ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಡಿವೈಎಸ್ ಪಿ ಟಿ.ಬಿ. ರಾಜಣ್ಣ ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು…!!!

Listen to this article

ಚಳ್ಳಕೆರೆ.
ಅಮ್ಮನ ಕೈತುತ್ತು, ಅಪ್ಪನ ದುಡಿಮೆಯ ಪರಿಶ್ರಮದ ಮಹತ್ವ ತಿಳಿದು ಮಕ್ಕಳು ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ಡಿವೈಎಸ್ ಪಿ ಟಿ.ಬಿ. ರಾಜಣ್ಣ ವಿದ್ಯಾರ್ಥಿ ಗಳಿಗೆ ಸಲಹೆ ನೀಡಿದರು.

ಚಳ್ಳಕೆರೆ ನಗರದ ಸೋಮಗುದ್ದು ರಸೆಯಲ್ಲಿನ ಸರ್ಕಾರಿ ಪಧವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಎನ್‌ಎಸ್‌ಎಸ್ ಘಟಕ ವತಿಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವ್ಯಸನ ಮುಕ್ತ ಸಮಾಜ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವ ಸಮುದಾಯದ ಮೇಲೆ ದೇಶದ ಸಾಮಾಜಿಕ ಜವಾಬ್ದಾರಿಯಿದೆ. ತಮ್ಮ ಮಕ್ಕಳು ಸಮಾಜದಲ್ಲಿ ಒಳ್ಳೆಯ ಗೌರವ ಮತ್ತು ಸಾಧಕರಾಗಿ ಬೆಳೆಯಬೇಕು ಎನ್ನುವ ಪಾಲಕರ ಆಸೆ ಈಡೇರಿಸುವ ಜವಾಬ್ದಾರಿಯೂ ಇದೆ. ಮಾದಕ ವಸ್ತುಗಳಿಗೆ ಬಲಿಯಾಗುವ ಯುವ ಸಮುದಾಯ ಜಾಗೃತವಾಗಬೇಕು. ಇಲ್ಲಿ ಗೆಳೆತನ ಮತ್ತು ಸಂಭ್ರಮ ಆಚರಿಸುವ ಜಾಗಗಳಲ್ಲಿ ಮಾದಕ ವಸ್ತಗಳಿಗೆ ಪ್ರೇರಿತರಾಗುತ್ತಾರೆ. ಇದಕ್ಕೆ ಮನಸ್ಸುಕೊಟ್ಟವರು ಸುಳ್ಳು, ಕಳ್ಳತನ ಮತ್ತು ಸಮಾಜಘಾತುಕ ಶಕ್ತಿಗಳಾಗಿ ಬೆಳೆಯುತ್ತಾರೆ. ಇದರಿಂದ ಪೊಲೀಸ್ ಪ್ರಕರಣಗಳಲ್ಲಿ ಸೇರ್ಪಡೆಯಾಗಿ ಜೀವನವೆ ನಾಶವಾಗುತ್ತದೆ. ವಿದ್ಯಾರ್ಥಿ ದಿಸೆಯಲ್ಲಿ ಕುಟುಂಬದವರ ಆಸೆಯಂತೆ ಶಿಕ್ಷಣದಲ್ಲಿ ಜಾಣರಾಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.


ಪ್ರಾಚಾರ್ಯ ಎಂ.ರವೀಶ್ ಮಾತನಾಡಿ, ಅಂದು ಹೆಚ್ಚು ಪುಸ್ತಕಗಳನ್ನ ಓದುತ್ತಿದ್ದರು ಪುಸ್ತಕದಲ್ಲಿನ ಇರುವ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದರು. ಹಿಂದೂ ಮೊಬೈಲ್ ಹೆಚ್ಚು ಬಳಕೆ ಆಗುತ್ತಿವೆ ಇದರಿಂದಾಗಿ ಇತ್ತೀಚಿನ ದಿನಗಳಲ್ಲಿ ಅಪರಾಧಗಳು ಸಹ ಹೆಚ್ಚುತ್ತಿವೆ.ಬದಲಾದ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗೆ ಸಂಪೂರ್ಣ ಸ್ವತಂತ್ರ್ಯ ಇದೆ. ಇದನ್ನು ದುರುಪಯೋಗ ಮಾಡಿಕೊಳ್ಳಬಾರದು. ಮನೆಯಲ್ಲಿ ಪಾಲಕರು ಮತ್ತು ಶಿಕ್ಷಕರ ಮಾರ್ಗದರ್ಶನ ಬದುಕಿಗೆ ಅಳವಡಿಸಿಕೊಳ್ಳಬೇಕು. ಸ್ಪರ್ಧಾ ಪರೀಕ್ಷೆಗೆ ಸಿದ್ದತೆಯಾಗುವ ಮಾಹಿತಿಯನ್ನು ಮೊಬೈಲ್‌ನಲ್ಲಿ ಕಲಿಯಬಹುದು. ದಯಮಾಡಿ ಮೊಬೈಲ್ ಒಳ್ಳೆಯ ಅಭ್ಯಾಸಕ್ಕೆ ಬಳಸಬೇಕೆಂದು ಹೇಳಿದರು.
ಎನ್‌ಎಸ್‌ಎಸ್ ಅಧಿಕಾರಿ ಬಿ. ಶಾಂತಕುಮಾರಿ ಮಾತನಾಡಿ ಇಂದು ವ್ಯಸನಗಳಿಂದ ಆಗುತ್ತಿರುವ ಅನಾಹುತಗಳನ್ನು ಪ್ರತಿನಿತ್ಯ ನೋಡುತ್ತೇವೆ. ಕೆಲವು ಸಮಯದಲ್ಲಿ ಸಹವಾಸ ದೋಷದಿಂದ ಇಂತಹ ದುಷ್ಪರಿಣಾಮಗಳು ಉದ್ಭವವಾಗುತ್ತವೆ. ಇಂತಹ ಹಲವು ವಿಷಯಗಳಿಂದ ದೂರವಿದ್ದರೆ ಜೀವನ ಸುಖಮಯವಾಗುತ್ತದೆ ಎಂದರು .ಉಪನ್ಯಾಸಕರಾದ ವಸಂತಕುಮಾರ್, ಪುಟ್ಟರಂಗಪ್ಪ, ಮಾತನಾಡಿದರು. ಕುಮಾರಸ್ವಾಮಿ, ರೇಖಮ್ಮ, ಪುಷ್ಪಲತಾ, ಜಾನಕಮ್ಮ ಮತ್ತಿತರು ಇದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend