ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಶಾಸಕ – ಡಾ. ಶ್ರೀನಿವಾಸ್. ಎನ್.ಟಿ…!!!

Listen to this article

ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಶಾಸಕ – ಡಾ. ಶ್ರೀನಿವಾಸ್. ಎನ್.ಟಿ.

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಹೊಸಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್‌. ಟಿ. ಅವರು ದಿ.10-06-24 ರಂದು ಭೇಟಿ ನೀಡಿ “ಸಬ್ಸಿಡಿ ದರದಲ್ಲಿ ಶೇಂಗಾ ಬೀಜ ವಿತರಣೆ ಕಾರ್ಯಕ್ರಮ” ವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು. ತೀವ್ರ ಬರಕ್ಕೆ ತುತ್ತಾದ ನಮ್ಮ ಕೂಡ್ಲಿಗಿ ಕ್ಷೇತ್ರದಲ್ಲಿ ಉತ್ತಮ ಮಳೆ ಬೀಳುತ್ತಿರುವುದು ಸಂತಸ ತಂದಿದೆ. ಸರ್ಕಾರದಿಂದ ರೈತರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಬೇಕು ಎಂಬುದಾಗಿ ಈಗಾಗಲೇ ಹಲವಾರು ಸಭೆಗಳಲ್ಲಿ ಅಧಿಕಾರಿಗಳಿಗೆ ಹೇಳಿದ್ದೇವೆ‌. ನಮ್ಮ ಭಾಗದ ಹುಲಿಕೆರೆ, ಹಿರೇಕುಂಬಳಗುಂಟೆ, ತುಂಬರಗುದ್ದಿ – ಗೊಲ್ಲರಹಟ್ಟಿ ಇನ್ನೂ ಮುಂತಾದ ರೈತರಲ್ಲಿ ಬೆಳೆವಿಮೆ ಬಗ್ಗೆ ಗೊಂದಲ ಇತ್ತು. ಹೀಗಾಗಿ ಬೆಳೆವಿಮೆ ಮಾಡಿಕೊಂಡು ಸರ್ಕಾರದ ಸೌಲಭ್ಯಗಳನ್ನು ರೈತರು ಪಡೆಯಬೇಕು ಎಂದೂ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದೂ ತಿಳಿಸಿದರು. ವಿಶೇಷ ವಾಗಿ ನಮ್ಮ ರೈತರು ಆರ್ಥಿಕ ಬಿಕ್ಕಟ್ಟು ಎದುರಾಗದಂತೆ ಸರಿಯಾದ ಸಮಯಕ್ಕೆ ಬೆಳೆ ವಿಮೆ ಮಾಡಿಸಿಅದರ ಜೊತೆಗೆ ನಮ್ಮ ರೈತರು ಡಿ. ಎ. ಪಿ. ಗೊಬ್ಬರ ಮಾತ್ರ ಕೇಳುತ್ತಿದ್ದೂ ಇದು ಸರಿಯಾದ ಬೇಸಯ ಕ್ರಮವಲ್ಲ ಬೆಳೆಗಳಿಗೆ ಎಲ್ಲಾ ಪೋಷಕಾಂಶ ಸಿಗಬೇಕು ಎಂದಾದರೆ ಏನ್. ಪಿ. ಕೆ. ಭೂಮಿಗೆ ಬೇಕಾಗುತ್ತೆ ನಮ್ಮ ರೈತರು ಇನ್ನು ಸಾರಾಜನಕ ರಂಜಕ ಪೊಟ್ಯಾಶ್ ಅಂಶ ಇರುವ ಗೊಬ್ಬರ ಬಳಸಿ ಎಂದು ಹೇಳುತ್ತಾ ರೈತರು ಕೃಷಿ ಇಲಾಖೆ ಯಿಂದ ಸರಿಯಾಗಿ ಜಿ . ಪಿ. ಎಸ್. ಸರಿಯಾಗಿ ಮಾಡುತ್ತಿಲ್ಲ ಎಂದು ದೂರಿದಾಗ ಶಾಸಕರು ಅಧಿಕಾರಿಗಳಿಗೆ ಯಾವುದೇ ತಾರತಮ್ಯ ಇಲ್ಲದೆ ಜಿ. ಪಿ. ಎಸ್ ಮಾಡಬೇಕೆಂದು ಹೇಳಿದರು ಅದಕ್ಕೆ ಅಧಿಕಾರಿಗಳಾದ ಸುನಿಲ್ ಅವರು ಮಾತನಾಡಿ ಎಲ್ಲ ಗ್ರಾಮಕ್ಕೂ ನಮ್ಮ ವಾಹನ ದಲ್ಲಿ ಪ್ರಚಾರ ಕಾರ್ಯ ನಿರಂತರ ನಡೆಯುತ್ತಿದೆ ಹಾಗೇನಾದರೂ ರೈತರಿಗೆ ತೊಂದರೆ ಆದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದರು ಶಾಸಕರು ಅದಕ್ಕೆ ವಿಮೆಗೆ ಒಳಪಟ್ಟ ಬೆಳೆಗಳನ್ನು ಯಾವುದೇ ಬೇದ ಭಾವ ಮಾಡದೇ ಸಮೀಕ್ಷೆ ಮಾಡಿ ಸರ್ಕಾರಕ್ಕೆ ಕಟ್ಟುನಿಟ್ಟಾಗಿ ವರದಿಕೊಡಬೇಕು ಎಂದೂ ಅಧಿಕಾರಿಗಳಿಗೆ ತಿಳಿಸಿದರು. ಈ ವೇಳೆ ರೈತ ಸಂಪರ್ಕ ಅಧಿಕಾರಿಗಳಾದ ಎ.ಡಿ‌. ಸುನೀಲ್ ಕುಮಾರ್, ಆತ್ಮ ಯೋಜನಾಧಿ ಕಾರಿ ಶ್ರವಣ್ ಕುಮಾರ್ ನೀಲ ನಾಯ್ಕ ಚೈತ್ರ ಮತ್ತು ಕೃಷಿಕ ಸಮಾಜದ ನಿರ್ದೇಶಕರು ಆದ ಬಣವಿಕಲ್ ಯಾರಿಸ್ವಾಮಿ ಕಕ್ಕುಪ್ಪಿ ಬಸವರಾಜ್ ಕಾನಾ ಮಡುಗು ವಿರಣ್ಣ ಹೊಸಹಳ್ಳಿ ಗ್ರಾ. ಪಂ. ಅಧ್ಯಕ್ಷರಾದ ಚೇತನ್ ಕುಮಾರ್, ಸದಸ್ಯರು, ಮುಖಂಡರು, ರೈತರು, ಪತ್ರಕರ್ತರು ಉಪಸ್ಥಿತರಿದ್ದರು.

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend