ಸಂಡೂರಿನಲ್ಲಿ ವಾಸವಾಗಿರುವ ಇಮಾಮ್ ಭಾಷಾ ಇವರು ಕೆನರಾ ಬ್ಯಾಂಕ್ ಸೊಂಡೂರ್ ನಲ್ಲಿ ಖಾತೆ ಹೊಂದಿರುತ್ತಾರೆ. ಇವರ ಖಾತೆಯಿಂದ 24 /4/2024 ರಂದು 2, 32, 500(ಎರಡು ಲಕ್ಷದ ಮೂವತ್ತೇರಡು ಸಾವಿರದ ಐದುನೂರು ರೂಪಾಯಿ) ಗಳನ್ನು ದುಷ್ಟರು ಹ್ಯಾಕ್ ಮಾಡಿರುತ್ತಾರೆ, ಇಮಾಮ್ ಭಾಷಾ ಇವರು ತಮ್ಮ ಮಗಳ ಮದುವೆಗೆ ಎಂದು ಕೂಡಿಟ್ಟ ಹಣವನ್ನು ಬ್ಯಾಂಕಿನಲ್ಲಿ ಇಟ್ಟಿರುತ್ತಾರೆ.
ಬಡವರ ಹಣಕ್ಕೂ ದುಷ್ಟರು ಈ ರೀತಿ ಮೋಸ ಮಾಡಿದರೆ ಜನರು ಬ್ಯಾಂಕಿನ ಮೇಲೆ ಯಾವ ರೀತಿ ನಂಬಿಕೆ ಇಡಬೇಕು ಯಾವುದೇ ಓಟಿಪಿ ಬರದೆ ಇವರ ಖಾತೆಯಿಂದ ಹಣ ಹೋಗಿರುತ್ತದೆ ಆದ್ದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಕ್ರೈಂ ಬ್ರಾಂಚ್, ಬಳ್ಳಾರಿ ರವರಿಗೆ ತನಿಖೆ ಮಾಡಿಸಿ ಇವರಿಗೆ ನ್ಯಾಯ ಒದಗಿಸಿ ಕೊಡಬೇಕು ಹಾಗೂ ಅನ್ಯಾಯ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಸಾರ್ವಜನಿಕರಿಗೆ ಬ್ಯಾಂಕ್ ಸಿಬ್ಬಂದಿಯವರು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
ಕಷ್ಟ ಪಟ್ಟು ಕೂಡಿಟ್ಟ ಹಣ ಮಕ್ಕಳ ವಿದ್ಯಾಭ್ಯಾಸಕ್ಕೆ ಆರೋಗ್ಯಕ್ಕೆ ದಿನನಿತ್ಯದ ಖರ್ಚಿಗೆ ನಮ್ಮಲ್ಲಿದ್ದರೆ ಖರ್ಚಾಗುತ್ತದೆ ಅನ್ನುವ ಉದ್ದೇಶದಿಂದ ಸಾರ್ವಜನಿಕರು ಬ್ಯಾಂಕ್ ನಲ್ಲಿ ಇಟ್ಟಿರುತ್ತಾರೆ. ಈ ರೀತಿ ಮೋಸ ಮಾಡಿದರೆ ಬಹಳ ಕಷ್ಟವಾಗುತ್ತದೆ ದಯಮಾಡಿ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳು ಇಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು ಮುಂದೆ ಈ ರೀತಿಯ ಘಟನೆಗಳು ಆಗದಂತೆ ಅಗತ್ಯ ಕ್ರಮವಹಿಸಬೇಕು ಹಾಗೂ ಹಣ ಕಳೆದುಕೊಂಡ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ಮಾಡಿಕೊಂಡರು…
ವರದಿ.ಬಿ,ಎಂ, ಉಜ್ಜಿನಯ್ಯ ಸಂಡೊರ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030