ಸಿಂಧನೂರು ಸಮಾಜ ಸೇವೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ-ನಿರುಪಾದೆಪ್ಪ ವಕೀಲರು.
ಸಿಂಧನೂರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್(ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಜೆ.ಎ.ರಾಯಪ್ಪ ವಕೀಲರು ಅಧ್ಯಕ್ಷರು ಅಹಿಂದ ಒಕ್ಕೂಟ ಜೆ.ಆರ್. ಅಸೋಸಿಯೇಟ್ಸ್ ಹಾಗೂ ಕಾನೂನು ಸಲಹೆಗಾರರು ಕಾರುಣ್ಯ ಆಶ್ರಮ ಸಿಂಧನೂರು ಇವರ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಮಹಾ ಪ್ರಸಾದ ಸೇವಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಕೆ. ಭೀಮಣ್ಣ ವಕೀಲರು ಅಧ್ಯಕ್ಷತೆಯನ್ನು ಎಂ ದೊಡ್ಡ ಬಸವರಾಜ ಪಿ.ಎಲ್. ಡಿ ಬ್ಯಾಂಕ್ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಎಚ್. ಎಮ್.ಬಡಿಗೇರ ಕಾರ್ಯಾಧ್ಯಕ್ಷರು ಅಹಿಂದ ಒಕ್ಕೂಟ. ಬಿ.ನಿರುಪಾದೆಪ್ಪ ವಕೀಲರು ಕಾರ್ಯದರ್ಶಿಗಳು ಅಹಿಂದ ಒಕ್ಕೂಟ. ಕೆ.ವೆಂಕೋಬ ನಾಯಕ ಉಪಾಧ್ಯಕ್ಷರು ಅಹಿಂದ ಒಕ್ಕೂಟ ಹಾಗೂ ಅಧ್ಯಕ್ಷರು ವಾಲ್ಮೀಕಿ ಸಮಾಜ ಸಿಂಧನೂರು.ಹನುಮೇಶ ಸರ್ಕಾರಿ ಸಹಾಯಕ ಅಭಿಯೋಜಕರು ರಾಯಚೂರು. ಇವರುಗಳು ವಹಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ.ಬಿ. ನಿರುಪಾದೆಪ್ಪ ವಕೀಲರು ಸಿಂಧನೂರು ಸಮಾಜ ಸೇವೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಪ್ರೋತ್ಸಾಹಿಸುವ ಕೆಲಸ ಅವರಿಗೆ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ಸ್ಪೂರ್ತಿಯಾಗುತ್ತದೆ. ಇಂದು ಸನ್ಮಾನ ಪಡೆದುಕೊಳ್ಳುತ್ತಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸಮಾಜದ ಆಸ್ತಿ ಭಾರತ ಎನ್ನುವುದು ಕರುಣೆಯ ನಾಡು ಈ ಕರುಣೆಯ ನಾಡಲ್ಲಿ ಸಮಾಜಕ್ಕೆ ಪ್ರತಿಯೊಬ್ಬರೂ ಕೂಡ ಕೊಡುಗೆ ನೀಡುವುದರ ಮೂಲಕ ಜಗತ್ತಿಗೆ ನಾವುಗಳೆಲ್ಲ ತೋರಿಸಿಕೊಡಬೇಕು. ನಮ್ಮ ಅಹಿಂದ ಒಕ್ಕೂಟ ಇಂತಹ ಸಾಧಕರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಇವರುಗಳ ಜೊತೆ ನಮ್ಮ ಒಕ್ಕೂಟ ಯಾವಾಗಲೂ ಇರುತ್ತದೆ ಎಂದು ಮಾತನಾಡಿದರು. ನಂತರ ಎಚ್. ಎನ್.ಬಡಿಗೇರ್ ಸಮಾಜ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಮಾಡಿದ್ದೇವೆ ಎನ್ನುವುದನ್ನು ನಾವುಗಳೆಲ್ಲಾ ಅರಿತುಕೊಂಡು ಸಮಾಜದಲ್ಲಿ ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಕೆಟ್ಟ ವಿಚಾರಗಳನ್ನು ಕೈಬಿಡಬೇಕು ಎಂದು ಮಾತನಾಡಿದರು.
ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಾಯಪ್ಪ ವಕೀಲರು ನಾವು ನಮ್ಮ ಅಸೋಸಿಯೇಟ್ ಹಾಗೂ ಅಹಿಂದ ಒಕ್ಕೂಟದಿಂದ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಹಲವಾರು ಅನಾಥರಿಗೆ ದಾರಿದೀಪ ವಾಗಿರುವ ಕಾರುಣ್ಯ ಆಶ್ರಮದ ಭಗವಾನ ಬುದ್ಧ ಫೆಲೋಶಿಪ್ ನ್ಯಾಷನಲ್ ಅವಾರ್ಡ್ ಸ್ವೀಕರಿಸಿದ ಚನ್ನಬಸವಸ್ವಾಮಿ ರಾಜ್ಯದಲ್ಲಿ ಮನೆ ಮನೆಮಾತಾಗಿದ್ದಾರೆ. ಪತ್ರಿಕಾರಂಗದಲ್ಲಿ ತಮ್ಮದೇ ಆದಂತಹ ವರ್ಚಸ್ಸು ಮೂಡಿಸಿಕೊಂಡು ನೇರ ದಿಟ್ಟ ನಿರಂತರವಾಗಿ ತಮ್ಮ ಬರಹದಿಂದ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವಂತಹ ಅಂಬೇಡ್ಕರ್ ಫೆಲೋಶಿಪ್ ನ್ಯಾಷನಲ್ ಅವಾರ್ಡ್ ಸ್ವೀಕರಿಸಿದ ಪತ್ರಕರ್ತರಾದ ಚಿದಾನಂದ ದೊರೆ ಜಿಲ್ಲೆಯಾದ್ಯಂತ ಗಿಡ ನೆಟ್ಟು ಗಿಡ ಬೆಳೆಸಿ ನಾಡು ಬೆಳೆಸಿ ಎನ್ನುವ ಪಣತೊಟ್ಟಿರುವ ವನಸಿರಿ ಫೌಂಡೇಶನ್ ನ ಕಾರ್ಯದರ್ಶಿಗಳಾದ ಶರಣೆಗೌಡ ಹೆಡಗಿನಾಳ ಸಿಂಧನೂರು ನಗರದಾದ್ಯಂತ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಡೆಯುವಂತಹ ಕಾರ್ಯಕ್ರಮದಲ್ಲಿ ಉಳಿದಿರುವ ಆಹಾರವನ್ನು ಶೇಖರಣೆ ಮಾಡಿ ಅನಾಥಾಶ್ರಮಗಳಿಗೆ ವೃದ್ಧಾಶ್ರಮಗಳಿಗೆ ಹಾಗೂ ನಿರ್ಗತಿಕ ಕುಟುಂಬಗಳಿಗೆ ತಲುಪಿಸುವ ಕಾರ್ಯವನ್ನು ಹಾಲು ಮಾರುವುದರ ಮೂಲಕ ಸೇವೆ ಮಾಡುತ್ತಿರುವ ಅಶೋಕ ನಲ್ಲ ಕಾರ್ಯದರ್ಶಿಗಳು ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್. ಸುಮಾರು ವರ್ಷಗಳಿಂದ ಹಲವಾರು ಸಮಾಜಪರ ಕಾರ್ಯಗಳನ್ನು ಮಾಡುತ್ತಾ ಮಹಿಳೆಯರ ರಕ್ಷಣೆಯಲ್ಲಿ ಹೆಚ್ಚಿನ ಪಾತ್ರವಹಿಸಿರುವಂತಹ ಸಾವಿತ್ರಿಬಾಯಿ ಫುಲೆ ಎನ್ನುವ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಶ್ರೀಮತಿ ಮಲ್ಲಮ್ಮ ಉಟಕನೂರು. ಸಿಂಧನೂರು ನಗರದ ಹಲವಾರು ಅನಾಥ ಜೀವಿಗಳಿಗೆ ಸಹಾಯ ಮಾಡುತ್ತಾ ಆಟೋ ಚಾಲಕನಾಗಿ ಶಕ್ತಿಮೀರಿ ಸೇವೆ ಮಾಡುತ್ತಿರುವ ಉಸ್ಮಾನ್ ಮಕಾಂದಾರ್ ಷಾ. ಹಾಗೂ ಪರಿಸರ ಪ್ರೇಮಿ ಶಿಕ್ಷಕನಾಗಿ ಪರಿಸರಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಬಸವರಾಜ ಜಾಡರ ಶಿಕ್ಷಕರು ಮುಳ್ಳೂರು (ಇ.ಜೆ) ಹಾಗೂ ಸಿಂಧನೂರು ತಾಲೂಕಿನ ನೂತನ ಪಿಎಸ್ಐ ಅಧಿಕಾರಿಯಾಗಿ ನೇಮಕ ವಾಗಿರುವ ಪ್ರದೀಪ್ ಕುಮಾರ್. ಇನ್ನೊಬ್ಬ ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿರುವ ಸೈಯದ್ ಶಕೀಲ್ ಆಹ್ಮದ್. ಹಾಗೂ ಜೀತ್ ಕುನಡೋ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ವಿದ್ಯಾರ್ಥಿನಿಯನ್ನು ಮಣಿಸಿ ಗೋಲ್ಡ್ ಮೆಡಲಿಸ್ಟ್ ಪಡೆದುಕೊಂಡ ಕುಮಾರಿ ಸುರೇಖಾ ಮಹದೇವಪ್ಪ ಧುಮತಿ. ಅಕ್ಷಯ ಆಹಾರ ಜೋಳಿಗೆ ಸೇವಾ ಟ್ರಸ್ಟ್ ಆಹಾರ ಶೇಖರಣೆ ಮಾಡಿ ನಿರ್ಗತಿಕ ಬಡಕುಟುಂಬಗಳಿಗೆ ಸಲ್ಲಿಸುವುದರ ಮೂಲಕ ಸೇವೆ ಮಾಡುತ್ತಿರುವ ಖಾಜಾಹುಸೇನ್ ಹಾಗೂ ಪತ್ನಿ ಸನಾ ಈ ಎಲ್ಲಾ ಸಮಾಜಸೇವಕರು ಗಳಿಗೆ ನಮ್ಮಅಹಿಂದ ಒಕ್ಕೂಟ ಹಾಗೂ ಅಸೋಸಿಯೇಟ್ಸ್ ನಿಂದ ಹಮ್ಮಿಕೊಂಡಿರುವ ಕಾರ್ಯಕ್ರಮ ಇವರೆಲ್ಲರನ್ನು ಪ್ರೋತ್ಸಾಯಿಸಿ ಇನ್ನೂ ಹೆಚ್ಚಿನ ಸಮಾಜ ಸೇವೆ ಮಾಡಲು ಅವಕಾಶ ನೀಡಲು ಪ್ರೇರೇಪಿಸುವ ಕಾರ್ಯಕ್ರಮ ಎಂದು ಅವರ ಸಾಧನೆಗಳನ್ನು ನೆನೆದು ಈ ಎಲ್ಲಾ ಸಾಧಕರು ಗಳಿಗೆ ಸನ್ಮಾನಿಸಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ಮಹಾದೇವಪ್ಪ ದುಮತಿ. ಹುಸೇನಪ್ಪ ಸೂಲಂಗಿ. ಹಾಗೂ ಜಿ.ರಾಯಪ್ಪ ವಕೀಲರ ಅಸೋಸಿಯೇಟ್ಸ್ ನ ಎಲ್ಲಾ ವಕೀಲರುಗಳು ಉಪಸ್ಥಿತರಿದ್ದರು. ನಂತರ ಕಾರುಣ್ಯ ಆಶ್ರಮದ ವತಿಯಿಂದ ಆಶ್ರಮದ ಕಾನೂನು ಸಲಹೆಗಾರರಾದ ಜೆ. ರಾಯಪ್ಪ ವಕೀಲರು ಅವರಿಗೆ ಸನ್ಮಾನಿಸಿ ಗೌರವಿಸಿದೆ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು. ನಂತರ ಆಶ್ರಮದ ಎಲ್ಲಾ ವೃದ್ಧರು ಬುದ್ಧಿಮಾಂದ್ಯರಿಗೆ ಮಹಾ ಪ್ರಸಾದ ವಿತರಿಸಲಾಯಿತು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030