ಕೂಡ್ಲಿಗಿ:ಗುಣಮಟ್ಟದ ಆಹಾರ ನೀಡುವಂತೆ ಹೋರಾಟಗಾರರ ಹಕ್ಕೊತ್ತಾಯ…!!!

Listen to this article

ಕೂಡ್ಲಿಗಿ:ಗುಣಮಟ್ಟದ ಆಹಾರ ನೀಡುವಂತೆ ಹೋರಾಟಗಾರರ ಹಕ್ಕೊತ್ತಾಯ…

ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗಾಗಿ ಹಾಗೂ ಗರ್ಭಿಣಿ ಸ್ತ್ರೀಯರಿಗೆ ವಿತರಿಸಲಾಗುತ್ತಿರುವ. ಪೌಷ್ಟಿಕಾಂಶ ವುಳ್ಳ ಆಹಾರ ಸಾಮಾಗ್ರಿಗಳು, ತೀರ ಕಳಪೆ ಮಟ್ಟದಲ್ಲಿದ್ದು. ಉತ್ತಮ ಗುಣಮಟ್ಟದ ಆಹಾರ ಸಾಮಾಗ್ರಿಗಳನ್ನು, ಸಮರ್ಪಕವಾಗಿ ವಿತರಿಸುವಂತೆ ಹೋರಾಟಗಾರರು CDPO ಇಲಾಖೆಗೆ ಹಕ್ಕೊತ್ತಾಯ ಮಾಡಿದ್ದಾರೆ. KPCC ಕಾರ್ಮಿಕ ವಿಭಾಗದ ಜಿಲ್ಲಾ ಉಪಾಧ್ಯಕ್ಷರಾದ ಉಪ್ಪಾರ ರಾಘವೇಂದ್ರ, ಕನ್ನಡ ನಾಡು ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹುಚ್ಚೇನಹಳ್ಳಿ ಪಂಪಾಪತಿ ನೇತೃತ್ವದಲ್ಲಿ. ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, CDPO ಇಲಾಖಾಧಿಕಾರಿಗೆ ತಮ್ಮ ಹಕ್ಕೊತ್ತಾಯ ಪತ್ರ ನೀಡಿದ್ದಾರೆ. ಸಂಬಂಧಿಸಿದಂತೆ ಹುಚ್ಚೇನಹಳ್ಳಿ ಪಂಪಾಪತಿ ಮಾತನಾಡಿ, ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿನ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ. ತ‍ಾವು ಭೇಟಿ ನೀಡಿ ಆಹಾರ ಪದಾರ್ಥ ಹಾಗೂ ಸಾಮಾಗ್ರಿಗಳನ್ನು ಪರಿಶೀಲಿಸಿದ್ದು, ಕೆಲವು ಆಹಾರ ಪದಾರ್ಥಗಳು ಕಳಪೆ ಗುಳಮಟ್ಟದ್ದ‍ಾಗಿವೆ. ಕೆಲವು ಹುಳ ಕಸ ತ್ಯಾಜಗಳನ್ನು ಒಳಗೊಂಡಿವೆ, ತುಂಬಾ ಹಳೆಯ ಕಳಪೆ ಗುಳಮಟ್ಟದ ಆಹಾರ ಪದಾರ್ಥಗಳು ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಕಂಡುಬಂದಿವೆ. ಆರ್ಗನಿಕ್ ಬೆಲ್ಲ ಎಂದು ಹೇಳಲಾಗುವ ಬೆಲ್ಲ ತುಂಬಾ ಕಳಪೆಯದ್ದಾಗಿದೆ, ಕೆಲವೆಡೆಗಳಲ್ಲಿ ಬೇಳೆ ಉಳಗಳಿಂದ ಕೂಡಿವೆ. ಹೀಗೆ ಅನೇಕ ಲೋಪ ಗಳಿರುವ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು, ಸರಬರಾಜಾಗುತ್ತಿದ್ದು ಗರ್ಭಿಣಿಯರು ‌ನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಅಂಗನವಾಡಿ ಶಾಲೆಯಲ್ಲಿ ಆಹಾರ ಸೇವಿಸುವ ಮಕ್ಕಳ ಆರೋಗ್ಯದ ಮೇಲೆ, ವ್ಯತಿರಿಕ್ತ ಪರಿಣಾಮ ಬೀರಿ ನಾನಾರೀತಿಯ ಅನಾರೋಗ್ಯಕ್ಕೀಡಬಹುದಾಗಿದೆ. ಕ‍ಾರಣ ಕೂಡಲೆ ಇಲಾಖೆಯ ಉನ್ನತಾಧಿಕಾರಿಗಳು, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕಿದೆ. ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದ್ದಲ್ಲಿ, ಜಿಲ್ಲಾಧಿಕಾರಿಗಳಿಗೆ ಸಾಕ್ಷ್ಯಾಧಾರಗಳ ಸಮೇತ, ದೂರು ನೀಡಲಾಗುವುದು. ಮತ್ತು ಮಕ್ಕಳು ಹಾಗೂ ಗರ್ಭಿಣಿ ಮಹಿಳೆಯರ ಮೇಲ‍ಗುವ, ಅನಾರೋಗ್ಯಕ್ಕೆ CDPO ಅಧಿಕಾರಿಗಳೇ ಹೊಣೆಯಾಗಿಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು…

ವರದಿ..ವಿ.ಜಿ.ವೃಷಭೇಂದ್ರ ಕೂಡ್ಲಿಗಿ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend