ಎಐಟಿಯುಸಿ ಕಟ್ಟಡ ಕಾರ್ಮಿಕರ ಗ್ರಾಮ ಘಟಕ ಉದ್ಘಾಟನೆ
ಕೂಡ್ಲಿಗಿ: ಪಟ್ಟಣ ಪಂಚಾಯತಿ ವ್ಯಾಪ್ತಿಯ 18ನೇ ವಾರ್ಡಿನ ಅಮರದೇವರ ಗುಡ್ಡ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕಾರ್ಮಿಕರ ಸಂಘ ಎಐಟಿಯುಸಿ ಗ್ರಾಮ ಘಟಕವನ್ನು ಅಮರದೇವರ ಗುಡ್ಡ ಗ್ರಾಮದ ಹಿರಿಯರಾದ. ಬಿ. ಕೊಟ್ರೇಶ್ ಇಂಜಿನಿಯರ್ ಅವರು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಟ್ಟಡ ಕಾರ್ಮಿಕರಿಗೆ ಮಂಡಳಿಯಲ್ಲಿ ಸಾವಿರಾರು ಕೋಟಿ ಅನುದಾನ ಇದ್ದು, ಅದನ್ನ ನಿಜವಾದ ಕಟ್ಟಡ ಕಾರ್ಮಿಕರು ಸೌಲಭ್ಯಗಳ ರೂಪದಲ್ಲಿ ಪಡೆಯಲು ಪ್ರತಿಯೊಬ್ಬರು ಕಾರ್ಮಿಕ ಮಂಡಳಿಯಲ್ಲಿ ನೋಂದಾಣೆ ಮಾಡಿಸಿಕೊಂಡಾಗ ಮಾತ್ರ ಸಾಧ್ಯ ಅದೆಷ್ಟು ನಿಜವಾದ ಕಟ್ಟಡ ಕಾರ್ಮಿಕರು ಕಾರ್ಡನ್ನು ಮಾಡಿಸಿಕೊಳ್ಳದೆ ಸೌಲಭ್ಯಗಳನ್ನು ಪಡೆಯಲು ವಂಚಿತರಾಗುವುದು ದುರಂತದ ಸಂಗತಿ ಇಂಥ ಪರಿಸ್ಥಿತಿಯಲ್ಲಿ ಕಾರ್ಮಿಕರ ಅಲ್ಲದವರು ಕಾಡುಗಳನ್ನು ಮಾಡಿಸಿಕೊಂಡು ನಿಜವಾದ ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದ್ದು ಕಟ್ಟಡ ಕಾರ್ಮಿಕರು ಸಂಘಟನೆಗಳನ್ನು ಮಾಡುವುದರ ಮೂಲಕ ಸಂಘಟಿತರಾಗಿ ಜಾಗೃತರಾಗಬೇಕಾಗಿದೆ. ಸಂಘಟನೆ ನಿಂತ ನೀರಾಗಬಾರದು ಚಲಿಸುವ ನದಿಯಾಗಬೇಕು ಎಲ್ಲಾ ಕಾರ್ಮಿಕರಿಗೂ ನ್ಯಾಯ ಕೊಡಿಸಲು ತಾರತಮ್ಯವಿಲ್ಲದೆ ಕಾರ್ಮಿಕರಲ್ಲ ಒಂದಾಗಿ ಸೌಲಭ್ಯ ಪಡೆದುಕೊಳ್ಳಲು ಮುಂದಾಗಿ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಎಚ್. ವೀರಣ್ಣ, ಹಾಗೂ ಕಟ್ಟಡ ಕಾರ್ಮಿಕರ ತಾಲೂಕು ಅಧ್ಯಕ್ಷರಾದ ಯು ಪೆನ್ನಪ್ಪ, ತಾಲೂಕು ಸಂಚಾಲಕರಾದ ಡಿ ಅನಂತೇಶ್, ಜಿ ಚೌಡಪ್ಪ, ಪಿ ಹನುಮಂತಪ್ಪ ಕೆ.ಕೆ ಹಟ್ಟಿ, ವಿ ಬಾಬು ಶಿವಪುರ, ಅಮರದೇವರ ಗುಡ್ಡದ ಹಾಲಿ ಪಟ್ಟಣ ಪಂಚಾಯತಿ ಸದಸ್ಯರಾದ ರಮೇಶ್, ಮಾಜಿ ಪಟ್ಟಣ ಪಂಚಾಯತಿ ಸದಸ್ಯರಾದ ಹನುಮಂತಪ್ಪ, ಗ್ರಾಮದ ಮುಖಂಡರಾದ ನವೀನ್, ಎಚ್ ಮಂಜುನಾಥ, ವಿ ಮಂಜುನಾಥ, ಹೆಚ್ ಸುರೇಶ್, ಎಚ್ ಗುನ್ನುಳ್ಳಿ, ಹೆಚ್ಚು ಅಶೋಕ್, ಚನ್ನಬಸಪ್ಪ, ವಿ ರಮೇಶ್ ಸೇರಿದಂತೆ ಕಟ್ಟಡ ಕಾರ್ಮಿಕರು, ಮುಖಂಡರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.
ವರದಿ:ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030