ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಎಸಿಬಿ ಬಲಿಗೆ
ಮನೆ ಉತಾರ ನೀಡುವುದಕ್ಕೆ 13 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದ ಪಿಡಿಒ ಎಸಿಬಿ ಬಲೆಗೆ.
ಬಾಗಲಕೋಟ ಜಿಲ್ಲೆಯ
ರಬಕವಿ ಬನಹಟ್ಟಿ ತಾಲೂಕಿನ ಸೈದಾಪುರದ ಗ್ರಾಮ ಪಂಚಾಯಿತಿ ಪಿಡಿಓ ಯಲ್ಲಪ್ಪ ಮಾಂಗ್ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಅಧಿಕಾರಿ.
ಸೈದಾಪುರ್ ಗ್ರಾಮ ಪಂಚಾಯತಿಗೆ ಒಳಪಡುವ ಆಸ್ತಿ ನಂ.550 ರ ಕಟ್ಟಿದ ಮನೆಯ ಕಂಪ್ಯೂಟರ್ ಉತಾರ್ ಮಾಡಿಕೊಡುವುದಕ್ಕೆ ಆರಂಭದಲ್ಲಿ ಪಿಡಿಒ ಯಲ್ಲಪ್ಪ ಮಾಂಗ್ ರವರು 20 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು, ಕೊನೆಗೆ 13 ಸಾವಿರ ರೂಪಾಯಿಗೆ ಮುಗಿಸಿಕೊಂಡು 10ಸಾವಿರ ರೂಪಾಯಿ ಮುಂಗಡವಾಗಿ ಪಡೆದುಕೊಂಡರು ಸಹ ಉತಾರ್ ನೀಡಿರುವುದಿಲ್ಲ ಈ ಕುರಿತು ಸೋಮಪ್ಪ ನಾಯಕರವರು ಬಾಗಲಕೋಟೆಯ ಭ್ರಷ್ಟಾಚಾರ ನಿಗ್ರಹದ ಪೊಲೀಸ್ ಠಾಣೆಗೆ ಹೋಗಿ ದೂರು ಸಲ್ಲಿಸಿದ್ದರು
ನಿನ್ನೆಯ ದಿನವು ಉತಾರ ಕೊಡುವಂತೆ ಪಿಡಿಒ ಯಲ್ಲಪ್ಪ ಮಾಂಗ್ ಅವರಿಗೆ ಸೋಮಪ್ಪ ನಾಯಕರು ಕೇಳಿದರು ಸಹ ಉಳಿದ ಮೂರು ಸಾವಿರ ರೂಪಾಯಿ ಕೊಟ್ಟು ಮಂಗಳವಾರ ದಿನ ಉತಾರ ಪಡೆದುಕೊಳ್ಳುವಂತೆ ಹೇಳಿದರು ಇಂದು ಮಹಾಲಿಂಗಪುರ ನಗರದ ಮಾಲಸಾ ಮಾಂಗಲ್ಯ ಹೋಟೆಲ್ ನಲ್ಲಿ ಉಳಿದ ಮೂರು ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ ಈ ಕುರಿತು ಬಾಗಲಕೋಟೆಯ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಪಿಡಿಓ ಯಲ್ಲಪ್ಪ ಮಾಂಗ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಭ್ರಷ್ಟಾಚಾರದ ಕಾರ್ಯಾಚರಣೆಯಲ್ಲಿ ಉತ್ತರ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧೀಕ್ಷಕರಾದ,ಬಿ ಎಸ್ ನೇಮಗೌಡ ಮಾರ್ಗದರ್ಶನದಲ್ಲಿ,ಸುರೇಶ್ ರೆಡ್ಡಿ ಎಂ ಎಸ್ ಡಿಎಸ್ಪಿ ಭ್ರಷ್ಟಾಚಾರ ನಿಗ್ರಹ ದಳ ಬಾಗಲಕೋಟೆ ಇವರ ನೇತೃತ್ವದಲ್ಲಿ ತನಿಖೆ ನಡೆಸಿದರು
ವಿಜಯಮಹಾಂತೇಶ ಮಠಪತಿ, ಸಮೀರ್ ಮುಲ್ಲಾ, ಸಿಬ್ಬಂದಿಗಳಾದ ಪಾಟೀಲ್, ಅಚನೂರ, ಹೂಗಾರ್, ಕಾಖಂಡಿಕಿ, ಸುನಗದ, ರಾಥೋಡ್,ಪೂಜಾರಿ ಉಪಸ್ಥಿತರಿದ್ದರು.
ವರದಿ.ಬಸವರಾಜ ನಂದೆಪ್ಪನವರರಬಕವಿ ಬನಹಟ್ಟಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030