ಡೆಂಗ್ಯೂ ಜ್ವರದ ತೀವ್ರತೆ ತಪ್ಪಿಸಲು ಕ್ರಮಕ್ಕೆ ಒತ್ತಾಯ ಶಾಸಕ ಡಾ. ಶ್ರೀನಿವಾಸ್. ಎನ್. ಟಿ…!!!

Listen to this article

ಬಹುದಿನಗಳ ಕಾಲ ಎರಡು ಕ್ಷೇತ್ರಗಳ ನಡುವಿನ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವುದನ್ನು ಬಗೆಹರಿಸಲು ಸೂಚನೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.

“ ಡೆಂಗ್ಯೂ ಜ್ವರದ ತೀವ್ರತೆ ತಪ್ಪಿಸಲು ಕ್ರಮಕ್ಕೆ ಒತ್ತಾಯ”

ಕೊಟ್ಟೂರು ತಾಲ್ಲೂಕು ಪಂಚಾಯತಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಇoದು ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ ಹಾಗೂ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರವನ್ನು ಒಳಗೊಂಡಂತೆ ಜಂಟಿಯಾಗಿ ಕೆ. ಡಿ. ಪಿ. ಸಭೆ ನಡೆಸಲಾಯಿತು. ಮಾನ್ಯಶಾಸಕರಾದ ಡಾ. ಶ್ರೀನಿವಾಸ್ .ಎನ್. ಟಿ‌. ಅವರು ಮಾತನಾಡಿ, ಡೆಂಗ್ಯೂ ಜ್ವರ ತೀವ್ರತೆಯ ತಪ್ಪಿಸಲು, ಕೊಟ್ಟೂರು ತಾಲೂಕಿನ ಮತ್ತು ಕೂಡ್ಲಿಗಿ ಕ್ಷೇತ್ರದ ಉಜ್ಜಿನಿ, ನಿಂಬಳಗೆರೆ, ತೂಲಹಳ್ಳಿ, ಕಾಳಾಪುರ, ನಾಗರಕಟ್ಟೆ, ಗ್ರಾ. ಪಂ. ಕಡೆಯಿಂದ ಡೆಂಗ್ಯೂ ಜ್ವರವನ್ನು ತಪ್ಪಿಸಲು ಮುನ್ನೆಚ್ಚರಿಕೆಯಿಂದ ಗ್ರಾಮ – ಪಟ್ಟಣ ಪಂಚಾಯತಿ ಹಾಗೂ ಖಾಸಗಿ ಸಂಘ ಸಂಸ್ಥೆಗಳ ಸಹಕಾರ ಜೊತೆಗೆ ಸ್ವಚ್ಚತೆಗೆ ಗಮನ ಕೊಡಬೇಕು ಎಂದೂ ಅಧಿಕಾರಿಗಳಿಗೆ ಕಟ್ಟು ನಿಟ್ಟಾಗಿ ಶಾಸಕರು ಸೂಚಿಸಿದರು. ವೈದ್ಯಾಧಿಕಾರಿಗಳಿಗೆ ವಿಶೇಷವಾಗಿ ಜನರ ಆರೋಗ್ಯ ಕುರಿತು ಕಾಳಜಿ ವಹಿಸಲು ತಿಳಿಸಿದರು. ವಸತಿ ನಿಲಯ ಪಾಲಕರು ಖಾಲಿ ಇರುವ ಕಡೆ ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ಅಗತ್ಯ ಇರುವ ಕಡೆ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಸುಂಕದಕಲ್ಲು ಗ್ರಾಮದ ವಾಂತಿ ಭೇದಿ ಪ್ರಕರಣ, ಸ್ವಚ್ಚತೆಯ ಬಗ್ಗೆ ಕೂಡ್ಲಿಗಿ ಶಾಸಕರು ಯಾಕೆ ನಿರ್ಲಕ್ಷ್ಯ ವಹಿಸಿದ್ದೀರಿ? ಎಂದೂ ಪತ್ರಕರ್ತರು ಪ್ರಶ್ನೆ ಕೇಳಿದರು. ಶಾಸಕರು ಮಾತನಾಡಿ, ಸುಂಕದಕಲ್ಲು ಹಗರಿಬೊಮ್ಮನಹಳ್ಳಿ ಕ್ಷೇತ್ರ – ಕೂಡ್ಲಿಗಿ ಕ್ಷೇತ್ರದ ಮಧ್ಯೆ ಸಮಸ್ಯೆ ಸುಳಿಯಲ್ಲಿ ಸಿಲುಕಿಕೊಂಡಿದೆ. ಸುಂಕದಕಲ್ಲು ಗ್ರಾಮವನ್ನು ವಿಶೇಷವಾಗಿ ಪರಿಗಣಿಸಿ ಇಡೀ ಊರನ್ನು ಸುತ್ತಿ ಮೂಲ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿರುವೆ. ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ, ಎರಡು ಕೋಟಿ ಅನುದಾನ ತಂದಿರುವೆ.‌ ಮುಂದಿನ ದಿನಗಳಲ್ಲಿ ಅದನ್ನು ಅಭಿವೃದ್ಧಿ ಪಡಿಸುವೆ ಎಂದೂ ತಿಳಿಸಿದರು. ಶಾಸಕರು, ಪತ್ರಕರ್ತರ ಕಾಳಜಿಗೆ ಧನ್ಯವಾದಗಳು ತಿಳಿಸಿದರು. ಸಭೆಯಲ್ಲಿ ಶಾಸಕರು, ಸ್ವಚ್ಚತೆ, ಆರೋಗ್ಯ, ಮೂಲಭೂತ ಸೌಕರ್ಯಗಳು ಮತ್ತು ಇಡೀ ರಾಜ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಜೆ. ಜೆ. ಎಂ. ಕಾಮಗಾರಿಯು ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಕುಂಠಿತಗೊಂಡಿರುವ ಸಮಸ್ಯೆಯನ್ನು ಬಗೆಹರಿಸಿರುವೆ ಎಂದರು. ರೈತರ ಭೂಮಿಯನ್ನು ವಿವಿಧ ಕಂಪನಿಗಳು ಕೊಳ್ಳೆಹೊಡೆಯುತ್ತಿರುವುದನ್ನು ತಪ್ಪಿಸಲು ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು ಎಂದೂ ಧ್ವನಿಗೂಡಿಸಿದರು. ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಮಾನ್ಯಶಾಸಕರಾದ ಶ್ರೀಯುತ ನೇಮಿರಾಜ ನಾಯ್ಕ ಅವರು, ಎರಡು ಕ್ಷೇತ್ರದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಪತ್ರಕರ್ತರು ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend