ಕೃಷಿ ಇಲಾಖೆ ಕೂಡ್ಲಿಗಿ ಕೃಷಿ ಪರಿಕರ ಮಾರಾಟಗಾರರ ಸಭೆ ಈ ದಿನ ಕೂಡ್ಲಿಗಿ ತಾಲೂಕು ಕೃಷಿ ಇಲಾಖೆಯ ಸಭಾಂಗಣದಲ್ಲಿ ಸಭೆಯನ್ನು ಮಾಡಲಾಯಿತು…!!!

Listen to this article

ಕೃಷಿ ಇಲಾಖೆ ಕೂಡ್ಲಿಗಿ ಕೃಷಿ ಪರಿಕರ ಮಾರಾಟಗಾರರ ಸಭೆ
ಈ ದಿನ ಕೂಡ್ಲಿಗಿ ತಾಲೂಕು ಕೃಷಿ ಇಲಾಖೆಯ ಸಭಾಂಗಣದಲ್ಲಿ ಕೃಷಿ ಪರಿಕರ ಮಾರಾಟಗಾರರ ಸಭೆಯನ್ನು ಆಯೋಜಿಸಿ ಜೊತೆಗೆ ರೈತ ಮತ್ತು ವಿವಿಧ ಸಂಘಟನೆಗಳ ಪ್ರಮುಖರನ್ನು ಸಭೆ ಕರೆದು ಇತ್ತೀಚಿನ ದಿನಗಳಲ್ಲಿ ರಸಗೊಬ್ಬರ ಬೀಜ ರೈತರಿಗೆ ಯಾವುದೇ ತೊಂದರೆ ಆಗದಂತೆ ಮತ್ತು ಸರ್ಕಾರವು ನಿಗದಿಪಡಿಸಿದ ಬೆಲೆಯಲ್ಲಿ ರಸಗೊಬ್ಬರ ಮತ್ತು ಬೀಜಗಳನ್ನು ಮಾರಾಟ ಮಾಡಲು ಚರ್ಚಿಸಲಾಯಿತು ಈ ಸಂದರ್ಭದಲ್ಲಿ ಸಿಪಿಐಎಂ ಹೆಚ್ ವೀರಣ್ಣ ಕೃಷಿ ಇಲಾಖೆ ಅಧಿಕಾರಿಗಳು ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಗೊಬ್ಬರ ಬೀಜ ಸಿಗುವಂತೆ ನೋಡಿಕೊಳ್ಳಬೇಕು ಮತ್ತು ಮುಂದೆ ಏನಾದರೂ ಬೀಜ ಮತ್ತು ಗೊಬ್ಬರದ ದಾಸ್ತಾನು ಕಡಿಮೆಯಾದಲ್ಲಿ ಕೃಷಿ ಅಧಿಕಾರಿ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಕೃಷಿ ಇಲಾಖೆಯ ಮುಂದೆ ಧರಣಿ ಕೊಡುವುದಾಗಿ ಎಚ್ಚರಿಸಿದರು.

ಅದೇ ರೀತಿಯಾಗಿ ಎಂ ಬಸವರಾಜ್ ಮಾತನಾಡಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಮಳೆ ಬರುವುದಕ್ಕೆ ಮುಂಚೆ ಕೃಷಿಕ ಸಮಾಜದ ನಿರ್ದೇಶಕರನ್ನು ಮತ್ತು ರೈತ ಸಂಘದ ಪದಾಧಿಕಾರಿಗಳನ್ನು ಮತ್ತು ವಿವಿಧ ಸಂಘಟನೆಗಳ ಮುಖಂಡರನ್ನು ಕರೆದು ನಮ್ಮ ತಾಲೂಕಿಗೆ ಬೇಕಾಗುವ ದಾಸ್ತಾನನ್ನು ಕೊರತೆಯಾಗದಂತೆ ನೋಡಿಕೊಳ್ಳುವ ಬಗ್ಗೆ ಪೂರ್ವ ಯೋಜಿತ ಮೀಟಿಂಗ್ ಕರೆಯಲು ಎಷ್ಟು ಬಾರಿ ಹೇಳಿದರೂ ಕೂಡ ಇದನ್ನು ಅನುಷ್ಠಾನಗೊಳಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ದೇವರಮನೆ ಮಹೇಶ್ ಅವರು ಮಾತನಾಡಿ ಕೃಷಿ ಅಧಿಕಾರಿಗಳು ರೈತರಿಗೆ ಗೊಬ್ಬರ ಬೀಜಗಳನ್ನು ಸರಿಯಾದ ಸಮಯಕ್ಕೆ ಒದಗಿಸದಿದ್ದರೆ ರೈತನ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಅಧಿಕಾರಿಗಳು ಅರ್ಥಮಾಡಿಕೊಳ್ಳಬೇಕು ರಸಗೊಬ್ಬರ ಮತ್ತು ಬೀಜಗಳನ್ನು ನಮ್ಮ ಕೂಡ್ಲಿಗಿ ತಾಲೂಕಿಗೆ ಬೇಕಾಗುವಷ್ಟು ದಾಸ್ತಾನನ್ನು ಇಟ್ಟುಕೊಳ್ಳಬೇಕು ಮಳೆ ಬಿದ್ದಾಗ ಗೊಬ್ಬರ ಇಲ್ಲ ಎಂದು ಕಾರಣ ಹೇಳುವುದನ್ನು ಬಿಟ್ಟು ಮುಂಜಾಗ್ರತೆಯಾಗಿ ಸರ್ಕಾರದ ಗಮನಕ್ಕೆ ತಂದು ನಮಗೆ ಬೇಕಾಗುವಷ್ಟು ರಸ ಗೊಬ್ಬರ ಮತ್ತು ಬೀಜಗಳನ್ನು ರೈತರಿಗೆ ವಿತರಿಸಬೇಕು ಎಂದರು ಮತ್ತು ಭಾಷಾ ಸಾಹೇಬ್ ಮಾತನಾಡಿ ಅನೇಕ ವರ್ಷಗಳಿಂದ ನಾವು ಗೊಬ್ಬರದ ಅಂಗಡಿಗಳ ಮುಂದೆ ಎಲ್ಲ ರೈತರಿಗೂ ಕಾಣುವಂತೆ ಸ್ಟಾಕ್ ಬೋರ್ಡ್ ಮತ್ತು ರಸಗೊಬ್ಬರಗಳ ಬೆಲೆ ಮತ್ತು ಬೀಜಗಳ ಬೆಲೆಯನ್ನು ನಮೂದು ಮಾಡಬೇಕು ಎಂದು ಹೇಳಿದರು ಇದರ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮವನ್ನು ಕೈಗೊಂಡು ಎಲ್ಲಾ ಮಾರಾಟಗಾರರ ಅಂಗಡಿಗಳ ಮುಂದೆ ಸ್ಟಾಕ್ ಬೋರ್ಡ್ ಹಾಕಬೇಕು ಎಂದು ಹೇಳಿದರು ಅನೇಕ ಡೀಲರ್ ಶಿಪ್ದಾರರು ಮಾತನಾಡಿ ನಾವು ಕೂಡ ರೈತರಾಗಿದ್ದು ರೈತರ ಕಷ್ಟಗಳಿಗೆ ನಾವು ಸ್ಪಂದಿಸುವುದಾಗಿ ತಿಳಿಸಿದರು.

ಮತ್ತು ಸರ್ಕಾರದ ದರಕ್ಕೆ ಸರಿಯಾಗಿ ನಾವು ಬೀಜ ಮತ್ತು ಗೊಬ್ಬರಗಳನ್ನು ಮಾರಾಟ ಮಾಡುವುದಾಗಿ ಭರವಸೆ ಕೊಟ್ಟರು ಈ ಸಂದರ್ಭದಲ್ಲಿ ಕೆ ಕುಮಾರಸ್ವಾಮಿ ಸಹಾಯಕ ಕೃಷಿ ನಿರ್ದೇಶಕರು ಜಾರಿದಳ ಜಂಟಿ ಕೃಷಿ ನಿರ್ದೇಶಕರ ಕಛೆರಿ ಹೊಸಪೇಟೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು ಸುನಿಲ್ ಆತ್ಮ ಯೋಜನಾಧಿಕಾರಿ ಶ್ರವಣ್ ಕುಮಾರ್ ಕೃಷಿಕ ಸಮಾಜದ ಅಧ್ಯಕ್ಷರಾದ ಸಿದ್ದನಗೌಡ ಉಪಾಧ್ಯಕ್ಷರಾದ ಜಂಬಣ್ಣಮಾಜಿ ಅಧ್ಯಕ್ಷರು ಆದ ಬಣವಿಕಲ್ ಯಾರಿಸ್ವಾಮಿ ನಿರ್ದೇಶಕರು ಅದ ಲಾಯರ್ ಸಿದ್ದಪ್ಪ ರೈತ ಸಂಘದ ಶೇಷಪ್ಪ ಶಿವಪುರ ಹಾಲ್ ಸ್ವಾಮಿ ಪಾಂಡುರಂಗ ನಾಯಕ್ ದುರ್ಗಪ್ಪ ನಾರಾಯಣ ನಾಯಕ್ ಪರಶುರಾಮಪ್ಪ ಮತ್ತು ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

ವರದಿ. ಎಂ. ಬಸವರಾಜ್, ಕಕ್ಕುಪ್ಪೆ

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend