ ಸಹಯೋಗದಲ್ಲಿ ಪಟ್ಟಣದಲ್ಲಿ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದರು.
ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿ, ನೇಕಾರಿಕೆಯಲ್ಲಿ ಏನೂ ಇಲ್ಲ, ನೇಕಾರಿಕೆಯನ್ನು ಕೈಬಿಟ್ಟುಬಿಡಬೇಕು ಎಂದು ನಿರಾಶೆಯಲ್ಲಿದ್ದ ನೇಕಾರರಿಗೆ ಕೇಂದ್ರಸರಕಾರದ ನೇಕಾರರ ಕೈಹಿಡಿಯವ ಕಾರ್ಯಮಾಡಿದೆ. ಮುಂದಿನದಿನಗಳಲ್ಲಿ ಮತ್ತೇ ಕೈಮಗ್ಗ ನೇಕಾರಿಕೆಗೆ ಬೆಲೆ ಬರಲಿದೆ. ಕೈಮಗ್ಗಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನೇಕಾರರದು. ಕೋಟೆಕಲ್ಲನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗುಳೇದಗುಡ್ಡದ ನೇಕಾರರಿಗೆ ಇಂತಹ ಯೋಜನೆತಂದಿದ್ದು ಶ್ಲಾಘನೀಯ ಎಂದರು.
ಗುರುಸಿದ್ದೇಶ್ವರ ಮಠದ ಜ.ಶ್ರೀ ಬಸವರಾಜ ಸ್ವಾಮಿಗಳು, ಶ್ರೀ ಗುರುಬಸವ ದೇವರು, ಹೊಳೆಹುಚ್ಚೇಶ್ವರ ಮಠದ ಶ್ರೀ ಹುಚ್ಚೇಶ್ವರ ಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ನೇಕಾರ ಸೇವಾಕೇಂದ್ರದ ಅಧೀಕ್ಷ ಮೋಹನ ಸಾಗರ, ಕೇಂದ್ರ ರೇಷ್ಮೇ ಮಂಡಳಿ ಸಹಾಯಕ ನಿರ್ದೇಶಕ ಸಂದೀಪ ಡಿ.ಎನ್., ಜವಳಿ ಇಲಾಖೆಯ ಸಿದ್ದು ಕವಲಗಿ, ಗುಳೇದಗುಡ್ಡ ಖಣ ಉತ್ಪಾದಕರ ಸಂಘದ ಸಿಇಓ ರಮೇಶ ಅಯೋದಿ, ನಬಾರ್ಡ ಬ್ಯಾಂಕಿನ ಮಂಜುನಾಥ ರೆಡ್ಡಿ, ತಹಶೀಲ್ದಾರ ಮಂಗಳಾ ಎಂ, ಕೆನರಾ ಬ್ಯಾಂಕ್‍ನ ಮ್ಯಾನೇಜರ ರಾಜಕುಮಾರ ಹೂಗಾರ, ಡಿಸಿಸಿ ಬ್ಯಾಂಕ್ ಮ್ಯಾನೇಜರ ವೆಂಕಟೇಶ ಪಾಟೀಲ, ಚಂದ್ರಕಾಂತ ಶೇಖಾ, ಗುರೂಜಿ ಬಸವರಾಜ ಹಡಗಲಿ, ಪಿಕೆಪಿಎಸ್ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ಮ್ಯಾನೇಜರ್ ಚಂದ್ರಶೇಖರ ಕಲ್ಯಾಣಿ, ಸದಸ್ಯರಾದ ಸಂಗಪ್ಪ ಹಡಪದ, ಮಹಾಗುಂಡಪ್ಪ ಸುಂಕದ, ಸಂತೋಷ ತಿಪ್ಪಾ, ನಾಗೇಶ ಮುರಗೋಡ, ಯಲಗುರ್ದಪ್ಪ ತೊಗಲಂಗಿ, ರವಿ ಜಿಡಗಿ, ಪಿಂಟು ನನ್ನಾ, ಸೋಮಶೇಖರ ಕಲ್ಬುರ್ಗಿ, ದೇವೆಂದ್ರಪ್ಪ ಗಾಯದ, ಹುಚ್ಚೇಶ ಹರ್ತಿ, ದಾನಪ್ಪ ಚಲ್ಲಾ, ಹನಮಂತ ಪಲಮಾರಿ, ಪ್ರಕಾಶ ಕಳ್ಳಿಗುಡ್ಡ ಯಮನೂರ ರಾಠೋಡ ಮತ್ತಿತರರು ಇದ್ದರು.
ಇದೇ ಸಂದರ್ಭದಲ್ಲಿ ಪಟ್ಟಣದ ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಖಣಗಳ ಬಟ್ಟೆಗಳಿಂದ ಉಡುಪು ಧರಿಸಿ ಗಮನಸೆಳೆದರು…

ವರದಿ. ಸಚಿನ್, ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend