ಚಿಕ್ಕಜೋಗಿಹಳ್ಳಿಯ ಜವಾಹರ್ ನವೋದಯ ವಿದ್ಯಾಲಯ ಕಾಂಪೌಂಡ್ ಹತ್ತಿರ ಕುಡಿಯುವ ನೀರಿನ ಪೈಪ್ ಹೊಡೆದು ನೀರು ಪೋಲು…!!!

Listen to this article

ಚಿಕ್ಕಜೋಗಿಹಳ್ಳಿಯ ಜವಾಹರ್ ನವೋದಯ ವಿದ್ಯಾಲಯ ಕಾಂಪೌಂಡ್ ಹತ್ತಿರ ಕುಡಿಯುವ ನೀರಿನ ಪೈಪ್ ಹೊಡೆದು ನೀರು ಪೋಲು
ಗುಡೆಕೋಟೆ:- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕ ಜೋಗಿಹಳ್ಳಿ ನವೋದಯ ವಿದ್ಯಾಲಯ ಕಾಂಪೌಂಡ್ ಹತ್ತಿರ ನೀರಿನ ಪೈಪ್ ಒಡೆದು ಹೋಗಿದ್ದು ಎರಡು ಮೂರು ತಿಂಗಳಿನಿಂದ ಪೈಪಿನಿಂದ ಪೋಲಾದ ನೀರು ಅಲ್ಲೇ ಪಕ್ಕದಲ್ಲಿರುವ ತೋಡಿನಲ್ಲಿ ಹರಿಯುವ ಕಾರಣ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆ ಅನುಭವಿಸುತ್ತಿದ್ದಾರೆ ಚಿಕ್ಕ ಜೋಗಿಹಳ್ಳಿಯ ಅನೇಕ ಕಡೆಯಲ್ಲಿ ಕುಡಿಯುವ ನೀರು ಪಾಲಿಕೆ ಅಧಿಕಾರಿಗಳ ನಿರ್ಲಕ್ಷದಿಂದಾಗಿ ನೀರು ಚರಂಡಿ ಪಾಲು ಆಗುತ್ತಿದೆ ಇದಕ್ಕೆ ಉದಾಹರಣೆಯಂತೆ ಎರಡು ಮೂರು ತಿಂಗಳಿನಿಂದ ನವೋದಯ ಶಾಲೆ ಕಾಂಪೌಂಡ್ ಹತ್ತಿರ ನೀರಿನ ಪೈಪ್ ಹೊಡೆದು ಕುಡಿಯುವ ನೀರು ಚರಂಡಿ ಪಾಲಾಗುತ್ತಿರುವುದು ಗಮನಕ್ಕೆ ಬಂದರು ಸಂಬಂಧ ಪಟ್ಟವರು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ ಈ ವಿಷಯವಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರು ನಮಗೂ ಇದಕ್ಕೆ ಸಂಬಂಧವಿಲ್ಲ ಎನ್ನುತ್ತಿದ್ದಾರೆ, ಮತ್ತು ಇದೇ ವಿಷಯವಾಗಿ ನವೋದಯ ಪ್ರಾಂಶುಪಾಲರಾದ ಸುಂದರೇಶ್ ಇವರಿಗೆ ಸಾಕಷ್ಟು ಬಾರಿ ಮನವರಿಕೆ ಮಾಡಿದರು ಸಹ ಇದರ ಬಗ್ಗೆ ಗಮನ ನಿರ್ಲಕ್ಷ ತೋರುತ್ತಿದ್ದಾರೆ ಇದರಿಂದ ಅಲ್ಲಿನ ಪಕ್ಕದಲ್ಲಿರುವ ಕಾಲೋನಿಯಲ್ಲಿ ಸುಮಾರು 49 ಮನೆಗಳಿದ್ದು ನೀರು ಪೋಲಾಗಿ ರಸ್ತೆ ಮೇಲೆ ಹರಿಯುತ್ತಿರುವ ಕಾರಣ ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಅಲ್ಲಿಯ ನಿವಾಸಿಗಳು ಈಗಾಗಲೇ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿದ್ದಾರೆ ಈ ಬಗ್ಗೆ ಕಾಲೋನಿ ಯವರು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಈಗಲಾದರೂ ಸಂಬಂಧಿಸಿದ ಅಧಿಕಾರಿಗಳು ರಸ್ತೆ ಮೇಲೆ ನೀರು ಪೋಲಾಗುವುದನ್ನು ನಿಲ್ಲಿಸಿ, ನವೋದಯ ಶಾಲೆ ಸುತ್ತಮುತ್ತಲಿನ ನಿವಾಸಿಗಳಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಿ ಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ಥಳೀಯರಾದ ಕೆಜಿ ಕೇಶವ್ ದಲಿತ ಮುಖಂಡರು ಆಗ್ರಹಿಸಿದರು…

ವರದಿ. ಎಂ, ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend