ಒಳಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಒತ್ತಾಯ…!!!

Listen to this article

ಒಳಮೀಸಲಾತಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ಒತ್ತಾಯ…ಸುಪ್ರೀಂ ಕೋರ್ಟ್ ನ ಒಳಮೀಸಲಾತಿ ತೀರ್ಪನ್ನು ಸ್ವಾಗತಿಸಿ ಮತ್ತು ತ್ವರಿತವಾಗಿ ಒಳಮೀಸಲಾತಿ ಜಾರಿಗೊಳಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಇಂದು ದಿನಾಂಕ 05-08-2024 ರಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾದಿಗ ದಂಡೋರ MRPS ವತಿಯಿಂದ ಪತ್ರಿಕಾಗೋಷ್ಟಿಯನ್ನು ನಡೆಸಲಾಯಿತು.

ರಾಜ್ಯ ಸರ್ಕಾರ ತಕ್ಷಣವೇ ಎಲ್ಲ ಮುಂಬಡ್ತಿಗಳನ್ನು ಮತ್ತು ನೇಮಕಾತಿಗಳನ್ನು ಸ್ಥಗಿತಗೊಳಿಸಿ, ಒಳಮೀಸಲಾತಿಯ ಪ್ರಮಾಣದ ಅನ್ವಯ ನೇಮಕಾತಿ/ಮುಂಬಡ್ತಿಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.

ಆರಂಭದಲ್ಲಿ ಮಾತನಾಡಿದ ಉತ್ತರ ಕರ್ನಾಟಕ ವಿಭಾಗೀಯ ಅಧ್ಯಕ್ಷ ಶ್ರೀ ಮಂಜುನಾಥ ಕೊಂಡಪಲ್ಲಿ ಅವರು ಇಂದು ಒಳಮೀಸಲಾತಿ ತೀರ್ಪಿನ ಕುರಿತು ಎಲ್ಲೆಡೆ ಚರ್ಚೆಯಗುತ್ತಿರುವುದು ಮುಖ್ಯವಾಗಿ ಕೆನೆಪದರದ ಕುರಿತು, ಆದರೆ ಕೆನೆಪದರವು ಎಂದಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯಲ್ಲಿ ಅನ್ವಯಿಸುವುದಿಲ್ಲ, ಏಕೆಂದರೆ ಪರಿಶಿಷ್ಟರ ಮೀಸಲಾತಿಯು ಅವರ ಆರ್ಥಿಕ ಸ್ಥಿತಿಗತಿಯ ಮೇಲಲ್ಲದೆ, ಶತಮಾನಗಳಿಂದ ಅವರ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಶೋಷಣೆಯ ತಳಹದಿಯ ಮೇಲೆ ನೀಡಲಾಗಿದೆ, ಈ ಬಗ್ಗೆ 1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಒಂಬತ್ತು ಸದಸ್ಯರ ನ್ಯಾಯಪೀಠದಿಂದ ನೀಡಲಾಗಿದ್ದ ತೀರ್ಪಿನಲ್ಲಿ ವಿಶೇಷವಾಗಿ ಇದನ್ನು ಉಲ್ಲೇಖಿಸಲಾಗಿದೆ. ಅಲ್ಲದೇ ಪ್ರಸ್ತುತ ತೀರ್ಪಿನಲ್ಲಿ ಕೆನೆಪದರದ ಉಲ್ಲೇಖವಾಗಿರುವುದು ತೀರ್ಪಿನ ಭಾಗವಾಗಿ ಅಲ್ಲ, ಅದನ್ನು ಕೋರ್ಟ್ ಭಾಷೆಯಲ್ಲಿ ಒಬಿಟರ್ ಡಿಕ್ಟಮ್ ಅಂದರೆ ಕೇವಲ ಉಲ್ಲೇಖಪೂರ್ಣ ಅಭಿಪ್ರಾಯ ಎಂಬುದನ್ನು ತಿಳಿದು ಸಹ ಸರ್ಕಾರದ ಕೆಲವು ಸಚಿವರು/ಉನ್ನತ ಅಧಿಕಾರಿಗಳು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತ ಶೋಷಿತ ಸಮುದಾಯಗಳಲ್ಲಿ ಆತಂಕ ಸೃಷ್ಟಿಸುತ್ತಿರುವುದನ್ನು ಮಾದಿಗ ದಂಡೋರ MRPS ಉಗ್ರವಾಗಿ ಖಂಡಿಸುತ್ತದೆ ಎಂದರು.

ಒಂದು ವೇಳೆ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಜಾರಿಗೆ ತರುವುದಕ್ಕೆ ಕುಂಟುನೆಪಗಳನ್ನು ಹೇಳುತ್ತಾ ಕಾಲಹರಣ ಮಾಡಿದರೆ, ಬೀದರ್ ನಿಂದ ಬೆಂಗಳೂರು ವರೆಗೆ ಮಾದಿಗ ದಂಡೋರ ವತಿಯಿಂದ ಕಾಲ್ನಡಿಗೆ ಯಾತ್ರೆಯನ್ನು ಹಮ್ಮಿಕೊಂಡು ಬೃಹತ್ ಜನಾಂದೋಲನ ಆರಂಭಿಸಲಾಗುವುದು ಎಂದು ಮಾದಿಗ ದಂಡೊರ ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ಫರ್ನಾಂಡಿಸ್ ಹಿಪ್ಪಳಗಾಂವ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷರಾದ ಶ್ರೀ ನರಸಪ್ಪ ದಂಡೋರ ಅವರು ಒಳಮೀಸಲಾತಿ ಹೋರಾಟದಲ್ಲಿ ಶ್ರೀ ಮಂದಕೃಷ್ಣ ಮಾದಿಗ ಅವರ ಸುಧೀರ್ಘ 30 ವರ್ಷದ ಹೋರಾಟದ ಹಾದಿಯನ್ನು ನೆನೆಯುತ್ತ, ಕಳೆದ ವರ್ಷ ಹೈದರಾಬಾದನಲ್ಲಿ ನಡೆದ ಮಾದಿಗರ ವಿಶ್ವರೂಪ ಮಹಾಸಮಾವೇಶದ ವೇದಿಕೆಗೆ ಆಗಮಿಸಿ ಮಾದಿಗರ ಹೋರಾಟಕ್ಕೆ ನ್ಯಾಯ ದೊರಕಿಸಲು ಕೇಂದ್ರ ಸರ್ಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಘೋಷಿಸಿದ್ದ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಯವರು ಮತ್ತು ಅಮಿತ್ ಷಾ ಕೊಟ್ಟಮಾತಿನಂತೆ ನಡೆದು ಸ್ವತಃ ಭಾರತದ ಅಟಾರ್ನಿ ಜನರಲ್ ರನ್ನು ನೇಮಿಸಿ ಸರ್ವೋಚ್ಚ ನ್ಯಾಯಾಲಯದ ಎದುರಿಗೆ ಒಳಮೀಸಲಾತಿಪರ ವಾದ ಮಂಡಿಸಿದ್ದಕ್ಕೆ ಅನಂತ ಧನ್ಯವಾದಗಳನ್ನು ಸಲ್ಲಿಸಿದರು.
ಅಂತೆಯೇ, ರಾಜ್ಯದಲ್ಲಿ ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಗಳ ಆಶೀರ್ವಾದದಿಂದ ಮತ್ತು ಶ್ರೀ ವಾದಿರಾಜ್ ಅವರ ಮಾರ್ಗದರ್ಶನದಂತೆ ಅವಿರತವಾಗಿ ತೆರೆಮರೆಯಲ್ಲಿ ಶ್ರಮಿಸಿದ ಹಾಲಿ ಸಂಸದರಾದ ಶ್ರೀ ಗೋವಿಂದ ಕಾರಜೋಳ ಮತ್ತು ಮಾಜಿ ಕೇಂದ್ರ ಸಚಿವ ಶ್ರೀ ಎ ನಾರಾಯಣಸ್ವಾಮಿಯವರು ಮತ್ತು ವಿಶೇಷವಾಗಿ ಒಳಮೀಸಲಾತಿ ಹಂಚಿಕೆಯನ್ನು 15% ನಿಂದ 17% ಕ್ಕೆ ಏರಿಸಿ, ಒಳಮೀಸಲಾತಿಗಾಗಿ ಉಪಸಮಿತಿ ರಚಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಅವರನ್ನು ಮಾದಿಗ ಸಮುದಾಯ ಎಂದಿಗೂ ಮರೆಯುವುದಿಲ್ಲ ಎಂದು ಕೃತಜ್ಞತೆ ಸಲ್ಲಿಸಿದರು.

ಸುಧೀರ್ಘ 30 ವರ್ಷಗಳ ಹೋರಾಟಕ್ಕೆ ಕಾನೂನಾತ್ಮಕ ಸಮರ್ಥನೆ ದೊರೆತಿರುವುದಕ್ಕೆ ಕಾರಣರಾದ ಅಭಿನವ ಅಂಬೇಡ್ಕರ್ ಶ್ರೀ ಮಂದಕೃಷ್ಣ ಮಾದಿಗ ಅವರ ಛಲ, ತ್ಯಾಗ ಮತ್ತು ನಿರಂತರ ಹೋರಾಟಕ್ಕೆ ಎಷ್ಟು ಕೋಟಿ ವಂದನೆಗಳನ್ನು ಸಲ್ಲಿಸಿದರೂ ಸಹ ಅದು ಕಡಿಮೆಯಾಗುತ್ತದೆ, ಅವರ ಹೆಸರು ಶೋಷಿತರ ಹೃದಯಗಳಲ್ಲಿ ಸದಾ ಚಿರಾಸ್ಥಾಯಿಯಾಗಿರುತ್ತದೆ ಎಂದು ಹೇಳುತ್ತ ಗೋಷ್ಠಿಯನ್ನು ಮುಕ್ತಾಯ ಮಾಡಿದರು.

ರಾಜ್ಯಾಧ್ಯಕ್ಷರಾದ ಶ್ರೀ ನರಸಪ್ಪ ದಂಡೋರ, ಕಾರ್ಯಧ್ಯಕ್ಷ ಫರ್ನಾಂಡಿಸ್ ಹಿಪ್ಪಳ್ಗಾವ್, ರಾಜ್ಯ ವಕ್ತರರಾದ ವೆಂಕಟೇಶ್ ಕತ್ತಿ, ಉಪಾಧ್ಯಕ್ಷ ರಾಮಕೃಷ್ಣ ಎಸ್, ಗಣೇಶ ದುಪ್ಪಲ್, ಬೆಂಗಳೂರು ಜಿಲ್ಲಾಧ್ಯಕ್ಷ ತ್ರಿಲೋಕ ಚಂದ್ರ, ಮುಂತಾದ ರಾಜ್ಯ ಸಮಿತಿ ನಾಯಕರು ಮತ್ತು ಶ್ರೀಮತಿ ಮುತ್ಯಾಲಮ್ಮ ಹಾಗೂ ಹಲವಾರು ಮಹಿಳಾ ಘಟಕದ ನಾಯಕಿಯರು ಶ್ರೀ ಮಂದಕೃಷ್ಣ ಮಾದಿಗ ಅಣ್ಣನವರ ಸೂಚನೆಯ ಮೇರೆಗೆ ಭಾಗವಹಿಸಿದ್ದರು…

ವರದಿ ಮ್ಯಾಗೇರಿ ಸಂತೋಷ ಹೂವಿನಹಡಗಲಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend