ಹೊಳಲ್ಕೆರೆ ತಾಲೂಕಿನಲ್ಲಿ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಶಾಸಕರ ಸಮ್ಮತಿ…!!!

Listen to this article

ಹೊಳಲ್ಕೆರೆ ತಾಲೂಕಿನಲ್ಲಿ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಶಾಸಕರ ಸಮ್ಮತಿ.
ಕನ್ನಡ ನಾಡು ನುಡಿ ಕಟ್ಟಲು ಜಾತಿ ಧರ್ಮ ಬೇದಭಾವಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಎಲ್ಲರೂ ಒಂದಾಗಿ 17ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸೋಣ ಎಂದು ಡಾ!! ಎಂ ಚಂದ್ರಪ್ಪ ಅಭಿಪ್ರಾಯ.
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾಲೂಕನ್ನು ಸಾಹಿತ್ಯ ಪರಿಷತ್ತು ಹೊಳಲ್ಕೆರೆ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಕುರಿತು ಮಾತನಾಡಿದರು
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ ಸಹ ನಮ್ಮ ನಾಡು ನುಡಿ ಸಂಸ್ಕೃತಿ ಆಚಾರ ವಿಚಾರಗಳನ್ನು ಬಿಡಬಾರದು ಗ್ರಾಮೀಣ ಭಾಗದಿಂದ ಬಂದಂತ ನಾವುಗಳಲ್ಲ ಕನ್ನಡ ಕಟ್ಟುವ ಸಾಹಿತ್ಯ ಬೆಳೆಸುವ ಕಾರ್ಯವನ್ನು ಪೋಷಿಸುವ ಮೂಲಕ ಭವಿಷ್ಯದ ಜನಾಂಗಕ್ಕೆ ಉಳಿಸುವ ಕಾರ್ಯ ಮಾಡಬೇಕು ನನ್ನ ಕಡೆಯಿಂದ ಅದ್ದೂರಿ ಜಿಲ್ಲಾ ಸಮ್ಮೇಳನ ನಡೆಸಲು ಸಹಕಾರ ನೀಡುತ್ತೇನೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆಎಂ ಶಿವಸ್ವಾಮಿ ಮಾತನಾಡುತ್ತಾ ಜಿಲ್ಲಾ ಜನಪ್ರತಿನಿಧಿಗಳು ಸಾಹಿತಿಗಳು ಚಿಂತಕರ ಅಜೀವ ಸದಸ್ಯರು ಕನ್ನಡ ಮನಸುಗಳ ಸಹಕಾರ ಪಡೆದು ಹೊಳಲ್ಕೆರೆ ಪಟ್ಟಣದಲ್ಲಿ ಡಿಸೆಂಬರ್ ಮಾಹೆಯ ಕೊನೆಯ ವಾರದಲ್ಲಿ ಹೊಳಲ್ಕೆರೆ ಪಟ್ಟಣದ ಸಂವಿಧಾನ ಸೌದದಲ್ಲಿ ಸಮ್ಮೇಳನವನ್ನು ಆಯೋಜನೆ ಮಾಡಲಾಗುವುದು ಇದಕ್ಕೆ ಹಲವಾರು ಸಮಿತಿಗಳನ್ನ ಜಿಲ್ಲಾ ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ ನೇಮಕ ಮಾಡಲಾಗುವುದು ಸ್ಥಳೀಯವಾಗಿ ಕವಿ ಸಾಹಿತಿಗಳಿಗೆ ಕನ್ನಡ ಮನಸುಗಳಿಗೆ ಆದ್ಯತೆ ನೀಡಲಾಗುವುದು ಹೆಚ್ಚಿನದಾಗಿ ತಾಲೂಕಿನ ಕನ್ನಡ ಪರ ಸಂಘಟನೆ ವಿವಿಧ ಸಂಘ-ಸಂಸ್ಥೆಗಳು ನೌಕರರ ಸಂಘ, ಶಿಕ್ಷಕರ ಸಂಘ, ಅಧಿಕಾರಿ ವರ್ಗಗಳ ಜನಪ್ರತಿನಿಧಿಗಳ ಮಾಧ್ಯಮಗಳ ಪ್ರತಿನಿಧಿಗಳ ಸಹಕಾರ ಪಡೆಯಲು ಹಂತ ಹಂತ ವಾಗಿ ಸಭೆಗಳನ್ನು ಆಯೋಜನೆ ಮಾಡಿ ಸಮ್ಮೇಳನವನ್ನು ಯಶಸ್ವಿಗೊಳಿಸಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯವಾಗಿರುತ್ತದೆ ಎಂದು ತಿಳಿಸಿದರು
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎನ್,ಶಿವಮೂರ್ತಿ ಮಾತನಾಡುತ್ತಾ 17ನೇ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಅವಕಾಶ ಕಲ್ಪಿಸಿದ್ದಕ್ಕೆ ಜಿಲ್ಲಾ ಅಧ್ಯಕ್ಷರಿಗೆ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿಯವರಿಗೆ ಕೃತಜ್ಞತೆ ಸಲ್ಲಿಸುತ್ತಾ ನಮ್ಮ ತಾಲೂಕಿನಲ್ಲಿ ಸಮ್ಮೇಳನ ನಡೆಸುವುದು ನಮ್ಮ ನಿಮ್ಮೆಲ್ಲರ ಸೌಭಾಗ್ಯವೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಕೆಲವು ಕನ್ನಡ ಮನಸುಗಳು ತಮ್ಮ ಕೈಲಾದ ಧನ ಸಹಾಯವನ್ನು ನೀಡಲು ಸಭೆಯಲ್ಲಿ ಘೋಷಿಸಿದರು ಈ ಸಂದರ್ಭದಲ್ಲಿ ಉಪಸ್ಥಿರಿದವರು ಕಸಾಪ ಮಾಜಿ ಅಧ್ಯಕ್ಷರಾದ ನಾಗರಾಜರಾವ್,ಯತಿರಾಜು, ಕನ್ನಡ ಸಿರಿ ಪ್ರಶಸ್ತಿ ವಿಜೇತ, ತರಲು ನೌಕರ ಸಂಘದ ಅಧ್ಯಕ್ಷರಾದ ಜಿ. ಎ.ದೇವರಾಜಯ್ಯ, ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಆರ್ ಎಸ್,ತಿಮ್ಮಯ್ಯ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಉಮೇಶ್, ಶಿಕ್ಷಕರ ಸಂಘದ ಅಧ್ಯಕ್ಷರಾದ ಎನ್ ನಾಗೇಶಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ವೆಂಕಟೇಶ್, ನಿವೃತ್ತ ನೌಕರ ಸಂಘದ ಕಾರ್ಯದರ್ಶಿಯಾದ ಡಿ ಗೋಪಾಲಪ್ಪ, ಆರೋಗ್ಯ ಇಲಾಖೆ ಸಂಘದ ಅಧ್ಯಕ್ಷರಾದ ರಂಗನಾಥ್, ಕರವೇ ಅಧ್ಯಕ್ಷರಾದ ಪಿ,ಹನುಮಂತಪ್ಪ, ಬಿ ದುರ್ಗ ಹೋಬಳಿ ಘಟಕದ ಅಧ್ಯಕ್ಷರಾದ ನಾಗರಾಜಪ್ಪ, ಕಸಬಾ ಹೋಬಳಿ ಆರ್ ಅಣ್ಣಪ್ಪ, ತಾಳ್ಯ ಹೋಬಳಿ ಬಿ,ಜಿ ಹಳ್ಳಿ ವೆಂಕಟೇಶ್, ರಾಮಗಿರಿ ಹೋಬಳಿ ದೇವರಾಜು, ಗೌರವ ಕಾರ್ಯಗಳಾದ ಎಂ.ಡಿ ರಾಜು,ಆರ್ ರುದ್ರಪ್ಪ,ಮಲ್ಲೇಶಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಎಚ್ ಪ್ರಭಾಕರ್, ರುದ್ರಸ್ವಾಮಿ, ಗ್ರಾಮ ಪಂಚಾಯತಿ ಸದಸ್ಯರುಗಳಾದ ಸಿದ್ದೇಶ್ ಯಾದವ್, ತಿಮ್ಮೆಶ್, ಲೋಕೇಶ್, ಕೋಶ ಅಧ್ಯಕ್ಷರಾದ ಎ. ಓ, ರಾಜು, ಮಂಜುನಾಥ್, ಮೋಹನ್, ಹನುಮಂತನಾಯ್ಕ್,ಪಾವಗಡ ಶಿವಣ್ಣ, ಜಾಜುರು ತಿಪ್ಪೇಸ್ವಾಮಿ, ಮನಮೋಹನ್, ಅಶೋಕ್, ಪತ್ರಿಕಾ ಮಾಧ್ಯಮದ ಏ ಚಿತ್ತಪ್ಪ, ಸುರೇಶ್, ನಾಗರಾಜ್, ಜಿಲ್ಲಾ ಕೋಶ ಅಧ್ಯಕ್ಷರಾದ ಚೌಳು ರು ಲೋಕೇಶ್, ಜಿಲ್ಲಾಸಂಘಟನಾ ಕಾರ್ಯದರ್ಶಿಯಾದ ಸಿ,ಧನಂಜಯ್, ವಾಗ್ದೇವಿ ಶಾಲೆಯ ಕನ್ನಡ ಭಾಷೆ ಶಿಕ್ಷಕರಾದ ಪಾರ್ಥಸಾರಥಿ, ಮುಖ್ಯ ಶಿಕ್ಷಕರಾದ ಕರಿಸಿದ್ದಪ್ಪ,ಇನ್ನು  ಮುಂತಾದವರು ಇದ್ದರು…

Listen to this article

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend