ರಾಜ್ಯದಲ್ಲಿ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಬೇಟೆ ಮುಂದುವರೆದಿದೆ…!!!

Listen to this article

ರಾಜ್ಯದಲ್ಲಿ (Karnataka) ಲೋಕಾಯುಕ್ತ (Lokyukta) ಬೇಟೆ ಮುಂದುವರೆದಿದೆ. 12 ಅಧಿಕಾರಿಗಳಿಗೆ ಸೇರಿದ ಜಾಗಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು (Tumakuru), ಮಂಗಳೂರು, ಮೈಸೂರು, ಶಿವಮೊಗ್ಗ (Shivamogga) ಹಾಗೂ ಯಾದಗಿರಿಯಲ್ಲಿ (Yadagiri) 54 ಕಡೆಗಳಲ್ಲಿ 100ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸ್ತಿದ್ದಾರೆ.
ಬೆಂಗಳೂರಲ್ಲಿ ಒಟ್ಟು 6 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. KIADB ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್‌ ಮನೆ ಹಾಗೂ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಏಕಕಾಲದಲ್ಲಿ ಒಟ್ಟು 7 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಬೆಂಗಳೂರಿನ ನಾಗರಭಾವಿಯ 2 ನೇ ಹಂತದಲ್ಲಿರುವ ವಾಸದ ಮನೆ, ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಖನಿಜ ಭವನದಲ್ಲಿರುವ ಕಚೇರಿಯಲ್ಲಿ ರೇಡ್ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂ.ಗ್ರಾಮಾಂತರದಲ್ಲಿ ಎರಡು ಕಡೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಉಳಿದಂತೆ ಶಿವಮೊಗ್ಗ ಎರಡು ಕಡೆ, ಯಾದಗಿರಿ ಒಂದು ಕಡೆ ಹಾಗೂ ತುಮಕೂರಿನಲ್ಲಿ ಒಂದು ಕಡೆ ದಾಳಿ ನಡೆಸಿದ್ದು, ಸದ್ಯ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡ್ತಿದ್ದಾರೆ.

ಯಾವ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ? ಇಲ್ಲಿದೆ ಪಟ್ಟಿ

1) ಯಾದಗಿರಿ – ಬಲವಂತ್ – ಪ್ರಾಜೆಕ್ಟ್ ಮ್ಯಾನೇಜರ್ – ಜಿಲ್ಲಾ ಪಂತಾಯತ್

2) ಬೆಂ.ಗ್ರಾಮಾಂತರ – ಸಿದ್ದಪ್ಪ – ಸೀನಿಯರ್ ವೆಟರ್ನರಿ ಆಫೀಸರ್ – ದೊಡ್ಡಬಳ್ಳಾಪುರ

3) ನರಸಿಂಹಮೂರ್ತಿ – ಬೆಂ. ಗ್ರಾಮಾಂತರ -ಮುನ್ಸಿಪಲ್ ಕಮೀಷನರ್ – ಹೆಬ್ಬಗೋಡಿ

4) ರಾಜಾ – ಎಫ್ ಡಿ ಎ – KIADB ಬೆಂಗಳೂರು

5) ರಮೇಶ್ ಕುಮಾರ್ – ಜಂಟಿ ಆಯುಕ್ತರು ಕಮರ್ಷಿಯಲ್ ಟ್ಯಾಕ್ಸ್ – ಬೆಂಗಳೂರು

6) ಅತ್ತರ್ ಅಲಿ – Dy, ಕಂಟ್ರೋಲರ್ ಲೀಗಲ್ ಮೆಟರಾಲಜಿ – ಬೆಂಗಳೂರು

7) ನಾಗೇಶ್ – ಅಧ್ಯಕ್ಷರು – ಅಂತರಗಂಗೆ ಗ್ರಾಮ ಪಂಚಾಯತ್ – ಭದ್ರಾವತಿ

8) ಪ್ರಕಾಶ್ – ಡೆಪ್ಯುಟಿ ಡೈರಕ್ಟರ್ – ಆರ್ಟಿಕಲ್ಚರಲ್ ಡಿಪಾರ್ಟ್ಮೆಂಟ್ – ಶಿವಮೊಗ್ಗ

9) ಚೇತನ್ ಕುಮಾರ್ – ಕಾರ್ಮಿಕ ಇಲಾಖೆಯ ಅಧಿಕಾರಿ -ಮಂಡ್ಯ ಡಿವಿಜನ್

10) ಆನಂದ್ – ಆಯುಕ್ತರು – ಮಂಗಳೂರು ಮಹಾನಗರ ಪಾಲಿಕೆ

11) ಮಂಜುನಾಥ್ ಟಿ. ಆರ್ – ಎಫ್ ಡಿ ಎ – ಬೆಂಗಳೂರು ಉತ್ತರ ವಿಭಾಗ

12) ತುಮಕೂರು – ಮುದ್ದುಕುಮಾರ್ – ಅಡಿಷನಲ್ ಡೈರೆಕ್ಟರ್ ಇಂಡಸ್ಟ್ರಿ ಆಯಂಡ್ ಕಾಮರ್ಸ್ ಡಿಪಾರ್ಟ್ಮೆಂಟ್

KIADB ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್‌

ಹಾಗೆಯೇ KIADB ಅಪರ ನಿರ್ದೇಶಕ ಸಿ.ಟಿ ಮುದ್ದುಕುಮಾರ್‌, ತುಮಕೂರಿನ ನಿವಾಸದ ಮೇಲೂ ಲೋಕಾ ದಾಳಿ ಮಾಡಲಾಗಿದೆ. ತುಮಕೂರು ನಗರದ ಬನಶಂಕರಿಯಲ್ಲಿರುವ ಮನೆ, ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಮನೆಗಳಲ್ಲಿ ಶೋಧ ನಡೆಸ್ತಿದ್ದಾರೆ. ಅಂತರಸನಹಳ್ಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಫ್ಯಾಕ್ಟರಿ ಸೇರಿ 7 ಕಡೆಗಳಲ್ಲಿ ಪರಿಶೀಲನೆ ನಡೆಸಲಾಗ್ತಿದೆ.

ಕಾರ್ಮಿಕ ಇಲಾಖೆ ಇನ್ಸ್‌ಪೆಕ್ಟರ್ ಚೇತನ್

ಮೈಸೂರಿನಲ್ಲೂ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್‌ ಮಾಡಿದ್ದಾರೆ. ಕಾರ್ಮಿಕ ಇಲಾಖೆ ಇನ್ಸ್‌ಪೆಕ್ಟರ್ ಚೇತನ್ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ. ಮೈಸೂರಿನ ಶಾರದಾದೇವಿ ನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗ್ತಿದೆ.

ಪಾಲಿಕೆ ಆಯುಕ್ತ ಕೆ ಎ ಎಸ್ ಗ್ರೇಡ್ ಅಧಿಕಾರಿ ಆನಂದ್

ಮಂಗಳೂರಿನಲ್ಲೂ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಕೆ ಎ ಎಸ್ ಗ್ರೇಡ್ ಅಧಿಕಾರಿ ಆನಂದ್ ಮನೆ ಮೇಲೆ ದಾಳಿ ಮಾಡಲಾಗಿದೆ. ಕಮಿಷನರ್ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಶೋಧ ಮಾಡ್ತಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್

ಶಿವಮೊಗ್ಗದಲ್ಲೂ ಲೋಕಾಯುಕ್ತ ಅಧಿಕಾರಿಗಳು 2 ಪ್ರತ್ಯೇಕ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ಹಾಗೂ ಭದ್ರಾವತಿ ತಾಲೂಕಿನ ಅಂತರಗಂಗೆಯ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ನಿವಾಸದ ಮೇಲೆ ದಾಳಿ ಮಾಡಲಾಗಿದೆ. ಅಕ್ರಮ ಆಸ್ತಿ ಗಳಿಕೆ ಮಾಹಿತಿಯ ಮೇರೆಗೆ ಲೋಕಾ ಅಧಿಕಾರಿಗಳು ದಾಳಿ ಮಾಡಿ, ಹಲವು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಬಲವಂತ ರಾಠೋಡ

ಆದಾಯ ಮೀರಿ ಆಸ್ತಿ ಸಂಪಾದನೆ ದೂರು ಹಿನ್ನಲೆ, ಇಂದು ಯಾದಗಿರಿಯ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಬಲವಂತ ರಾಠೋಡ ಅವರ ಸರ್ಕಾರಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಬೆಳ್ಳಂಬೆಳಗ್ಗೆಯೇ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸ್ತಿದ್ದಾರೆ.

ವಿಜಯಪುರದಲ್ಲಿ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟರ ಮನೆ ಕದ ತಟ್ಟಿದ್ದಾರೆ. ಯಾದಗಿರಿ ಜಿಲ್ಲೆ ಯೋಜನಾಧಿಕಾರಿ ಬಲವಂತ ರಾಠೋಡ ನಿವಾಸಗಳ ಮೇಲೆ ದಾಳಿ ಮಾಡಿದ್ದಾರೆ. ಯಾದಗಿರಿ-ವಿಜಯಪುರ ಸೇರಿ ನಿವಾಸ, ಕಚೇರಿ ಮೇಲೆ ದಾಳಿ ಮಾಡಿ ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ಮಾಡುತ್ತಿದ್ದಾರೆ…

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend