ಕಳಪೆ ಮಟ್ಟದ ಕಾಮಗಾರಿ ತಡೆಯಿರಿ : ಶ್ರವಣ್ ಕುಮಾರ್ ನಾಯಕ್.
ಯಡ್ರಾಮಿ ತಾಲೂಕಿನ ಇಜೇರಿ ಹಾಗೂ ಗುಗಿಹಾಳ್ ಮತ್ತು ಯಲಗೋಡ್ ಗ್ರಾಮದ ರೈತರ ಜಮೀನಿನಲ್ಲಿ ನಡೆಯುತ್ತಿರುವ ಕೆರೆ ತುಂಬು ಯೋಜನೆ ಕಾಮಗಾರಿ ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕುಡಿದು.ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು ಗುಣಮಟ್ಟ ಕಾಮಗಾರಿ ಮಾಡುವವರೆಗೂ ಕಾಮಗಾರಿ ಬಿಲ್ ಪಾವತಿ ಮಾಡಬಾರದು ಹಾಗೂ ರೈತರ ಜಮೀನಿನಲ್ಲಿ ಇರುವ ಬೆಳೆಗಳು ಕಾಮಗಾರಿಯಿಂದ ಹಾಳಾಗುತ್ತಿದ್ದು ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿ ಗ್ರಾಮೀಣಾಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಚಿಗರಹಳ್ಳಿ ಕ್ಯಾಂಪ್ ನಲ್ಲಿರುವ ( ಕೆ ಬಿ ಜೆ ಎನ್ ಎಲ್ ) ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು. ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರವಣಕುಮಾರ್ ಡಿ ನಾಯಕ್ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು..
ವರದಿ. ಬಸಯ್ಯ ಹಿರೇಮಠ್. ಕಲಬುರ್ಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030