ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ ಭಾಜನ ಎಂ ಬಸವರಾಜ್ ಕಕ್ಕುಪ್ಪೆ…!!!

Listen to this article

ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ ಭಾಜನ ಎಂ ಬಸವರಾಜ್ ಕಕ್ಕುಪ್ಪೆ…
ಬೆಂಗಳೂರು ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ ಇವರು ಆಯೋಜಿಸಿರುವ ಕನ್ನಡ ಸಾಹಿತ್ಯ ಸಂಭ್ರಮ ಅಂಗವಾಗಿ ಕವಿಗೋಷ್ಠಿ, ಉಪನ್ಯಾಸ, ವಚನ ಗಾಯನ ಹಾಗೂ ಕಾಯಕ ಶ್ರೀ ಪ್ರಶಸ್ತಿ, ರಾಷ್ಟ್ರೀಯ ಬಸವ ಶ್ರೀ ಪ್ರಶಸ್ತಿ, ಭಾರತ ರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ಸದ್ಭಾವ ಪ್ರಶಸ್ತಿ, ಕರ್ನಾಟಕ ಕಲಾ ರತ್ನ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಸರ್ ಎಂ ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ 09-06- 2024ರಂದು ಬೆಳಿಗ್ಗೆ 10:00 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ ಬೆಂಗಳೂರು ನಲ್ಲಿ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಎಂ ಬಸವರಾಜ್ ಕಕ್ಕುಪ್ಪೆಯವರಿಗೆ ರಾಷ್ಟ್ರೀಯ ಬಸವ ಶ್ರೀ ಪ್ರಶಸ್ತಿ ನೀಡಿ ರೈತ ಸಂಘದಲ್ಲಿ ಮತ್ತು ಇತರ ಸಂಘ ಸಂಸ್ಥೆಗಳ ರೈತ ಚಳುವಳಿ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೂಡ್ಲಿಗಿ ನಿರಾವಾರಿ ಯೋಜನೆ ಜಾರಿಯಾಗುವವರೆಗೂ ಹೋರಾಟದಲ್ಲಿ ಯಶಸ್ಸು ಕಂಡಿರುವುದನ್ನು ಗುರುತಿಸಿ ರಾಷ್ಟ್ರೀಯ ಬಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು ಇದೇ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಡಾ, ಆರೂಢ ಭಾರತಿ ಮಹಾಸ್ವಾಮಿಗಳು, ಸಿದ್ಧಾರೂಢ ಮಿಷಿನ್ ಆಶ್ರಮ ರಾಮ ಹಳ್ಳಿ, ಖ್ಯಾತವಾಗ್ಮಿಗಳು ಪ್ರಸಿದ್ಧ ಚಲನಚಿತ್ರಗಳು ಬೆಂಗಳೂರು ಇವರು ಉದ್ಘಾಟಿಸಿದರು ಡಾ, ಚಿಕ್ಕ ಹೆಜ್ಜಾಜಿ ಮಹಾದೇವ್ ಕಾರ್ಯಕ್ರಮದ ಆಶ್ರಯ ನುಡಿ ನುಡಿಯನ್ನು ಡಾ,ಚಂದ್ರಶೇಖರ್ ಮಡಲಗೇರಿ ಚೇತನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಧಾರವಾಡ, ಡಾಕ್ಟರ್ ತಲಕಾಡು ಚಿಕ್ಕ ರಂಗೇಗೌಡ ಇತಿಹಾಸ ತಜ್ಞರು ಸಂಶೋಧಕರ ಬೆಂಗಳೂರು, ವೈ ಬಿ ಹೆಚ್ ಜಯದೇವ್ ಅಧ್ಯಕ್ಷರು ಜನಪದ ಸಾಹಿತ್ಯ ಪರಿಷತ್ ದಾಸರಹಳ್ಳಿ, ಅಖಿಲ ಕರ್ನಾಟಕ ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ್, ಡಿಕೆ ರವಿ ಅಭಿಮಾನಿ ಬಳಗ ರಾಜ್ಯ ಅಧ್ಯಕ್ಷ ಮುರಳಿಗೌಡ, ಕಾವ್ಯಶ್ರೀ ಚಾರಿಪ್ರಭ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಡಾ. ಜಿ ಶಿವಣ್ಣ ಸೇರಿದಂತೆ ಅನೇಕರು ರಾಷ್ಟ್ರೀಯ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಶ್ರೀ ಪ್ರಶಸ್ತಿ, ಕಾಯಕ ಶ್ರೀ ಪ್ರಶಸ್ತಿ, ಸರ್ ಎಂ ವಿಶ್ವೇಶ್ವರಯ್ಯ ಪ್ರಶಸ್ತಿ, ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಕಲಾ ರತ್ನ ಪ್ರಶಸ್ತಿ, ಡಾ, ಬಿಆರ್ ಅಂಬೇಡ್ಕರ್ ಸದ್ಭಾವನ ಪ್ರಶಸ್ತಿ, ಪ್ರಶಸ್ತಿ ಪುರಸ್ಕೃತರು ಹಾಗೂ ಕವಿಗಳು ಸಾಹಿತಿಗಳು ವಿದ್ವಾಂಸರು ಸೇರಿದಂತೆ ಅನೇಕರು ಇತರರು ಸಾರ್ವಜನಿಕರು ಉಪಸ್ಥಿತರಿದ್ದರು..

ವರದಿ. ಎಂ,ಉಜ್ಜಿನಯ್ಯ ಸಂಡೂರು

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend