ಇಟ್ಟಿಗಿಯಲ್ಲಿ ದ್ವಿತೀಯ ಪಿಯುಸಿಯಲ್ಲಿ ರ್ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಮೆರವಣಿಗೆ…!!!

Listen to this article

ಇಟ್ಟಿಗಿಯಲ್ಲಿ ದ್ವಿತೀಯ ಪಿಯುಸಿಯಲ್ಲಿ ರ್ಯಾಂಕ್ ಬಂದ ವಿದ್ಯಾರ್ಥಿಗಳಿಗೆ ಮೆರವಣಿಗೆ
ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದ ಶ್ರೀ ಪಂಚಮಸಾಲಿ ಪದವಿ ಪೂರ್ವ ಕಾಲೇಜಿನ ಮೂರು ವಿದ್ಯಾರ್ಥಿಗಳು 4 ಮತ್ತು 6,6 ನೇ ರ್ಯಾಂಕ್ ನ್ನು ಪಡೆದುಕೊಂಡ ಸಂತೋಷಕ್ಕೆ ಅದೇ ಕಾಲೇಜ್ ನ ವತಿಯಿಂದ ವಿದ್ಯಾರ್ಥಿಗಳಿಗೆ ಹೂವಿನ ಹಾರ ಹಾಕಿ,ಸಿಹಿ ತಿನಿಸಿ ,ವಿಶೇಷ ವಾಹನದಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿದರು. ಶ್ರೀ ಪಂಚಮಸಾಲಿ ಪದವಿ ಪೂರ್ವ ಕಾಲೇಜ್ ನ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಾದ ಕುಮಾರಿ ಪೂರ್ಣಿಮಾ ಉಜ್ಜಿನಿ 591ಅಂಕಗಳು 4ನೇ ರ್ಯಾಂಕ್. ಕುಮಾರಿ ಪೂರ್ಣಿಮಾ ಕೆ.ಟಿ.589ಅಂಕಗಳು 6ನೇ ರ್ಯಾಂಕ್. ಕು. ರಮೇಶ್ ಸೊಕ್ಕಿ 589ಅಂಕಗಳು 6ನೇ ರ್ಯಾಂಕ್ ಗಳನ್ನು ತಮ್ಮ ಸಸತ ಅಭ್ಯಾಸ ಹಾಗೂ ಕಾಲೇಜಿನ ಪ್ರಾಂಶುಪಾಲರು & ಉಪನ್ಯಾಸಕರ ಮಾರ್ಗದರ್ಶನದಲ್ಲಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.ತಮ್ಮ ಸ್ನೇಹಿತರ ಈ ಸಾಧನೆಗೆ ಉಳಿದ ವಿದ್ಯಾರ್ಥಿಗಳ ಸಂತೋಷಕ್ಕೆ ಪಾರವೇ ಇಲ್ಲ.ರ್ಯಾಂಕ್ ಬಂದ ವಿದ್ಯಾರ್ಥಿಗಳನ್ನು ಬೆಳ್ಳಿಯ ರಥ(ಮದುವೆ ಹಾಗೂ ಶುಭ ಸಮಾರಂಭದಲ್ಲಿ ಮರೆವಣಿಗೆಗೆ ಬಳಸು ವಿಷೇಶ ವಾಹನ)ದಲ್ಲಿ ಕುರಿಸಿ ಗ್ರಾಮದ ಬೀದಿಗಳಲ್ಲಿ ಕುಣಿಯುತ್ತಾ ಮೆರವಣಿಗೆ ಮಾಡಿದರು.


ಗ್ರಾಮೀಣ ಭಾಗದ ವಿದ್ಯಾರ್ಥಿಗಳು ತಮ್ಮ ನಿರಂತರ ಪರಿಶ್ರಮದಿಂದ ಹಾಗೂ ಉಪನ್ಯಾಸಕರ ಬೋಧನೆಯಿಂದ ಹಾಗೂ ಆಡಳಿತಮಂಡಳಿಯವರ ಸಹಕಾರದೊಂದಿಗೆ ಕರ್ನಾಟಕ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ 6ನೇ ರ್ಯಾಂಕ್ ಗಳನ್ನು ಗಳಿಸಿ ಶ್ರೀ ಪಂಚಮಸಾಲಿ ಪಿಯು ಕಾಲೇಜ್ (ಇಟ್ಟಿಗಿ)ಗೆ ಮತ್ತು ಊರಿಗೆ &ಪೋಷಕರಿಗೂ ಕೀರ್ತಿಯನ್ನು ತಂದಿದ್ದಾರೆ.
ಗ್ರಾಮೀಣ ಭಾಗದ ಮಕ್ಕಳಿಗೆ ಶ್ರೀ ಪಂಚಮಸಾಲಿ ಪಿಯು ಕಾಲೇಜ್ ಗೆ ಪ್ರವೇಶ ಪಡೆದು ರ್ಯಾಂಕ್ ಬರಲಿಕ್ಕೆ ಒಂದು ಸುವರ್ಣ ಅವಕಾಶವಿದೆ ಇಲ್ಲಿ ನುರಿತ ಉಪನ್ಯಾಸಕರಿಂದ ಉತ್ತಮ ರೀತಿಯಲ್ಲಿ ತಮಗೆ ಪಠ್ಯ ಭೋದನೆ ಮಾಡಲಾವುದು ಮತ್ತು ಉತ್ತಮ ಆಡಳಿತ ಮಂಡಳಿ ತಮ್ಮ ಸಹಕಾರಕ್ಕೆ ಸದಾ ಸಿದ್ದವಿದೆ.’ಮುಂದೆ ಗುರು ಹಿಂದೆ ಗುರಿ’ ಎನ್ನುವ ಧ್ಯೇಯದೊಂದಿಗೆ ವಿದ್ಯಾರ್ಥಿಗಳು ನಮ್ಮ ಮಾರ್ಗದರ್ಶನದಲ್ಲಿ ಮುಂದೆ ನಡೆದರೆ ಉತ್ತಮ ಅಂಕಗಳಿಸಿ ತಮಗೂ,ಹಾಗೂ ತಮ್ಮ ಪೋಷಕರಿಗೂ,ತಾವು ವ್ಯಾಸಂಗ ಮಾಡುತ್ತಿರುವ ಕಾಲೇಜಿಗೆ ಕೀರ್ತಿ ತರುವುದರಲ್ಲಿ ಸಂಶಯವಿಲ್ಲ ಎಂದು ತಮ್ಮ ಅಭಿಪ್ರಾಯವನ್ನು
ಮೂಗಪ್ಪ ಸಿ ಮಾಲವಿ ಕನ್ನಡ ಉಪನ್ಯಾಸಕರು ಈ ಮೂಲಕ ಪತ್ರಿಕೆಗೆ ತಿಳಿಸಿದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend