ಕೆಲಸಕ್ಕೆ ಚಕ್ಕರ್!ಸಂಬಳಕ್ಕೆ ಹಾಜರ್, ಹಾರಾಕನಾಳು ಗ್ರಾಪo ಪಿಡಿಓ ಗಾಗಿ ಗ್ರಾಮಸ್ಥರ ಹುಡುಕಾಟ…!!!

Listen to this article

ವಿಜಯನಗರ :-ಕೆಲಸಕ್ಕೆ ಮಾತ್ರ ಕರೀಬೇಡಿ, ಸಂಬಳಕ್ಕೆ ಮಾತ್ರ ಮರಿಲೇಬೇಡಿ. ಇದು ವಿಜಯನಗರದ  ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾಮ ಪಂಚಾಯತ್‌ನ ಪಿಡಿಓ ಕಥೆ. ಗ್ರಾ.ಪಂ ಪಿಡಿಓ ವೀರೇಶ್  ಬೆಳಗ್ಗೆ ಹಾಜರಿ ಬುಕ್‌ನಲ್ಲಿ ಸಹಿ ಹಾಕಿ ಹೋದರೆ ಕಚೇರಿಗೆ ವಾಪಸ್ ಮರುದಿನ ಬೆಳಗ್ಗೆಯೇ ಬರುವುದು.

ಕೆಲಸಕ್ಕೆ ಚೆಕ್ಕರ್ ಹಾಕಿ ಸಂಬಳಕ್ಕೆ ಮಾತ್ರ ಹಾಜರಾಗುವ ಪಿಡಿಓ ಅಧಿಕಾರಿ ವಿರುದ್ಧ ಗ್ರಾಮಸ್ಥರು ವಿನೂತನ ಪ್ರತಿಭಟನೆ ನಡೆಸಿದರು. ಕಳೆದ ಆರು ತಿಂಗಳಿನಿಂದ ಕೆಲಸಕ್ಕೆ ಬಾರದೇ ಶೋಕಿ ಗ್ರಾ.ಪಂ ಪಿಡಿಓ ವೀರೇಶ್ ಶೋಕಿ ಮಾಡುತ್ತಿದ್ದನಂತೆ.

ಹೀಗಾಗಿ ಪಂಚಾಯ್ತಿಯತ್ತ ಸುಳಿಯದ ಪಿಡಿಓಗಾಗಿ ಗ್ರಾಮಸ್ಥರಿಂದಲೇ ಹುಡುಕಾಟ ನಡೆದಿದೆ. ಹರಪನಹಳ್ಳಿ ತಾಲೂಕಿನ ಹಾರಕನಾಳು ಗ್ರಾ. ಪಂಚಾಯತ್ ಎದುರು ಬಿತ್ತಿ ಪತ್ರಗಳು, ಬ್ಯಾನರ್ ಪ್ರದರ್ಶನ ಮಾಡಿ ನಾಪತ್ತೆ ಆಗಿದ್ದಾನೆ. ಆದರೆ ಆರು ತಿಂಗಳಿಂದ ಕೆಲಸಕ್ಕೆ ಬಾರದಿದ್ದರೂ ಹಾಜರಾತಿ ಬುಕ್‌ನಲ್ಲಿ ಸಹಿ ಹಾಕಿದ್ದಾರೆ ಎಂದು ಆಕ್ರೋಶಿಸಿ ವಿನೂತನ ಪ್ರತಿಭಟನೆ ನಡೆಸಿದರು.

ಆರು ತಿಂಗಳಲ್ಲಿ ಒಂದೂ ಅಭಿವೃದ್ಧಿ ಕೆಲಸವೂ ಆಗಿಲ್ಲ ಯಾವ ಸಭೆಗಳನ್ನು ನಡೆಸಿಲ್ಲ. ಜನಸಾಮಾನ್ಯರ ಕೆಲಸ ಆಗುತ್ತಿಲ್ಲ, ಇಂತಹ ಪಿಡಿಓ ನಮ್ಮ ಪಂಚಾಯತಿಗೆ ಬೇಡ. ಬೆಳಗ್ಗೆ ಜನ ಕಚೇರಿಗೆ ಬರುವ‌ ಮೊದಲೇ ಸಹಿ ಹಾಕಿ ಹರಪನಹಳ್ಳಿಗೆ ಹೋಗುತ್ತಾರೆ. ಜನರು ಪಿಡಿಓ ವೀರೇಶ್‌ಗಾಗಿ ಕಾದು, ಕಾದು ಮನೆಗೆ ಹೋಗುತ್ತಾರೆ. ಕೂಡಲೆ ಬೇರೆ ಪಿಡಿಓ ಬದಲವಾವಣೆಗೆ ಅನುಮತಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಬಡ್ಡಿ ಕಟ್ಟದವರಿಗೆ ‘ನರಕ’ ಆಗಿತ್ತೇ ಈ ಶೆಡ್? ಇಲ್ಲಿ ನಡೆದಿವೆಯೇ ಇನ್ನಷ್ಟು ಕೊಲೆಗಳು?

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಜೈಲುಪಾಲಾಗಿರುವ ನಟ ದರ್ಶನ್‌ (Actor Darshan) ಹಾಗೂ ಆತನ ಗ್ಯಾಂಗ್‌ನ ಹಲವು ಆರೋಪಿಗಳನ್ನು ನ್ಯಾಯಾಲಯವು ಮತ್ತೆ ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ (Police Custody) ನೀಡಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ‌ ಮಾಡಿದ ಶೆಡ್ ಮೇಲೆ ಕೂಡ ನೂರೆಂಟು ಅನುಮಾನ ಹುಟ್ಟಿಕೊಂಡಿದ್ದು, ರೇಣುಕಾಸ್ವಾಮಿ ಕೊಲೆ ಮಾಡಿದ ಶೆಡ್ ಇಂದು ಕೂಡಾ ಪೊಲೀಸ್ ವಶಕ್ಕೆ ಇರಲಿದೆ.

ಪಟ್ಟಣಗೆರೆ ವಿನಯ್ ಶೆಡ್‌ನಲ್ಲಿ ಇಂದು ಕೂಡ ಪೊಲೀಸರು ಮಾಹಿತಿಕಲೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣ ಬೆನ್ನಲೆ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾಹಿತಿ ಪ್ರಕಾರ ದರ್ಶನ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಅದೇಷ್ಟೋ ಜನರಿಗೆ ಈ ಶೆಡ್‌ನಲ್ಲಿಯೇ ಚಿತ್ರಹಿಂಸೆ ನೀಡಲಾಗಿತ್ತು ಎನ್ನಲಾಗಿದೆ. ದರ್ಶನ್ ವಿರುದ್ಧ ಮಾತನಾಡಿದವರಿಗೆ ಇದೇ ಶೆಡ್ ನಲ್ಲಿ ಕರೆತಂದು ʻಡಿ ಗ್ಯಾಂಗ್ʼ ಹೊಡೆಯುತ್ತಿದ್ದರು ಎನ್ನಲಾಗಿದೆ. ಬಡ್ಡಿ ದುಡ್ಡು ಕಟ್ಟದ, ಲೋನ್ ಪಾವತಿ ಮಾಡದವರಿಗೆ ಕೂಡ ಇದೇ ಶೆಡ್‌ನಲ್ಲಿ ʻಡಿ ಗ್ಯಾಂಗ್ʼ ನರಕ ತೋರಿಸುತ್ತಿತ್ತು ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಬೆನ್ನಲೆ ಮತ್ತಷ್ಟು ಕೇಸ್‌ಗಳು ರಿವೀಲ್‌ ಆಗಬಹುದು ಎನ್ನಲಾಗಿದೆ. ಪೊಲೀಸರು ವಶಪಡಿಸಿಕೊಂಡ ಸಿಸಿ ಕ್ಯಾಮರೆ ದೃಶ್ಯಗಳ ಪರಿಶೀಲನೆ ಆಗುತ್ತಿದೆ. ಆರೋಪಿ ವಿನಯ್ ಸೇರಿದಂತೆ ಇತರೆ ಆರೋಪಿಗಳನ್ನು ಮತಷ್ಟು ತೀವ್ರವಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಮಾದರಿಯಲ್ಲಿಯೇ ಹಲವು ಜನರಿಗೆ ಗ್ಯಾಂಗ್‌ ಚಿತ್ರಹಿಂಸೆ ನೀಡಿತ್ತಾ ಎಂಬುದುರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಪೊಲೀಸರು.ಇಂದಿನಿಂದ ಮತ್ತೊಂದು ಹಂತದ ತನಿಖೆಗೆ ಮುಂದಾಗಿದ್ದಾರೆ ಪೊಲೀಸರು. ಎವಿಡೆನ್ಸ್‌ಗಳನ್ನು ಮುಂದಿಟ್ಟುಕೊಂಡು ವಿಚಾರಣೆ ಪೊಲೀಸರು ನಡೆಸುತ್ತಿದ್ದಾರೆ . ಆರೋಪಿಗಳ ಬಳಿ ಇದ್ದ ಹತ್ತು ಮೊಬೈಲ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಮೊಬೈಲ್‌ನಲ್ಲಿ ಕೆಲ ಸ್ಫೋಟಕ ವಿಚಾರಗಳು ಪತ್ತೆಯಾಗಿವೆ. ವೆಪನ್ ಗಳು, 30 ಲಕ್ಷ ರೂ. ಹಣ, ಕಾರುಗಳು ಸೇರಿ ಹಲವು ವಸ್ತುಗಳು ಜಪ್ತಿಯಾಗಿವೆ. ಈಗಾಗಲೇ ಆರೋಪಿಗಳನ್ನು ವಿಚಾರಣೆ ಮಾಡಿ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಪ್ರಶ್ನೆಗಳ ಸುರಿಮಳೆ

ಶರಣಾಗಿರುವ ಆರೋಪಿಗಳನ್ನು ಡ್ರಿಲ್‌ ಮಾಡುತ್ತಿರುವ ಪೊಲೀಸರು, ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಪ್ರಕರಣದ ಸಂಬಂಧ ನೀವೇನಾದರೂ ಹಣ ಪಡೆದಿದ್ರಾ? ನಿಮ್ಮನ್ನು ಸಂಪರ್ಕಿಸಿದವರು ಯಾರು? ಯಾರ ಮಾತನ್ನು ನೀವು ಕೇಳಿ ನೀವು ಪ್ರಕರಣದಲ್ಲಿ ಭಾಗಿಯಾದಿರಿ? ದರ್ಶನ ಜತೆ ನೀವೇನಾದರೂ ನೇರವಾಗಿ ಸಂಪರ್ಕದಲ್ಲಿ ಇದ್ರಾ? ಆರೋಪಿ ರಘು ನಿಮ್ಮನ್ನು ಭೇಟಿಯಾಗಿ ಹೇಳಿದ್ದೇನು? ಶೆಡ್‌ ಒಳಗೆ ಯಾರೆಲ್ಲ ಹೋದರು? ನೀವೂ ಹೋಗಿದ್ರಾ ಎಂಬುದು ಸೇರಿ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend