ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿ. ಕಾನಹೊಸಹಳ್ಳಿ ಹಿಂದುಳಿದ ಪ್ರದೇಶ ಗಳಲ್ಲಿನ ಶಾಲೆಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಶಾಲೆಗಳನ್ನು ವೆಲಿ
ಮೆಂಟ್ 14 ಸಂಸ್ಥೆ ದತ್ತು ಪಡೆದಿರುವ ಸಂತಸದ ಸಂಗತಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಾಡುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ, ಕೊಟ್ರೇಶ್ ಹೇಳಿದರು.
ಕಾನಹೊಸಹಳ್ಳಿ ಸಮೀಪದ ಗಡಿಗ್ರಾಮ ಕಾನಾಮಡುಗು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಬೆಂಗಳೂರಿನ ವೆಲ್ ಮೆಂಟ್ 14 ಮೃತ ಸಂಸ್ಥೆಗಳಿಂದ ಸಿಎಸ್ಆರ್ ಕಾರ್ಯಕ್ರಮ ಉದ್ಘಾಟನೆ ಶಾಲೆಗಳ ದತ್ತಿ. ಮಾರ್ಟ್ ಕ್ವಿಜ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು ತಂತ್ರಜ್ಞಾನ ಅಳವಡಿಕೆಯಿಂದ ಕಾನಹೊಸಹಳ್ಳಿ ಕಾನಾಮಡುಗು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ವೆಲೆ ಮೆಂಟ್ 14 ಮಾತ್ಯ ಸಂಸ್ಥೆಗಳಿಂದ ನಡೆದ ಸಿಎಸ್ಆರ್ ಕಾರ್ಯಕ್ರಮವನ್ನು ಐಮಡಿ ಶರಣಾಆರ್ಯರು ಉದ್ಘಾಟಿಸಿದರು* ಶಿಕ್ಷಣ ಗುಣಮಟ್ಟ ಎಚ್ಚರವಾಗಿದ್ದು ಅದಕ್ಕೆ ಪೂರ್ವಕವಾಗಿ ಮಾರ್ಟ್ ಕ್ಲಾಸ್ ಸಹಕಾರಿಯಾಗಲಿದ್ದು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಎಲಿಮೆಂಟ್ 14 ಸಂಸ್ಥೆಗಳ ಪ್ರಮುಖ ಗೋಪಾಲಕೃಷ್ಣ ಮರಳಿ ಮಾತನಾಡಿ ಹಿಂದುಳಿದ ಪ್ರದೇಶಗಳ ಶಾಲೆಗಳ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಈ ನಿಟ್ಟಿನಲ್ಲಿ ಮಾನ್ಯ ಸಂಸ್ಥೆಯಿಂದ ಈ ಭಾಗದ ನಾಲ್ಕು ಚಿತ್ರದುರ್ಗದ ಎರಡು ಶಾಲೆಗಳನ್ನು ದತ್ತು ಪಡೆದಿದ್ದೇವೆ ಈಗಾಗಲೇ 3 ಲಕ್ಷಕ್ಕೂ ಅಧಿಕ ಬೆಲೆಬಾಳುವ ಪರಿಕಾರಗಳು ನೀಡಿದ್ದೇವೆ ಎಂದರು ಈ ಸಂದರ್ಭದಲ್ಲಿ ತಹಸಿಲ್ದಾರ್ ಟಿ ಜಗದೀಶ್, ಇಓ ರವಿಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವಮ್ಮ,ಬಿಇಓ ಯುವರಾಜ್ನಾಯಕ್ ನೋಡಲ್ ಅಧಿಕಾರಿ ಎನ್ ರಾಮಸ್ವಾಮಿ ಬಿಸಿಊಟ ಸಾಯಕ ನಿರ್ದೇಶಕ ಆಂಜನೇಯ ಎಸ್ಡಿಎಂಸಿ ಅಧ್ಯಕ್ಷ ಮಂಜುನಾಥ್ ಕರ್ನಾಟಕ ನೌಕರರ ಸಂಘದ ಅಧ್ಯಕ್ಷ ಪಿ ಶಿವುರಾಜ್ ಮುಖ್ಯಶಿಕ್ಷಕ ತಳವಾರ್ ಶರಣಪ್ಪ ಪಾರ್ಟಿಲ್. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೊಟ್ರೇಶ್ ಶಿವಾನಂದ ಇದ್ದರು..
ವರದಿ ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030