ಗೌತಮ ಬುದ್ಧರ ಪ್ರತಿಮೆ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ – ಅಯ್ಯಪ್ಪ ಮಲ್ಲಾಪೂರು.
ಸಿಂಧನೂರು : ಕ್ರಿ.ಪೂ. ೧ನೇ ಶತಮಾನದಲ್ಲಿ ಸಿದ್ಧಾರ್ಥ ಗೌತಮರು ಬೌದ್ಧ ಧರ್ಮ ಸ್ಥಾಪಿಸಿದರು. ಭಾರತ ದೇಶದ ಪುರಾತನ ಧಮ್ಮವಾದ ಬೌದ್ಧ ಧಮ್ಮವನ್ನು, ಮೌರ್ಯ ವಂಶಸ್ಥರಾದ ಸಾಮ್ರಟ ಆಶೋಕ ಚಕ್ರವರ್ತಿಕಳಿಂಗ ಯುದ್ಧದ ನಂತರ ವಿಜಯ ದಶಮಿ ದಿನದಂದು ಬೌದ್ಧ ಧರ್ಮ ಸ್ವೀಕರಿಸಿದರು. ತಮ್ಮ ಮಕ್ಕಳನ್ನು ಬೌದ್ಧ ಬಿಕ್ಕುಗಳನ್ನಾಗಿ ಮಾಡಿ ಬೌದ್ಧ ಧರ್ಮವನ್ನು ಪ್ರಚಾರ ಮಾಡಲು ವಿದೇಶಗಳಿಗೆ ಕಳುಹಿಸಿದರು ಹಾಗೂ ಭಾರತದಲ್ಲಿ 84,000 ಬೌದ್ಧ ವಿಹಾರಗಳನ್ನು ಹಾಗೂ ರೂಪಗಳನ್ನು ನಿರ್ಮಿಸಿದರು. ಭಾರತರತ್ನ, ವಿಶ್ವಜ್ಞಾನಿ ಬೋದಿಸತ್ವ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರು 1935ರಲ್ಲಿ ಯೆವಲಾದಲ್ಲಿ ನಡೆದ ಪರಿಶಿಷ್ಟ ಜಾತಿ ಪೆಡರೇಷನ್ ಬಹಿರಂಗ ಸಭೆಯಲ್ಲಿ “ನನ್ನ ಹುಟ್ಟು ಆಕಸ್ಮಿಕ ಆದ್ದರಿಂದ ನಾನು ಹಿಂದೂವಾಗಿ ಹುಟ್ಟಿದ್ದೇನೆ. ಆದರೆ ನಾನು ಹಿಂದೂವಾಗಿ ಸಾಯಲಾರೆ “ಎಂದು ತಮ್ಮ ಭಾಷಣದಲ್ಲಿ ಉದ್ಯೋಪಿಸಿದರು ಆದ್ದರಿಂದ ದಿನಾಂಕ 14-10-1956 ವಿಜಯದಶಮಿ ದಿನದಂದು ನಾಗಪುರದಲ್ಲಿ ಐದು ಲಕ್ಷ ಆನುಯಾಯಿಗಳೊಂದಿಗೆ ಬೌದ್ಧದಮ್ಮ ದೀಕ್ಷೆ ಸ್ವೀಕರಿಸಿದರು. ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಅನುಯಾಯಿಗಳಾದ ನಾವು ಬೌದ್ಧರಾಗುವುದು ನಮ್ಮ ಆದ್ಯ ಕರ್ತವ್ಯ ಮುಂದಿನ ದಿನಗಳಲ್ಲಿ ಪ್ರತಿಯೊಂದು ಮನೆ ಮನೆಯಲ್ಲೂ ಬೌದ್ಧ ದಮ್ಮ ಆಚರಣೆಗೆ ಮುಂದಾಗೋಣ ಎಂದು ಸಮಾಜಕ್ಕೆ ಕರೆ ನೀಡಿದರು.
ತಥಾಗತ ಭಗವಾನ ಗೌತಮ ಬುದ್ಧರ ಪ್ರತಿಮೆ ಪ್ರತಿಷ್ಠಾಪನೆ ಹಾಗೂ ಲೋಕಾರ್ಪಣೆ ಕಾರ್ಯಕ್ರಮ ದಿ.26-01-2022 ರಂದು ಬೆಳಿಗ್ಗೆ 7-00 ಗಂಟೆಗೆ ಜಿಲ್ಲಾ ಕೇಂದ್ರ ಗ್ರಂಥಾಲಯ ಎದುರುಗಡೆ ರಾಯಚೂರುನಲ್ಲಿ ನೇರವೆರಲಿದ್ದು ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಮಾಸ್ಕ ಧರಿಸಿ ಅಂತರ ಕಾಯ್ದುಕೊಂಡು ಭಾಗವಹಿಸಬೇಕೆಂದು ಸಿಂಧನೂರು ನಗರದ ಪ್ರವಾಸಿ ಮಂದಿರದಲ್ಲಿ ಗೌತಮ ಬುದ್ಧರ ಕರಪತ್ರ ಬಿಡುಗಡೆ ಮಾಡಿ ಛಲವಾದಿ ಮಹಾಸಭಾದ ಕಾನೂನು ಸಲಹೆಗಾರರಾದ ಅಯ್ಯಪ್ಪ ವಕೀಲರು ಮಲ್ಲಾಪೂರು ಸಮಾಜಕ್ಕೆ ಕರೆ ನೀಡಿದರು .
ರಾಯಚೂರು ನಗರದಲ್ಲಿ ಆಕರ್ಷಣೀಯವಾದ ಬೌದ್ಧ ವಿಹಾರವನ್ನು ನಮ್ಮ ಸಮಿತಿ ನಿರ್ಮಿಸಿದೆ. ಮಹಾಬೋಧಿ ಸೊಸೈಟಿ ಬೆಂಗಳೂರು ಇವರು 6 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನೀಡಿರುತ್ತಾರೆ. ಬುದ್ಧ ವಿಹಾರ ಹಾಗೂ ಭಗವಾನ ಗೌತಮ ಬುದ್ಧರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿ ಲೋಕಾರ್ಪಣೆ ಮಾಡುತ್ತಿದ್ದೇವೆ. ಆದ್ದರಿಂದ ಈ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಬುದ್ಧಧಮ್ಮಅನುಯಾಯಿಗಳು ಡಾ| ಬಾಬಾ ಸಾಹೇಬ ಅಂಬೇಡ್ಕರ್‌ರ ಅನುಯಾಯಿಗಳು,ಬುದ್ಧಿ ಜೀವಿಗಳು,ಪ್ರಗತಿಪರರು, ಮಹಿಳೆಯರು,ವಿದ್ಯಾರ್ಥಿಗಳು ಮತ್ತು ರಾಯಚೂರು ಜಿಲ್ಲೆಯ ಸಾರ್ವಜನಿಕರು ಬಂದು ಕಾರ್ಯಕ್ರಮವನ್ನು ಯಸಸ್ವಿಗೊಳಿಸಬೇಕಾಗಿ ಛಲವಾದಿ ಮಹಾಸಭಾದ ಗೌರವಾಧ್ಯಕ್ಷ ನರಸಪ್ಪ ಕಟ್ಟೀಮನಿ ವಿನಂತಿಸಿಕೊಂಡರು.
ಪೂಜ್ಯ ಬಂತೆ ನ್ಯಾನರಕ್ಕೀತ ಥೇರಾ, ನಿರ್ದೇಶಕರು ಬಿಕ್ಕು ಪ್ರಶಿಕ್ಷಣ ವಿಭಾಗ, ಮಹಾಬೋಧಿ ಸೊಸೈಟಿ ಬೆಂಗಳೂರು ಇವರು ಭಗವಾನ್ ಬುದ್ಧರ ಮೂರ್ತಿ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸುವರು. ಪೂಜ್ಯ ಭಂತೆ ಧಮ್ಮತಿಸ್ಸಾ ಧರ್ಮ ಪ್ರವಚನ (ಕನ್ನಡದಲ್ಲಿ) ನೀಡುವರು. ಉಪಸ್ಥಿತ ಬಿಕ್ಕು ಸಂಘ – ಪೂಜ್ಯ ಬಂತೆ ನ್ಯಾನಾನಂದ ಮಹಾಬೋಧಿ ಸೊಸೈಟಿ ಬೆಂಗಳೂರು, ಪೂಜ್ಯಭಂತೆ ದಮ್ಯಾನಂದ ಫೆರೋ ದಮ್ಮ ದರ್ಶನ ಭೂಮಿ ವೈಶಾಲಿ ನಗರ ಅಣದೂರ ಬೀದರ, ಪೂಜ್ಯಭಂತೆ ವರಜೋತಿ ದಮ್ಮ ದರ್ಶನ ಭೂಮಿ ವೈಶಾಲಿ ನಗರ ಅಣದೂರ ಬೀದರ, ಪೂಜ್ಯಭಂತೆ ದಮ್ಮದೀಪ ಬೋಧಿಸತ್ವ ಬುದ್ಧವಿಹಾರ ಯಾಕತಪೂರ ಬೀದರ, ಡಾ. ಅಪ್ಪಗೆರೆ ಸೋಮಶೇಖರ, ಪ್ರಾಧ್ಯಾಪಕರು ಕನ್ನಡ ವಿಭಾಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಇವರು ಭಗವಾನ್ ಬುದ್ಧರ ಸಂದೇಶ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ರಾಜಾ ಅಮರೇಶ್ವರ ನಾಯಕ ಸಂಸದರು ರಾಯಚೂರು,ಡಾ. ಎಸ್ ಶಿವರಾಜ ಪಾಟೀಲ್, ಶಾಸಕರು ರಾಯಚೂರು ನಗರ, ಬಸನಗೌಡ ದದ್ದಲ್ ಶಾಸಕರು ರಾಯಚೂರು ಗ್ರಾಮೀಣ, ಶರಣಪ್ಪ ಮಟ್ಟೂರು ಮಾಜಿ ವಿಧಾನ ಪರಿಷತ್ ಸದಸ್ಯರು, ವಿನಯಕುಮಾರ ಅಧ್ಯಕ್ಷರು, ನಗರಸಭೆ ರಾಯಚೂರು, ಬುದ್ಧಘೋಷ ದೇವೇಂದ್ರ ಹೆಗ್ಗಡೆ ಬುದ್ಧ ಚಿಂತಕರು ಶಹಾಪೂರು,ಡಾ.ಆರ್. ಮೋಹನರಾಜ್ ರಾಜ್ಯ ಸಂಚಾಲಕರು ಡಿ.ಎಸ್.ಎಸ್ ಬೆಂಗಳೂರು ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಾಲೂಕು ಪ್ರಧಾನ ಕಾರ್ಯದರ್ಶಿ ಶರಣಬಸವ ಮಲ್ಲಾಪೂರು ಪತ್ರಿಕೆ ಹೇಳಿಕೆ ನೀಡಿದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030