ಇಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ, ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರ ಪ್ರಾರಂಭ: ಮಾವಿನಮರದ…!!!

Listen to this article

ಇಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ, ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರ ಪ್ರಾರಂಭ: ಮಾವಿನಮರದ

ಗುಳೇದಗುಡ್ಡ: ಒಂದು ಕಾಲದಲ್ಲಿ ಪಟ್ಟಣ ಗುಳೇದಗುಡ್ಡ ರೇಷ್ಮೆಖಣಗಳ ಉತ್ಪಾದನೆಗೆ ಹೆಸರುವಾಸಿಯಾಗಿತ್ತು. ಇಲ್ಲಿನ ನೇಕಾರರು ಕೈಮಗ್ಗ ನೇಯ್ಗೆಯಲ್ಲಿಯೇ ತಮ್ಮ ಜೀವನ ಕಂಡುಕೊಂಡಿದ್ದರು. ಆದರೆ ಬರಬರುತ್ತಾ ಖಣಗಳ ಬೇಡಿಕೆ ಕುಸಿಯಿತು, ಪಾವರಲೂಮ್‌ಗಳು ಕಾಲಿಟ್ಟಿದ್ದರಿಂದ ನೇಕಾರರು ಬದುಕು ಇನ್ನೂ ದುಸ್ತರವಾಗಿ, ಪಟ್ಟಣವನ್ನು ತೊರೆದು ನಗರಗಳಿಗೆ ವಲಸೆ ಹೋಗುವಂತಾಯಿತು. ಇಂದಿನ ಬೇಡಿಕೆಗೆ ತಕ್ಕಂತೆ ನೇಕಾರಿಕೆ, ವಿನ್ಯಾಸದಲ್ಲಿ ಬದಲಾವಣೆ ತಂದು, ನೇಕಾರರಿಕೆಯ ಉದ್ಯೋಗಕ್ಕೆ ಪುನಃಶ್ಚೇತನ ನೀಡುವ ನಿಟ್ಟಿನಲ್ಲಿ ಕೋಟೆಕಲ್ಲನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಹಾಗೂ ಗುಳೇದಗುಡ್ಡ ಖಣ ಕೈಮಗ್ಗ ನೇಕಾರರ ಉತ್ಪಾದಕರ ಸಂಘದ ಸಹಯೋಗದಲ್ಲಿ ಪಟ್ಟಣದಲ್ಲಿ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದು ಕೋಟಿಕಲ್ ಪಿಕೆಪಿಎಸ್ ಅಧ್ಯಕ್ಷ ಹನಮಂತ ಮಾವಿನಮರದ ಹೇಳಿದರು.

ಅವರು ಪತ್ರಿಕಗೋಷ್ಠಿಯಲ್ಲಿ ಮಾತನಾಡಿ, ಕೈಮಗ್ಗ ನೇಕಾರಿಕೆಗೆ ಹಾಗೂ ಅವರ ಉತ್ಪನ್ನಗಳಿಗೆ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಹತ್ತು ವರ್ಷಗಳ ಹಿಂದೆ ಆ.೭ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಜಾರಿಗೆ ತಂದಿದ್ದು, ಈ ಹಿನ್ನಲೆಯಲ್ಲಿ ಆ.೭ರಂದು ಬೆಳಿಗ್ಗೆ ೯ ಗಂಟೆಗೆ ಬೆಂಗಳೂರಿನ ನೇಕಾರರ ಸೇವಾ ಕೇಂದ್ರದ ಆಶ್ರಯದಲ್ಲಿ ೧೦ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ರಾಜ್ಯಮಟ್ಟದ ಕಾರ್ಯಕ್ರಮ ಹಾಗೂ ಇದೇ ಸಂದರ್ಭದಲ್ಲಿ ಕೈಮಗ್ಗ ನೇಕಾರರ ಉತ್ಪನ್ನಗಳ ಉತ್ಪಾದನಾ ಕೇಂದ್ರ ಪ್ರಾರಂಭಗೊಳ್ಳಲಿದೆ ಎಂದರು.

ಕೇಂದ್ರ ಸರಕಾರದ ಸಹಯೋಗದಲ್ಲಿ ಸುಮಾರು ೩೮ ಕೈಮಗ್ಗಗಳನ್ನು ಸ್ಥಾಪಿಸಿ, ೩೫-೪೦ ಜನರಿಗೆ ಆರುತಿಂಗಳ ವರೆಗೆ ಸ್ಟೈಫಂಡ್ ನೊಂದಿಗೆ ಕೈಮಗ್ಗ ತರಬೇತಿ ನೀಡಲಾಗುವುದು. ಬಳಿಕ ಅವರಿಗೆ ಕೈಮಗ್ಗ ಉದ್ಯೋಗ ಕಲ್ಪಿಸಲಾಗುವುದು. ಕೇಂದ್ರದಲ್ಲಿ ಹತ್ತಿ ಹಾಗೂ ರೇಷ್ಮೆಯ ಬಟ್ಟೆಗಳು, ಸೀರೆಗಳು, ಶರ್ಟ್, ಟಾವೆಲ್ ಮತ್ತಿತರ ಕೈಮಗ್ಗದ ಉತ್ಪನ್ನಗಳನ್ನು ಉತ್ಪಾದನೆಗೊಳ್ಳಲಿದೆ ಎಂದರು.

ಬೆಂಗಳೂರಿನ ನೇಕಾರ ಸೇವಾಕೇಂದ್ರದ ಮೋಹನ ಮಾತನಾಡಿ, ಆ.೭ರಂದು ಬೆಳಿಗ್ಗೆ ೯ ಗಂಟೆಗೆ ಉಪರಾಷ್ಟ್ರಪತಿ ಧನಕರ ಅವರು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಕಾರ್ಯಕ್ರಮವನ್ನು ದೆಹಲಿಯಲ್ಲಿ ಉದ್ಘಾಟಿಸಲಿದ್ದು ಅದರ ನೇರಪ್ರಸಾರವನ್ನು ನೇಕಾರರಿಗಾಗಿ ಕಾರ್ಯಕ್ರಮದಲ್ಲಿ ಪ್ರಸಾರಗೊಳ್ಳಲಿದೆ. ಅಂದು ಸಂಜೆಯವರಗೆ ನೇಕಾರಿಕಗೆ ಸಂಬಂಧಿಸಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ರಾಜ್ಯದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ನೇಕಾರಿಕೆ ಊರಾದ ಗುಳೇದಗುಡ್ಡವನ್ನು ಅಯ್ಕೆಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಿಕೆಪಿಎಸ್ ಉಪಾಧ್ಯಕ್ಷ ಲಕ್ಷ್ಮಣ ಹಾಲನ್ನವರ, ಸದಸ್ಯರಾದ ಸಂಗಪ್ಪ ಹಡಪದ, ಮಹಾಗುಂಡಪ್ಪ ಸುಂಕದ, ಸಂತೋಷ ತಿಪ್ಪಾ, ಯಲಗುರ್ದಪ್ಪ ತೊಗಲಂಗಿ, ಮ್ಯಾನೇಜರ ಚಂದ್ರಶೇಖರ ಕಲ್ಯಾಣಿ, ರಮೇಶ , ರವಿ ಜಿಡಗಿ, ಪಿಂಟು ನನ್ನಾ, ಸೋಮಶೇಖರ ಕಲ್ಬುರ್ಗಿ, ದೇವೆಂದ್ರಪ್ಪ ಗಾಯದ, ಹುಚ್ಚೇಶ ಹರ್ತಿ, ದಾನಪ್ಪ ಚಲ್ಲಾ, ಹನಮಂತ ಪಲಮಾರಿ, ಪ್ರಕಾಶ ಕಳ್ಳಿಗುಡ್ಡ, ಯಮನೂರ ರಾಠೋಡ ಮತ್ತಿತರರು ಇದ್ದರು…

ವರದಿ. ಸಚಿನ್ ಬಾಗಲಕೋಟ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend