ಆರೋಗ್ಯವಂತ ಸಮಾಜ ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶುದ್ಧ ಪರಿಸರವನ್ನು ಕಾಪಾಡಲು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಘುರಾಮ್…!!!

Listen to this article

ಹೊಳಲ್ಕೆರೆ : ಆರೋಗ್ಯವಂತ ಸಮಾಜ ಕಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶುದ್ಧ ಪರಿಸರವನ್ನು ಕಾಪಾಡಲು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ರಘುರಾಮ್ ತಿಳಿಸಿದರು.
ಅವರು ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಪುರಸಭೆಯ ಸಹಯೋಗದಲ್ಲಿ ಕೈಗೊಂಡಿದ್ದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವು ನಿತ್ಯವೂ ಪರಿಸರವನ್ನು ಸಂರಕ್ಷಣೆ ಮಾಡಬೇಕು. ಪರಿಸರವನ್ನು ಸಂರಕ್ಷಣೆ ಮಾಡಿದ್ದಲ್ಲಿ ಮಾತ್ರ ಹೆಚ್ಚು ಸುರಕ್ಷೀತವಾಗಿರಲು ಸಾಧ್ಯ. ಮನೆಯ ಸುತ್ತಮುತ್ತ ಗಿಡಮರಗಳನ್ನು ಬೆಳೆಸಬೇಕೇಂದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಪಿ
ಉಮೇಶ್ ಮಾತನಾಡಿ, ನಾವು ಇರುವ ಜಾಗ, ಬದುಕುವ ಪರಿಸರ ಸ್ವಚ್ಛತೆ ಇರಬೇಕು. ಎಲ್ಲವನ್ನೂ ಸರಕಾರದ ವ್ಯವಸ್ಥೆಗೆ ಅವಲಂಬಿಸಿದೆ ನೆಲ, ಜಲ,ಪ್ರಕೃತಿಯ ಸಂರಕ್ಷಣೆ ನಮ್ಮ ಕರ್ತವ್ಯ ಅಗಬೇಕೇಂದರು.

ಅಪರ ಸಿವಿಲ್ ನ್ಯಾಯಾಧೀಶರಾದ ನಿರುಪಮಾ ರೇಣುಕಪ್ಪ ಡಂಗ ಮಾತನಾಡಿ, ಪ್ರಕೃತಿ ಸಾಕಷ್ಟು ವಿಸ್ಮಯಕಾರಿ. ಅಲ್ಲಿನ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಜತೆ ಸಂರಕ್ಷಣೆ ನಮ್ಮ ಕರ್ತವ್ಯ. ನಿತ್ಯವೂ ಪೂಜಿಸುವ ಪ್ರಕೃತಿಯಲ್ಲಿ ನೀರು, ಗಾಳಿ, ಬೆಳಕು ಎಲ್ಲವೂ ಸಿಕ್ಕಲಿದೆ. ಅವೀಲ್ಲದೆ ಬದುಕಿಲ್ಲ ಎಂದರು.

ಸರಕಾರಿ ಅಭಿಯೋಜಕ ಜಿ.ಎಚ್.ಶಿವಕುಮಾರ್, ವಕೀಲ ಎಸ್.ವೇದಮೂರ್ತಿ, ಶಿರಸ್ಥೇದಾರ್ ಅನಿತಾ, ಪುರಸಭೆ ಅರೋಗ್ಯಾಧಿಕಾರಿ ಶೌಕತ್, ಪ್ರಶಾಂತ್, ಕಿಶೋರ್, ಪೌರಕಾರ್ಮಿಕರು, ನ್ಯಾಯಾಲಯದ ಸಿಬ್ಬಂದಿ ಸ್ವಚ್ಛತೆ ಯಲ್ಲಿ ಪಾಲ್ಗೊಂಡಿದ್ದರು.

ನ್ಯಾಯಾಲಯದ ಸಂಕೀರ್ಣದ ಸುತ್ತಮುತ್ತಲಿನ ಪ್ರದೇಶದಲ್ಲಿ ಬೇಳೆದ ಗೀಡ, ಚರಂಡಿ, ರಸ್ತೆ ಸ್ವಚ್ಛ ಗೊಳಿಸಿದರು.

ಪೋಟೋ ಹೆಚ್.ಎಲ್.ಕೆ. ಹೊಳಲ್ಕೆರೆ ನ್ಯಾಯಾಲಯದ ಸಂಕೀರ್ಣದಲ್ಲಿ ಸ್ವಚ್ಛತಾ ಅದೋಂಲನಕ್ಕೆ ಚಾಲನೆ ನೀಡಿದ, ನ್ಯಾಯಾಧೀಶರಾದ ರಘುರಾಮ್, ಎಂ.ಪಿ.ಉಮೇಶ್, ಅನುಪಮ ರೇಣುಕಪ್ಪ ಹಾಗೂ ಇನ್ನಿತರರು ಇದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend