ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದ ಶಾಸಕ ಡಾ. ಶ್ರೀನಿವಾಸ್. ಎನ್. ಟಿ.‌..!!!

Listen to this article

ಸರ್ಕಾರ ಮಟ್ಟದಲ್ಲಿ ಶಿಕ್ಷಣದ ಗುಣಮಟ್ಟಕ್ಕಾಗಿ ಶ್ರಮಿಸಲು ಬದ್ಧ ; ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ಸೂಚನೆ – ಶಾಸಕ ಡಾ. ಶ್ರೀನಿವಾಸ್. ಎನ್. ಟಿ.‌

ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವಿವಿಧ ಅಧಿಕಾರಿಗಳೊಂದಿಗೆ ಮಾನ್ಯಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ತಾಲೂಕು ಪಂಚಾಯತಿ ಕಛೇರಿಯಲ್ಲಿ ದಿ. 30-5-24 ರಂದು ಶಿಕ್ಷಣ ಕ್ಷೇತ್ರದ ಗುಣಮಟ್ಟವನ್ನು ಉತ್ತಮ ಪಡಿಸಲು ಸಭೆ ನಡೆಸಿದರು. ಶಿಕ್ಷಣ ಕ್ಷೇತ್ರದ ಆವಿಷ್ಕಾರದೊಂದಿಗೆ ಸರ್ಕಾರದ ಉನ್ನತ ಮಟ್ಟದಲ್ಲಿ ನಾವು ನಿಮ್ಮೊಂದಿಗೆ ಸಹಕಾರ ಕೊಡುತ್ತೇವೆ. ನನ್ನೊಂದಿಗೆ ನೀವು ಕೈ ಜೋಡಿಸಬೇಕು. ಗುಣಮಟ್ಟದ ಜೀವನಕ್ಕಾಗಿ ಶಿಕ್ಷಣದ ಅವಶ್ಯಕತೆ ಇದೆ. ಶೈಕ್ಷಣಿಕ ಚಟುವಟಿಕೆಗಳಲ್ಲಿ ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ಮನವಿ ಮಾಡಿ ಅಭಿವೃದ್ಧಿಗೆ ಕೈ ಜೋಡಿಸಲು ಸೂಚಿಸಿದರು.‌

ಹತ್ತನೆಯ ತರಗತಿ – ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಪಡೆದರು. ಪ್ರಾದೇಶಿಕವಾಗಿ ಗಣಿತ – ಇಂಗ್ಲೀಷ್ ವಿಷಯಕ್ಕೆ ಶಿಕ್ಷಕರು – ಪಠ್ಯಪುಸ್ತಕ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು – ಶಿಕ್ಷಕರು, ಅಡುಗೆ ಸಹಾಯಕರ ಅಂಕಿ ಅಂಶಗಳನ್ನು ಪಡೆದರು. ಬೋಧನ ಕಟ್ಟಡಗಳು, ವಸತಿ ನಿಲಯಗಳು, ಅಡುಗೆ ಕೊಠಡಿಗಳ ಸ್ಥಿತಿಗತಿ ಮತ್ತು ಸಹಾಯಕರ ಕುರಿತು ಚರ್ಚಿಸಿದರು. ಶಾಲೆ – ಕಾಲೇಜಿನ ಮಕ್ಕಳ ಪ್ರವೇಶ, ವಸತಿ ನಿಲಯ, ಮೂಲಭೂತ ಸೌಕರ್ಯಗಳು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.‌ ಶಾಲೆ – ಕಾಲೇಜಿನ ಪರಿಸರದಲ್ಲಿ ಸ್ವಚ್ಚತೆಗೆ ಗಮನ ಹರಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಅಧಿಕಾರಿಗಳಾದ ಇಓ ರವಿಕುಮಾರ್ ಅವರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಜಗದೀಶ್ ಈ ದಿಡಗೂರು, ಎಲ್ಲಾ ಇಲಾಖೆಯ ವಸತಿ ಶಾಲೆಗಳ ಪ್ರಾಂಶುಪಾಲರು, ತಾಲೂಕಿನ ಸಮಸ್ತ ವಸತಿ ನಿಲಯ ಪಾಲಕರು, ಉಪಸ್ಥಿತರಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend